Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Relationship | ಕುಳ್ಳಗಿರುವ ಹುಡುಗಿಯರೇ ಯಾಕೆ ಹುಡುಗರಿಗೆ ಹೆಚ್ಚು ಇಷ್ಟವಾಗ್ತಾರೆ?
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship | ಕುಳ್ಳಗಿರುವ ಹುಡುಗಿಯರೇ ಯಾಕೆ ಹುಡುಗರಿಗೆ ಹೆಚ್ಚು ಇಷ್ಟವಾಗ್ತಾರೆ?

Share
2 Min Read
SHARE

newsics.com

ಪ್ರೀತಿ ಚಿಗುರಲು ಕಾರಣ ಬೇಕಿಲ್ಲ. ಎರಡು ಪರಿಶುದ್ಧ ಮನಸ್ಸುಗಳು ಇದ್ದರೆ ಸಾಕು.

ಪ್ರತಿಯೊಬ್ಬರಿಗೂ ತಾನು ಪ್ರೀತಿಸುವ ಹುಡುಗ ಅಥವಾ ಹುಡುಗಿ ಹೀಗೆಯೇ ಇರಬೇಕು ಎನ್ನುವ ಕಲ್ಪನೆಯಿರುತ್ತದೆ. ಆದರೆ ಹೆಚ್ಚಿನ ಹುಡುಗರು ಕುಳ್ಳಗಿರುವ ಹುಡುಗಿ ಕಂಡ ಕೂಡಲೇ ಇಷ್ಟಪಡುತ್ತಾರಂತೆ.

ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಕ್ಯೂಟ್ ಆಗಿರುತ್ತಾರೆ. ಅವರು ಒಂದೇ ಒಂದು ಕ್ಷಣದಲ್ಲೇ ಎಲ್ಲರನ್ನೂ ಸೆಳೆಯುತ್ತಾರೆ ಎನ್ನುವ ಕಾರಣಕ್ಕೆ ಕುಳ್ಳಗೆ ಇರುವ ಹುಡುಗಿಯರನ್ನೇ ಹುಡುಗರು ಹೆಚ್ಚು ಇಷ್ಟಪಡುತ್ತಾರೆ.

ಎತ್ತರವಿರುವ ಹುಡುಗರು ಜತೆಯಲ್ಲಿದ್ದರೆ ಕುಳ್ಳಗಿರುವ ಹುಡುಗಿಯರಿಗೆ ಭದ್ರತೆಯ ಭಾವನೆಯಿರುತ್ತದೆ. ತಮ್ಮ ಪ್ರೇಮಿಯನ್ನು ಚೆನ್ನಾಗಿ ನೋಡಬೇಕು. ಆಕೆಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಬೇಕು ಎನ್ನುವುದು ಹುಡುಗರಲ್ಲಿರುತ್ತದೆ. ಈ ಭಾವನೆಯಿಂದ ಸಂಬಂಧವು ಗಟ್ಟಿಯಾಗಿರುವ ಕಾರಣ ಕುಳ್ಳಗಿರುವ ಹುಡುಗಿಯನ್ನೇ ಇಷ್ಟ ಪಡುತ್ತಾರೆ.

ಕುಳ್ಳಗಿರುವ ಹುಡುಗಿಯರು ನೋಡುವುದಕ್ಕೆ ಎಷ್ಟು ಮುದ್ದಾಗಿ ಕಾಣಿಸುತ್ತಾರೆಯೋ, ತಬ್ಬಿಕೊಂಡಾಗ ಕಂಫರ್ಟ್‌ ಫೀಲ್‌ ಸಿಗುತ್ತದೆಯಂತೆ. ಕುಳ್ಳಗೆ ಇರುವ ಹುಡುಗಿಯರನ್ನು ಅಪ್ಪಿ ಎದೆಗೊತ್ತಿಕೊಳ್ಳಲು ಕಂಫರ್ಟ್‌ ಆಗುವ ಕಾರಣ ಕುಳ್ಳಿ ಹುಡುಗಿಯರು ಹುಡುಗರಿಗೆ ಹೆಚ್ಚು ಇಷ್ಟವಾಗುತ್ತಾರೆ.

