newsic.com
ಬೆಂಗಳೂರು : ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಒಬ್ಬರೇ ಒದ್ದಾಡುತ್ತಿದ್ದು, ಹೈ ಸೆಕ್ಯುರಿಟಿ ಅಂದ್ರೆ ಅತಿಹೆಚ್ಚು ಭದ್ರತೆ ಇರುವ ಜೈಲಿನ ಕೋಣೆಯಲ್ಲಿ ಪರದಾಡುತ್ತಿದ್ದಾರೆ.
ನಟ ದರ್ಶನ್ ತೂಗುದೀಪ್ ಅವರು ರಾತ್ರಿ ಸಮಯದಲ್ಲಿ ಜೋರಾಗಿ ಕೂಗುತ್ತಿದ್ದು, ಅವರಿಗೆ ಜೈಲಿನ ಕೋಣೆಯಲ್ಲಿ ಸಮಸ್ಯೆ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಅವರಿಗೆ ಒಂದು ಸಂಪೂರ್ಣವಾದ ಕೋಣೆಯನ್ನೇ ನೀಡಲಾಗಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಒಂಟಿಯಾಗಿ ಜೈಲಿನ ಕೋಣೆಯ ಒಳಗೆ ಪರದಾಡುತ್ತಿದ್ದಾರೆ
ಬಳ್ಳಾರಿ ಜೈಲಿಗೆ ಹೋಗಿರುವ ನಟ ದರ್ಶನ್ ತೂಗುದೀಪ್ ಅವರಿಗೆ ರೇಣುಕಾಸ್ವಾಮಿ ಆತ್ಮದ ಕಾಟ ಶುರುವಾಗಿದೆ ಎಂಬ ಸುದ್ದಿ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಸುದ್ದಿ ಹಬ್ಬಿಸಲಾಗುತ್ತಿದೆ.
ಬಳ್ಳಾರಿ ಜೈಲಿನ ಅಧಿಕಾರಿಗಳೇ ಆಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ರಾತ್ರಿ ವೇಳೆ ಸಮಸ್ಯೆ ಆಗುತ್ತಿದ್ದು, ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ನಿದ್ದೆ ಮಾಡುತ್ತಿಲ್ಲ ಎನ್ನಲಾಗಿದ್ದು, ಹೀಗಾಗಿ ಅಭಿಮಾನಿಗಳಿಗೆ ಕೂಡ ಆತಂಕ ಶುರುವಾಗಿದೆ