newsics.com
ಮುಂಬೈ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಮೂವರು ಶಿಕ್ಷಕರು ಅಶ್ಲೀಲ ಫೋಟೋ, ವಿಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಎಲ್‌ಟಿ ಮಾರ್ಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿ ಶಿಕ್ಷಕರಾದ ಗೌತಮ್, ತರುಣ್ ರಾಜಪುರೋಹಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಶಿಕ್ಷಕ ಸತ್ಯರಾಜ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಇಬ್ಬರನ್ನು ಸೆಪ್ಟೆಂಬರ್ 30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
13 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಶಿಕ್ಷಕರು ತೋರಿಸಿದ್ದಾರೆ. ಮೂವರೂ ಶಿಕ್ಷಕರು ಹಲವು ಬಾರಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳ ಪ್ರವಾಹ: ಏರುತ್ತಲೇ ಇದೆ ಮೃತರ ಸಂಖ್ಯೆ, ಜನಜೀವನ ಅಸ್ತವ್ಯಸ್ತ, 3 ದಿನ ಶಾಲಾ ಕಾಲೇಜಿಗೆ ರಜೆ
ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಕಾಟ ಕೊಡುತ್ತಿರುವ ರೇಣುಕಾಸ್ವಾಮಿ ಆತ್ಮ!