ನೇಪಾಳ ಪ್ರವಾಹ: ಏರುತ್ತಲೇ ಇದೆ ಮೃತರ ಸಂಖ್ಯೆ, ಜನಜೀವನ ಅಸ್ತವ್ಯಸ್ತ, 3 ದಿನ ಶಾಲಾ ಕಾಲೇಜಿಗೆ ರಜೆ

newsics.com ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 161ಕ್ಕೆ ಏರಿಕೆಯಾಗಿದೆ. ಭಾನುವಾರದವರೆಗೆ 56 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ವಿಕೋಪ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳ ಕಾಲ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಶುಕ್ರವಾರದಿಂದ, ಪೂರ್ವ ಮತ್ತು ಮಧ್ಯ ನೇಪಾಳದ ದೊಡ್ಡ ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿವೆ. ಹಠಾತ್ ಪ್ರವಾಹವು ವಿವಿಧ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಕಠ್ಮಂಡು ಕಣಿವೆಯಲ್ಲಿ 37 ಜನರು ಸಾವನ್ನಪ್ಪಿದ್ದು, ಪ್ರವಾಹದಿಂದಾಗಿ ಸಂಚಾರ ಮತ್ತು ದೈನಂದಿನ ಜೀವನ ಸ್ಥಗಿತಗೊಂಡಿದೆ. ಕಳೆದ … Continue reading ನೇಪಾಳ ಪ್ರವಾಹ: ಏರುತ್ತಲೇ ಇದೆ ಮೃತರ ಸಂಖ್ಯೆ, ಜನಜೀವನ ಅಸ್ತವ್ಯಸ್ತ, 3 ದಿನ ಶಾಲಾ ಕಾಲೇಜಿಗೆ ರಜೆ