Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Paris Olympics ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡ ವೇಟ್‌ಲಿಫ್ಟರ್ ಮೀರಾಬಾಯಿ‌ ಚಾನು, ವಿಡಿಯೊ ನೋಡಿ
Uncategorized

Paris Olympics ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡ ವೇಟ್‌ಲಿಫ್ಟರ್ ಮೀರಾಬಾಯಿ‌ ಚಾನು, ವಿಡಿಯೊ ನೋಡಿ

Share
2 Min Read
SHARE

newsics.com

ಪ್ಯಾರಿಸ್: ಭಾರತದ ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಫೈನಲ್‌ಗೆ ತಲುಪಿದರೂ ಅನರ್ಹತೆಯ ಭೂತದಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆ ಕಮರಿದ ಬೆನ್ನಲ್ಲೇ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು (Mirabai Chanu) ಕೂಡ 49 ಕೆ.ಜಿ. ಕೆಟಗರಿಯ ವೇಟ್‌ಲಿಫ್ಟಿಂಗ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡಿದ್ದಾರೆ.
ಮೀರಾಬಾಯಿ ಚಾನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚೀನಾದ ಹೌ ಝಿಹುಯಿ ಒಟ್ಟು (94+116) 210 ಕೆ.ಜಿ ಎತ್ತಿ ಚಿನ್ನದ ಪದಕ ಪಡೆದರೆ, ರೊಮಾನಿಯಾದ ಮಿಹೇಲಾ ಕಾಂಬೇಯಿ ಅವರು ಒಟ್ಟು 205 ಕೆ.ಜಿ ಎತ್ತಿ ಬೆಳ್ಳಿ ಹಾಗೂ ಥಾಯ್ಲೆಂಡ್‌ನ ಸುರೋದ್‌ಚಾನಾ ಖಾಂಬಾವೋ ಅವರು ಒಟ್ಟು 200 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಪಡೆದರು.

ಮಣಿಪುರದ ವೇಟ್‌ಲಿಫ್ಟರ್‌ ಒಟ್ಟು 199 ಕೆ.ಜಿ. ಎತ್ತಿ ಒಂದೇ ಕೆ.ಜಿ ತೂಕದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ಇವರು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕಾರಣ ಈ ಬಾರಿ ನಿರೀಕ್ಷೆಗಳು ಹೆಚ್ಚಾಗಿದ್ದವು.
ಸ್ನ್ಯಾಚ್‌ ಸುತ್ತಿನಲ್ಲಿ ಮೀರಾಬಾಯಿ ಚಾನು ಮೊದಲ ಪ್ರಯತ್ನದಲ್ಲಿಯೇ 85 ಕೆ.ಜಿ. ತೂಕ ಎತ್ತಿದರು. ಎರಡನೇ ಪ್ರಯತ್ನದಲ್ಲಿ 88 ಕೆ.ಜಿ ತೂಕ ಎತ್ತುವಲ್ಲಿ ವಿಫಲರಾದ ಅವರು ಮೂರನೇ ಅಥವಾ ಕೊನೆಯ ಪ್ರಯತ್ನದಲ್ಲಿ 88 ಕೆ.ಜಿ ತೂಕ ಎತ್ತಿ ಮೂರನೇ ಸ್ಥಾನ ಪಡೆದರು.
ಕ್ಲೀನ್‌ ಆ್ಯಂಡ್‌ ಜರ್ಕ್‌ ಸುತ್ತಿನ ಮೊದಲ ಯತ್ನದಲ್ಲಿ ಅವರು 111 ಕೆ.ಜಿ. ತೂಕವನ್ನು ಎತ್ತುವಲ್ಲಿ ವಿಫಲರಾದರು. ಆದರೆ, ಹಠ ಬಿಡದ ಅವರು ಎರಡನೇ ಪ್ರಯತ್ನದಲ್ಲಿ ಸುಲಭವಾಗಿ 111 ಕೆ.ಜಿ. ತೂಕವನ್ನು ಎತ್ತಿದರು. ಆದರೆ, ಮೂರನೇ ಪ್ರಯತ್ನದಲ್ಲಿ 114 ಕೆ.ಜಿ. ತೂಕವನ್ನು ಎತ್ತುವಲ್ಲಿ ವಿಫಲರಾಗಿ ಅವರು ನಾಲ್ಕನೇ ಸ್ಥಾನ ಪಡೆದರು.
2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಒಟ್ಟು 202 ಕೆಜಿ ಭಾರವನ್ನೆತ್ತಿ (87 ಕೆಜಿ, 115 ಕೆಜಿ) ಬೆಳ್ಳಿ ಪದಕ ಗೆದ್ದಿದ್ದರು. ಗಾಯದಿಂದಾಗಿ ಕಳೆದ ಏಷ್ಯಾಡ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ದಾಖಲೆ ಹೊಂದಿದ್ದಾರೆ. ಹಾಗೆಯೇ ಜೆರ್ಕ್‌ನಲ್ಲಿ 119 ಕೆಜಿ ಎತ್ತಿರುವುದು ವೈಯಕ್ತಿಕ ದಾಖಲೆಯಾಗಿದೆ.

