newsics.com
ತಿರುವನಂತಪುರಂ: ಮಲಯಾಳಂ ನಟ ಬಾಲಚಂದ್ರ ಮೆನನ್ ಅವರು ತಮ್ಮ ಕೋಣೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವಂತೆ ಒತ್ತಾಯಿಸಿದ್ದರು ಎಂದು ಮಲಯಾಳಂ ನಟಿ ಮಿನ್ನು ಮುನೀರ್ ಆರೋಪಿಸಿದ್ದಾರೆ.
ಆ ಕೋಣೆಯಲ್ಲಿ ಮೂವರು ಹುಡುಗಿಯರು ಮತ್ತು ಬಾಲಚಂದ್ರ ಇದ್ದರು. ಅವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇನ್ನು ಕೆಲವು ಹುಡುಗಿಯರು ನೋಡುತ್ತಿದ್ದರು. ಈ ವೇಳೆ ನಾನು ಕೋಣೆಯಿಂದ ಹೊರನಡೆಯಲು ಮುಂದಾದೆ. ಅವರು ನನ್ನನ್ನು ಕುಳಿತು ನೋಡಲೇಬೇಕು ಎಂದು ಒತ್ತಾಯಿಸಿದರು ಎಂದು ಮಿನ್ನು ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿಂದೆ, ನಟ ಜಯಸೂರ್ಯ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಸೇರಿದಂತೆ ಹಲವರು ದೈಹಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಿನ್ನು ಆರೋಪಿಸಿದ್ದರು.
ಆಗಸ್ಟ್ 19ರಂದು ಪ್ರಕಟಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ, ಮಲಯಾಳಂ ಚಲನಚಿತ್ರೋದ್ಯಮವನ್ನು ಸುಮಾರು 10 ರಿಂದ 15 ಪುರುಷ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ನಿಯಂತ್ರಿಸುತ್ತಾರೆ. ಅವರು ಉದ್ಯಮದ ಮೇಲೆ ಪ್ರಾಬಲ್ಯ ಹೊಂದಿದ್ದಾರೆ ಎಂದು ಹೇಳಿತ್ತು.
“ನಾನು ಸಾಕಷ್ಟು ಕನಸುಗಳನ್ನು ಹೊಂದಿದ್ದೆ. ಆದರೆ ಉದ್ಯಮವು ನನಗೆ ದುಃಸ್ವಪ್ನವಾಗಿ ಪರಿಣಮಿಸಿತು. ಹೇಮಾ ಸಮಿತಿ ವರದಿ ಉದ್ಯಮವನ್ನು ಮಾತ್ರವಲ್ಲ, ನಮ್ಮ ಸಮಾಜವನ್ನು ಶುದ್ಧೀಕರಿಸುತ್ತದೆ” ಎಂದು ಅವರು ಹೇಳಿದ್ದಾರೆ.
https://x.com/Muhamma93830141/status/1721454336289771843?t=08r201yJieEgUtGmudkSoA&s=19
ಜೈಲಿನಲ್ಲಿ ದರ್ಶನ್ ತೂಗುದೀಪ್ಗೆ ಕಾಟ ಕೊಡುತ್ತಿರುವ ರೇಣುಕಾಸ್ವಾಮಿ ಆತ್ಮ!
IIFA 2024: ಅನಿಮಲ್ ಅತ್ಯುತ್ತಮ ಸಿನಿಮಾ, ಶಾರುಕ್ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