newsics.com
ಆರೋಗ್ಯಕರ, ಕಾಂತಿಯುತ ತ್ವಚೆಯನ್ನು ಯಾರು ತಾನೇ ಇಷ್ಟಪಡುವುದಿಲ್ಲ. ಆದರೆ ಇಂದಿನ ಜೀವನಶೈಲಿ, ಆಹಾರ, ಮಾಲಿನ್ಯ ಹೀಗೇ ಹಲವಾರು ಅಂಶಗಳು ನಮ್ಮ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ, ನಮ್ಮಲ್ಲಿ ಅಕಾಲಿಕ ಚರ್ಮದ ವಯಸ್ಸಾದ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಇನ್ನು ಈ ಸಮಸ್ಯೆ ನಿವಾರಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಆ್ಯಂಟಿ ಏಜಿಂಗ್ ಉತ್ಪನ್ನಗಳು ಲಭ್ಯವಿವೆ. ಕೆಲವು ಮಹಿಳೆಯರು ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಫೇಶಿಯಲ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಹೀಗಿದ್ದರೂ ಉತ್ತಮ ಫಲಿತಾಂಶ ಸಿಗುವುದಿಲ್ಲ. ಆದರೆ ಆಯುರ್ವೇದ ಪ್ರಕಾರ ಕೆಲ ನೈಸರ್ಗಿಕ ಮನೆಮದ್ದುಗಳನ್ನು ಪಾಲಿಸಿದ್ರೆ ನೀವು ಯಂಗ್ ಆಗಿ ಕಾಣ್ತಿರಿ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಅನ್ನು ನಿರ್ಮಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸಹ ಕಾಪಾಡುತ್ತದೆ. ಮುಖ್ಯವಾಗಿ ಬಿಳಿ ಕೂದಲ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಇದಲ್ಲದೇ ಕರಿಬೇವಿನ ಎಲೆಗಳು ಕಬ್ಬಿಣ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ. ಕರಿಬೇವಿನ ಎಲೆಯು ಕೂದಲಿಗೆ ಬಣ್ಣವನ್ನು ನೀಡುವುದರೊಂದಿಗೆ, ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಡ್ರೈ ಫ್ರೂಟ್ಸ್ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಅಕಾಲಿಕ ವಯಸ್ಸಾದ ನೋಟವನ್ನು ತಡೆಯುತ್ತದೆ ಮತ್ತು ಮುಖದ ಮೇಲೆ ಸುಕ್ಕುಗಳು ಮತ್ತು ಮೊಡವೆಗಳನ್ನು ತಡೆಯುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ವಾಲ್ನಟ್ಸ್ನಲ್ಲಿ ಕಂಡು ಬರುತ್ತವೆ. ನೀವು ಇವುಗಳನ್ನು ನೀರಿನೊಂದಿಗೆ ತೆಗೆದುಕೊಳ್ಳಬಹುದು.
ನಿಂಬೆ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಎಂಬುವುದು ಎಲ್ಲರಿಗೂ ತಿಳಿದಿದೆ. ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ಹೀಗಾಗಿ ಬೆಳಗ್ಗೆ ಹೊತ್ತು ಬೆಚ್ಚಗಿನ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಹಸಿರು ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ ನಮ್ಮ ತ್ವಚೆಯ ಆರೋಗ್ಯವನ್ನು ಸಹ ಕಾಪಾಡುತ್ತದೆ. ಪಾಲಕ್ ಸೊಪ್ಪು, ಕೋಸುಗಡ್ಡೆ, ಕೊತ್ತಂಬರಿ ಸೊಪ್ಪು, ಪುದೀನಾ, ಮೆಂತ್ಯ ಇವೆಲ್ಲವೂ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.