https://x.com/KirenRijiju/status/1821271641596322029?t=60hBHWknsZyJYUVV3-3o_A&s=19

https://twitter.com/i/status/1821248888679829693

ಫ್ರೆಂಚ್ ಕ್ರೀಡಾಪಟುವಿನ ಪದಕದಾಸೆಗೆ ಮರ್ಮಾಂಗವೇ ಅಡ್ಡಿಯಾಯ್ತು! ವಿಡಿಯೊ ನೋಡಿ

ಉತ್ತಮ ನಿದ್ದೆಗಾಗಿ ಹೀಗೆ‌ ಮಾಡಿ…

ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌

ಮೂರು ಗಂಟೆ ಕಾಲ ಮೊಸಳೆಯ ಗ್ರಾಮ ಸಂಚಾರ, ಎಲ್ಲರೂ ಓಡಿದರು, ಇವನೊಬ್ಬ ಮೊಸಳೆಯನ್ನೇ ಒದ್ದ…! ವೈರಲ್ ವಿಡಿಯೊ ನೋಡಿ

ನಟ ದರ್ಶನ್ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ: ಎಫ್ಎಸ್ಎಲ್ ವರದಿಯಲ್ಲಿ ದೃಢ, ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಕಾಲಿಗೆ ಕಪ್ಪು ದಾರ ಕಟ್ಟೋದೇಕೆ? ಇದರ ಹಿಂದಿದೆ‌ ಬಲವಾದ ನಂಬಿಕೆ!

ದಿನದ ತೂಕ 150 ಗ್ರಾಂ ಹೆಚ್ಚಳ, ಒಲಿಂಪಿಕ್ಸ್‌ನಿಂದ ಅನರ್ಹ ಬೆನ್ನಲ್ಲೇ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು

TAGGED:Weightlifter Meerabai Chanu narrowly missed out medal Paris Olympics newsics ಪ್ಯಾರಿಸ್ ಒಲಿಂಪಿಕ್ಸ್
Share This Article
Facebook Twitter Copy Link Print
Previous Article ಫ್ರೆಂಚ್ ಕ್ರೀಡಾಪಟುವಿನ ಪದಕದಾಸೆಗೆ ಮರ್ಮಾಂಗವೇ ಅಡ್ಡಿಯಾಯ್ತು! ವಿಡಿಯೊ ನೋಡಿ
Next Article ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್, ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ನಿರ್ಧಾರ ಪ್ರಕಟ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read
Uncategorized

Karnataka Rain: ನಾಳೆಯ ಹವಾಮಾನ: ಕರ್ನಾಟಕದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?