ಕುಳ್ಳಗೆ ಅಥವಾ ಎತ್ತರ ಕಡಿಮೆಯಿರುವ ಕಾರಣ ಈ ಹುಡುಗಿಯರು ತಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣಿಸುತ್ತಾರೆ. ಈ ಕಾರಣದಿಂದಲೇ ಹುಡುಗರು ಈ ಕುಳ್ಳಿ ಹುಡುಗಿಯರತ್ತ ಪ್ರೀತಿ ತೋರುತ್ತಾರೆ.

ಸಾಮಾನ್ಯವಾಗಿ ಕುಳ್ಳಗಿರುವ ಹುಡುಗಿಯರು ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದಿರುತ್ತಾರೆ. ತಮ್ಮ ಚುರುಕಾದ ಗುಣದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆತ್ಮವಿಶ್ವಾಸವು ಹೆಚ್ಚಿರುವ ಕಾರಣ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಈ ಗುಣದಿಂದಲೇ ಕುಬ್ಜ ಹುಡುಗಿಯರು ಹುಡುಗರಿಗೆ ಇಷ್ಟವಾಗುತ್ತಾರೆ.

ಎತ್ತರವಿರುವ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗೆ ಇರುವ ಹುಡುಗಿಯರು ಪ್ರೀತಿಯ ವಿಷಯದಲ್ಲಿ ಹಾಗೂ ಸಂಬಂಧದಲ್ಲಿ ಹೆಚ್ಚು ಗಂಭೀರವಾಗಿರುತ್ತಾರೆ. ತನ್ನ ಪ್ರೇಮಿಯನ್ನು ಹೆಚ್ಚು ಕಾಳಜಿ ಮಾಡುತ್ತಾರೆ. ಈ ಗುಣವೇ ಪುರುಷರು ಈ ಹುಡುಗಿಯರತ್ತ ಆಕರ್ಷಿತರಾಗುವಂತೆ ಮಾಡುತ್ತದೆ.

ಉದ್ದನೆಯ ಹುಡುಗಿಯಾರಿಗೆ ಹೋಲಿಸಿದರೆ ಕುಳ್ಳಗಿರುವ ಹುಡುಗಿಯರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ. ತಮ್ಮ ಸಂಗಾತಿಯ ಜತೆಗೆ ಹೆಚ್ಚು ಸಂತೋಷವಾಗಿರಲು ಬಯಸುತ್ತಾರೆ. ಅವರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಅದರೊಂದಿಗೆ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ರೋಮ್ಯಾಂಟಿಕ್ ಆಗಿಯೇ ವ್ಯಕ್ತಪಡಿಸುತ್ತಾರೆ. ಕುಬ್ಜ ಹುಡುಗಿಯರ ಈ ಗುಣವೇ ಪುರುಷರನ್ನು ಸೆಳೆಯಲು ಮುಖ್ಯ ಕಾರಣ ಎನ್ನಲಾಗಿದೆ.

Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!

TAGGED:Why do boys prefer short girls?
Share This Article
Facebook Twitter Copy Link Print
Previous Article Abuja tragedy | ದೋಣಿ ಮುಳುಗಿ 30ಕ್ಕೂ ಹೆಚ್ಚು ಮಂದಿ ಸಾವು, 100 ಜನ ನಾಪತ್ತೆ
Next Article Cult cinema | ಸಚಿವ ಜಮೀರ್ ಪುತ್ರನ ಸಿನಿಮಾದ ಡ್ರೋನ್ ತಂತ್ರಜ್ಞ ಆತ್ಮ*ಹತ್ಯೆ ಯತ್ನ, ಕಾರಣ ಏನು?

Popular Posts

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

You Might Also Like

ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?