newsics.com
ಅಬುಜಾ(ನೈಜೀರಿಯಾ): ಮಧ್ಯ ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 30ಕ್ಕೂ ಜನ ಮೃತಪಟ್ಟಿದ್ದಾರೆ. ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ಮಧ್ಯ ಕೋಗಿ ರಾಜ್ಯದ ಮಿಸ್ಸಾ ಸಮುದಾಯದ ಬಹುತೇಕ ವ್ಯಾಪಾರಿಗಳನ್ನು ಹೊತ್ತ ದೋಣಿ ನೆರೆಯ ನೈಜರ್ ರಾಜ್ಯದ ವಾರದ ಮಾರುಕಟ್ಟೆಗೆ ತೆರಳುತ್ತಿದ್ದಾಗ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಒಳನಾಡು ಜಲಮಾರ್ಗ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಈವರೆಗೆ 27 ಶವಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ದೋಣಿಯಲ್ಲಿ ಸುಮಾರು 200 ಪ್ರಯಾಣಿಕರು ಇದ್ದರು. ದೋಣಿ ಮುಳುಗಲು ಓವರ್‌ಲೋಡ್ ಕಾರಣ ಎಂದು ಹೇಳಲಾಗಿದೆ.
ನೈಜೀರಿಯಾದಲ್ಲಿ ಉತ್ತಮ ರಸ್ತೆಗಳ ಕೊರತೆ ಇದೆ. ಅನೇಕರಿಗೆ ಪರ್ಯಾಯ ಮಾರ್ಗಗಳಿಲ್ಲ. ಹೀಗಾಗಿ ಜಲಸಾರಿಗೆ ದೋಣಿಗಳಲ್ಲಿ ಓವರ್‌ಲೋಡ್ ಮಾಡುವುದು ಸಾಮಾನ್ಯವಾಗಿದೆ.
Elon Musk | ಮಂಗಳಗ್ರಹದ ಪ್ರಯಾಣ ಸಮಯ 90 ದಿನಗಳಿಗೆ ಇಳಿಸಲಿರುವ ಸ್ಟಾರ್‌ಶಿಪ್!