newsics.com
ಯಾವತ್ತಾದರೂ ನೀವು ಮೃತಪಟ್ಟವರ ಜತೆ ಮಾತಾಡಿದ್ದೀರಾ? ಉಸಿರಾಟ ನಿಲ್ಲಿಸಿದವರ ಜತೆ ಮಾತಾಡೋದಾದರೂ ಹೇಗೆ? ನಿಮ್ಮ ಪ್ರಶ್ನೆ ಸಹಜವೇ. ಆದರೆ ಇಂದಿನ ತಂತ್ರಜ್ಞಾನದಲ್ಲಿ ಇದೂ ಸಾಧ್ಯವೆ. ಹೀಗಾಗಿ, ಕೊನೆಯುಸಿರೆಳೆದವರ ಜತೆ ಮಾತನಾಡುವುದೆಂದರೆ ತಮಾಷೆಯ ವಿಷಯವಲ್ಲ.
ಹೌದು, ಈಗ ನೀವು ನಿಮ್ಮಿಂದ ದೂರವಾದ ಅಂದರೆ ಇಹಲೋಕ ತ್ಯಜಿಸಿದ ನಿಮ್ಮ ಆತ್ಮೀಯರು ಅಥವಾ ಸಂಬಂಧಿಕರ ಬಳಿ ಮಾತನಾಡಬಹುದು.
ಇತ್ತೀಚಿನ ವರ್ಷಗಳಲ್ಲಿ ಹಲವು ಚೀನೀ ಕಂಪನಿಗಳು ಸತ್ತವರ ಜತೆ ಮಾತನಾಡುವ ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿವೆ. ಕೃತಕ ಬುದ್ಧಿಮತ್ತೆ(ಎಐ) ಮೂಲಕ ಮೃತರೊಂದಿಗಿನ ಸಂಭಾಷಣೆಯನ್ನು ದೃಢಪಡಿಸಿದ್ದಾರೆ.
ಎಐ ಡೆಡ್ ಬಾಟ್ ಜತೆ ಅಂದರೆ ಇದು ಡಿಜಿಟಲ್ ತಂತ್ರಜ್ಞಾನ ಆಧಾರಿತವಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಕಾರ್ಯನಿರ್ವಹಿಸುವ ತಂತ್ರಜ್ಞಾನ. ಈ ತಂತ್ರಜ್ಞಾನದಲ್ಲಿ ನೀವು ನಿಮ್ಮ ಆತ್ಮೀಯರ ಅಥವಾ ನೀವು ಇಷ್ಟಪಡುವ ವ್ಯಕ್ತಿಗಳ ಫೋಟೋ, ಅವರ ಸಂಬಂಧಿತ ವಿಡಿಯೋ, ಆಡಿಯೋ ಕ್ಲಿಪ್ಗಳು ಇದ್ದರೆ ಅವುಗಳನ್ನು ಈ ಎಐ ಡೆಡ್ ಬಾಟ್ಗೆ ಸೇರಿಸಬಹುದು. ಕ್ಲಿಪ್ಗಳನ್ನು ಎಲೆಕ್ಟ್ರಾನಿಕ್ ಪರಿಕರದಲ್ಲಿ ಅಳವಡಿಸಬೇಕು.
ಹೀಗಾಗಿಯೇ, ಸತ್ತು ಹೋದ ನಮ್ಮ ಆತ್ಮೀಯರ ಜತೆ ಮಾತನಾಡಲು ಇನ್ನು ಎಲ್ಲೂ ಹೋಗಬೇಕಿಲ್ಲ. ಅವರನ್ನು ಭೂಮಿಗೇ ಕರೆಯಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದುವೇ ಎಐ ಡೆಡ್ ಬಾಟ್ ತಂತ್ರಜ್ಞಾನ. ಇದನ್ನು ಮೃತರ ಜತೆಗಿನ ಸಂಭಾಷಣೆಗೆಂದೇ ತಯಾರಿಸಲಾದ ತಂತ್ರಜ್ಞಾನ.
ಈಗ ನಾವು ಮನೆಗಳಲ್ಲಿ ಅಲೆಕ್ಸಾ ಎಂಬ ಎಐ ಆಧಾರಿತ ಯಂತ್ರವನ್ನು ಬಳಸುತ್ತೇವೆ. ಅದೇ ರೀತಿಯಲ್ಲೇ ನಾವು ಮೃತಪಟ್ಟ ನಮ್ಮವರ ಜತೆ ಮಾತನಾಡಬಹುದು! ನಾವು ಕೇಳುವ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆಯಬಹುದು!
ಇನ್ನು ನಿಮ್ಮ ಆತ್ಮೀಯರ ಡೇಟಾ ಇರುವಂತಹ ಒಂದು ಚಿಪ್ ಅನ್ನು ರೋಬೋಟ್ಗಳಲ್ಲಿ ಅಳವಡಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಯಾವುದೇ ಸಂಬಂಧಿಕರು ನಿಮ್ಮ ಜತೆಯಲ್ಲೇ ಮನೆಯಲ್ಲೇ ಇದ್ದಾರೆಂಬ ಅನುಭವ ನಿಮ್ಮಲ್ಲಿ ಉಂಟಾಗುತ್ತದೆ.
ಈಗಾಗಲೇ ಪ್ರಾಯೋಗಿಕವಾಗಿ ಚೀನಾದಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇದು ಹೆಚ್ಚು ಜನಪ್ರಿಯವಾಗುತ್ತಿದೆ.
ಆದರೆ, ಎಐ ಡೆಡ್ ಬಾಟ್ ಕುರಿತು ತಜ್ಞರು ಕೆಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಯಾದ ರಿತಿಯಲ್ಲಿ ಬಳಸಬೇಕು ಎಂದು ಎಚ್ಚರಿಸಿದ್ದಾರೆ.
ಸರಿಯಾದ ಮಾನದಂಡಗಳಲ್ಲಿ ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ದುರುಪಯೋಗಕ್ಕೆ ಒಳಗಾಗುತ್ತದೆ. ಓಸ್ನಾಬ್ರೂಕ್ ವಿಶ್ವವಿದ್ಯಾನಿಲಯದ ಎಥಿಕ್ಸ್ ಆಫ್ ಅಲ್ ಸಂಶೋಧನಾ ಗುಂಪಿನ ಸಂಶೋಧನಾ ಸಹಾಯಕಿ ಮತ್ತು ಪಿಎಚ್ಡಿ ವಿದ್ಯಾರ್ಥಿ ನೋರಾ ಫ್ರೇಯಾ ಲಿಂಡೆಮನ್, ಡೆತ್ಬಾಟ್ಗಳ ನೈತಿಕತೆಯ ಕುರಿತು ಒಂದು ತುಣುಕಿನಲ್ಲಿ ಬರೆದಿದ್ದಾರೆ.
ಎಐ ಡೆಡ್ ಬಾಟ್ಗಳು ನಿಮಗೆ ಮತ್ತು ಮನಸ್ಸಿಗೆ ಸ್ವಲ್ಪ ಸಾಂತ್ವನ ನೀಡಬಹುದಾದರೂ, ಅವು ನಿಮ್ಮ ದುಃಖದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ನೋರಾ ಹೇಳಿದ್ದಾರೆ.
ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?