newsics.com
ನ್ಯೂಸಿಕ್ಸ್.ಕಾಮ್
ಪ್ರತಿ ವ್ಯಕ್ತಿಯ ಸ್ವಭಾವ, ರೂಪ, ವ್ಯಕ್ತಿತ್ವ ಎಲ್ಲವೂ ಭಿನ್ನ ಭಿನ್ನ. ನೋಡಲೂ ಒಂದೇ ರೀತಿ ಇರುವುದಿಲ್ಲ. ಆದರೆ ತುಟಿ, ಕಣ್ಣು, ನಡೆ, ನುಡಿಯಿಂದಲೂ ವ್ಯಕ್ತಿ ಹೇಗೆಂದು ಹೇಳಬಹುದು.
ತುಟಿಯ ವಿಚಾರವೂ ಹಾಗೆಯೇ. ಎಲ್ಲರ ತುಟಿಗಳೂ ಒಂದೇ ರೀತಿ ಇರುವುದಿಲ್ಲ. ಒಬ್ಬರ ತುಟಿಯು ಸ್ವಲ್ಪ ದಪ್ಪ ಇದ್ದರೆ, ಮತ್ತೊಬ್ಬರಿಗೆ ಸಣ್ಣ, ಇನ್ನೊಬ್ಬರಿಗೆ ಉದ್ದ… ಹೀಗೆ ಬೇರೆ ಬೇರೆ ಆಕಾರದಲ್ಲಿರುತ್ತದೆ. ಆದರೆ ನಿಮ್ಮ ತುಟಿಯಾಕಾರದಿಂದಲೇ ನಿಮ್ಮ ವ್ಯಕ್ತಿತ್ವ ಹೇಗೆಂದು ತಿಳಿಯಬಹುದು. ಹೇಗೆಂಬುದರ ಮಾಹಿತಿ ಇಲ್ಲಿದೆ.

ಸಣ್ಣ ತುಟಿಯವರು ಚಿಂತನಶೀಲರು:
ಕೆಲವು ವ್ಯಕ್ತಿಗಳ ತುಟಿಗಳು ಸಣ್ಣದಾಗಿರುತ್ತವೆ. ಈ ವ್ಯಕ್ತಿಗಳು ತಮ್ಮ ವಿಷಯಗಳನ್ನು ಜನರಿಂದ ಮರೆಮಾಡುತ್ತಾರೆ. ಬಹಳ ಚಿಂತನಶೀಲವಾಗಿ ಮಾತನಾಡುತ್ತಾರೆ. ಅಲ್ಲದೇ ಈ ವ್ಯಕ್ತಿಗಳು ಅಷ್ಟು ಸುಲಭವಾಗಿ ಇತರರ ಮಾತುಗಳನ್ನು ನಂಬುವುದಿಲ್ಲ. ಒಬ್ಬರ ಮೇಲೆ ನಂಬಿಕೆ ಇಡಬೇಕಾದರೆ ಸಾವಿರ ಬಾರಿ ಯೋಚಿಸುತ್ತಾರೆ.
ದೊಡ್ಡ ತುಟಿಯವರು ಭಾರೀ ಬುದ್ಧಿವಂತರು:
ದೊಡ್ಡ ತುಟಿಗಳನ್ನು ಹೊಂದಿರುವವರು ಸಾಮಾನ್ಯವಾಗಿ ತುಂಬಾ ಬುದ್ಧಿವಂತರಾಗಿರುತ್ತಾರೆ. ಈ ಜನರು ಸುತ್ತ ಮುತ್ತಲಿನ ಜನರ ಮನಸ್ಸನ್ನು ಗೆಲ್ಲೋದು ಹೇಗೆ ಎನ್ನುವುದನ್ನು ತಿಳಿದಿರುತ್ತಾರೆ. ದೊಡ್ಡ ತುಟಿಗಳನ್ನು ಹೊಂದಿರುವವರು ಇತರರಿಂದ ಹೊಗಳಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.
ದಪ್ಪ ತುಟಿಯವರು ಪ್ರೇಮಿಗಳು:
ದಪ್ಪ ತುಟಿಗಳನ್ನು ಹೊಂದಿರುವವರನ್ನು ಪ್ರೇಮಿಗಳು ಎಂದು ಹೇಳಲಾಗುತ್ತದೆ. ಈ ಜನರು ಎಲ್ಲರ ಮಾತಿಗೂ ಬಹಳ ಬೇಗ ಮರುಳಾಗುತ್ತಾರೆ. ಈ ವ್ಯಕ್ತಿಗಳ ದೌರ್ಬಲ್ಯವೆಂದರೆ ಬೇಗ ಭ್ರಮನಿರಸನಗೊಳ್ಳುತ್ತಾರೆ. ಇದರಿಂದಲೇ ಈ ವ್ಯಕ್ತಿಗಳ ಮನಸ್ಸಿಗೆ ಘಾಸಿಯಾಗುವ ಸಾಧ್ಯತೆಯೇ ಹೆಚ್ಚು ಎನ್ನಬಹುದು.

ತೆಳು ತುಟಿಯವರಿಗೆ ಭಾರೀ ನಾಚಿಕೆ:
ತೆಳ್ಳಗಿನ ತುಟಿಗಳನ್ನು ಹೊಂದಿರುವ ವ್ಯಕ್ತಿ ಬೌದ್ಧಿಕವಾಗಿ ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ. ಸ್ವಾವಲಂಬಿಯಾಗಿರಲು ಬಯಸುವ ಈ ವ್ಯಕ್ತಿಗಳು ತಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ತೀರಾ ಕಡಿಮೆ. ಅಂತರ್ಮುಖಿಗಳಾಗಿದ್ದು, ನಾಚಿಕೆ ಸ್ವಭಾವದವರಾಗಿರುತ್ತಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆ ಪರಿಹರಿಸುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಪೂರ್ಣ ತುಟಿಯವರು ಆಶಾವಾದಿಗಳು:
ಪೂರ್ಣ ತುಟಿಯನ್ನು ಹೊಂದಿರುವವರು ಹೆಚ್ಚು ಪ್ರೀತಿಯುಳ್ಳವರು, ಆಶಾವಾದಿಗಳಾಗಿರುತ್ತಾರೆ. ಸ್ವಂತಕ್ಕಿಂತ ಹೆಚ್ಚಾಗಿ ಇತರರ ಅಗತ್ಯಗಳನ್ನು ಪೂರೈಸಲು ಒದ್ದಾಡುತ್ತಾರೆ. ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ಹಠಮಾರಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಅತಿಯಾಗಿ ಮಾತನಾಡುವವರಾಗಿದ್ದು, ಮಾತಿನ ಮೂಲಕವೇ ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಾರೆ. ಕೋಪ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುವ ಕಾರಣ, ತಕ್ಷಣವೇ ತಮ್ಮ ಸಿಟ್ಟನ್ನು ತೋರಿಸಿಬಿಡುತ್ತಾರೆ.
ಪೂರ್ಣ ಕೆಳ ತುಟಿಯವರು ಸದಾ ಸಂತೋಷಿಗಳು:
ತುಟಿಯೂ ಈ ರೀತಿಯ ಆಕಾರದಲ್ಲಿದ್ದರೆ ಅಂತಹ ಜನರು ಸಾಮಾನ್ಯವಾಗಿ ಸಂತೋಷವಾಗಿರುತ್ತಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸಲು, ಹೊಸ ಅನುಭವಗಳನ್ನು ಪಡೆಯಲು ಹಾಗೂ ಹೊಸ ಸ್ಥಳಗಳನ್ನು ತೆರಳಲು ಇಷ್ಟಪಡುತ್ತಾರೆ.
ಬಿಲ್ಲಿನಾಕಾರದ ತುಟಿಯವರದು ರೊಮ್ಯಾಂಟಿಕ್ ಮನಸ್ಥಿತಿ:
ತುಟಿಗಳ ಆಕಾರವು ಬಿಲ್ಲಿನಂತಿದ್ದರೆ ಅಂತಹ ಜನರು ಉತ್ತಮ ಸಂವಹನಕಾರರಾಗಿರುತ್ತಾರೆ. ಹೀಗಾಗಿ ತಮ್ಮ ಮಾತುಗಳಿಂದ ಜನರ ಮೇಲೆ ವಿಭಿನ್ನ ಪ್ರಭಾವ ಬೀರುತ್ತಾರೆ. ಈ ಜನರು ರೋಮ್ಯಾಂಟಿಕ್ ಆಗಿರುತ್ತಾರೆ. ಎಲ್ಲಿಯಾದರೂ ಸರಿಯೇ ತಮ್ಮದೇ ಆದ ಸ್ಥಾನಮಾನ ಗಳಿಸಿಕೊಳ್ಳುತ್ತಾರೆ.