Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

Share
2 Min Read
SHARE

newsics.com | ನ್ಯೂಸಿಕ್ಸ್

ಪ್ರತಿಯೊಬ್ಬರ ಲೈಫ್‌ನಲ್ಲೂ ಒಂದಲ್ಲಾ ಒಂದು ವೀಕ್‌ನೆಸ್ ಇದ್ದೇ ಇರುತ್ತೆ. ಕೆಲವರಿಗೆ ಕತ್ತಲಲ್ಲಿ ಒಬ್ಬರೇ ಇರಲು ಭಯ ಇರುತ್ತದೆ, ಇನ್ನು ಕೆಲವರಿಗೆ ನೀರು ಅಥವಾ ಹಾವನ್ನು ಕಂಡರೆ ಭಯವಿರುತ್ತದೆ. ಆದರೆ, ಬಹುತೇಕ ಮನೆಗಳಲ್ಲಿ ದಿನ ಬೆಳಗಾದರೆ ಸಿಗುವ ಕಾಮನ್ ಸೀನ್ ಅಂದರೆ ಜಿರಳೆ ಕಂಡು ಮಹಿಳೆಯರು ಜೋರಾಗಿ ಕಿರುಚಿ ಓಡುವುದು. ಗಾತ್ರದಲ್ಲಿ ಚೋಟುದ್ದ ಇರುವ ಈ ಕೀಟವನ್ನು ನೋಡಿದರೆ ಹೆಣ್ಣುಮಕ್ಕಳಿಗೆ ಯಾಕಿಷ್ಟು ಭಯ ಪಡುತ್ತಾರೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಮತ್ತು ವಿಜ್ಞಾನದ ರಹಸ್ಯ ಇಲ್ಲಿದೆ.

ಏನಿದು ‘ಜಿರಳೆ ಫೋಬಿಯಾ’?
ಮನೋವಿಜ್ಞಾನ ಲೋಕದಲ್ಲಿ ಜಿರಳೆಗಳನ್ನು ನೋಡಿ ಅತಿಯಾಗಿ ಆತಂಕಕ್ಕೊಳಗಾಗುವುದಕ್ಕೆ ‘ಕತ್ಸರಿಡಾಫೋಬಿಯಾ’ (Katsaridaphobia) ಎಂಬ ಹೆಸರಿದೆ. ಇದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುವ ಒಂದು ಸಾಮಾನ್ಯ ಫೋಬಿಯಾವಾಗಿದೆ. ಈ ಸಮಸ್ಯೆ ಇರುವವರ ಕಣ್ಣಿಗೆ ಜಿರಳೆ ಬಿದ್ದ ತಕ್ಷಣ ಮೆದುಳು ಅಪಾಯದ ಸಿಗ್ನಲ್ ನೀಡುತ್ತದೆ. ಪರಿಣಾಮವಾಗಿ ಕೈಕಾಲುಗಳು ಐಸ್‌ನಂತೆ ತಣ್ಣಗಾಗುವುದು, ವಿಪರೀತ ಬೆವರು ಸುರಿಯುವುದು, ಹಾರ್ಟ್ ಬೀಟ್ ಜೋರಾಗುವುದು ಹಾಗೂ ಕ್ಷಣಕಾಲ ಮತಿಯೇ ಗೆಟ್ಟಂತಾಗುವ ಲಕ್ಷಣಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಈ ಭಯದ ಜರ್ನಿ ಶುರುವಾಗುವುದೇ ನಮ್ಮ ಚಿಕ್ಕ ವಯಸ್ಸಿನಲ್ಲಿ. ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರು ಅಥವಾ ಹಿರಿಯರ ರಿಯಾಕ್ಷನ್ ನೋಡಿಯೇ ವಿಷಯಗಳನ್ನು ಕಲಿಯುತ್ತಾರೆ. ಬಾಲ್ಯದಲ್ಲಿ ಅಮ್ಮ ಅಥವಾ ಮನೆಯ ಅಕ್ಕ ಜಿರಳೆಯನ್ನು ನೋಡಿ ಕಿರುಚಿದ್ದನ್ನು ಗಮನಿಸಿದ ಮಗುವಿನ ಮನಸ್ಸಿನಲ್ಲಿ, “ಇದು ತುಂಬಾ ಡೇಂಜರಸ್ ಪ್ರಾಣಿ” ಎಂಬ ತಪ್ಪು ಕಲ್ಪನೆ ಮೂಡುತ್ತದೆ. ವಯಸ್ಸಾಗುತ್ತಾ ಹೋದಂತೆ ಇದೇ ಕಲ್ಪನೆ ದೊಡ್ಡ ಫೋಬಿಯಾವಾಗಿ ಬದಲಾಗುತ್ತದೆ.

ಹುಡುಗಿಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳಲು ನಮ್ಮ ಸಾಮಾಜಿಕ ಪರಿಸರವೂ ಕಾರಣ. ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಅಚ್ಚುಕಟ್ಟು ಹಾಗೂ ಸ್ವಚ್ಛತೆಯ ಪಾಠಗಳನ್ನು ಹೆಚ್ಚು ಮಾಡಲಾಗುತ್ತದೆ. ಜಿರಳೆಗಳು ಯಾವಾಗಲೂ ಗಲೀಜು ಜಾಗ, ಗಟಾರ ಅಥವಾ ಸಿಂಕ್‌ಗಳಲ್ಲೇ ವಾಸಿಸುವುದರಿಂದ, ಅವುಗಳನ್ನು ಕಂಡ ತಕ್ಷಣ ಮಹಿಳೆಯರಲ್ಲಿ ಅಸಹ್ಯ ಮತ್ತು ಭಯ ಒಟ್ಟಿಗೇ ಆವರಿಸುತ್ತದೆ.

ಜಿರಳೆಗಳ ವಿಚಿತ್ರ ಶಾರೀರಿಕ ರಚನೆಯೂ ಜನರ ಭಯವನ್ನು ಡಬಲ್ ಮಾಡುತ್ತದೆ. ಅವುಗಳ ಮೈ ಮೇಲಿರುವ ಜಿಡ್ಡು ಜಿಡ್ಡಾದ ಚರ್ಮ, ಅತಿ ವೇಗವಾಗಿ ಓಡುವ ಸ್ಟೈಲ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅನಿರೀಕ್ಷಿತವಾಗಿ ರೆಕ್ಕೆ ಬಿಚ್ಚಿ ಮೈಮೇಲೆ ಬಂದು ಕೂರುವ ವಿಚಿತ್ರ ಬುದ್ಧಿ ಯಾರಿಗಾದರೂ ದಿಗಿಲು ಹುಟ್ಟಿಸುತ್ತದೆ. ಈ ಸಡನ್ ಅಟ್ಯಾಕ್ ಮಾಡುವ ಗುಣವೇ ಜನರ ಉಪಪ್ರಜ್ಞೆ ಮನಸ್ಸಿನಲ್ಲಿ ಸದಾ ಆತಂಕ ಸೃಷ್ಟಿಸಿಡುತ್ತದೆ.

ಜಿರಳೆಗಳು ಕಚ್ಚದೇ ಇದ್ದರೂ, ರೋಗಕಾರಕ ಬ್ಯಾಕ್ಟೀರಿಯಾಗಳ ದೊಡ್ಡ ಸೈನ್ಯವನ್ನೇ ಹೊತ್ತು ತಿರುಗುತ್ತವೆ. ಕೊಳಚೆ ಪ್ರದೇಶಗಳಲ್ಲಿ ಓಡಾಡುವುದರಿಂದ ಇವುಗಳ ಮೈಮೇಲೆ ಅಸ್ತಮಾ ಮತ್ತು ಅಲರ್ಜಿ ತರಬಲ್ಲ ಸೂಕ್ಷ್ಮಜೀವಿಗಳು ಹೆಚ್ಚಿರುತ್ತವೆ. ಇದರಿಂದಾಗಿ ನಮ್ಮ ಸಬ್‌ಕಾನ್ಶಿಯಸ್ ಮೈಂಡ್ ಜಿರಳೆಯನ್ನು ಒಂದು ‘ಅನಾರೋಗ್ಯದ ಸಂಕೇತ’ ಎಂದು ಮೊದಲೇ ಫಿಕ್ಸ್ ಮಾಡಿಬಿಟ್ಟಿರುತ್ತದೆ.

Rain alert ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ: ಉತ್ತರ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ

TAGGED:#Cockroach #women #home #afraid #disease
Share This Article
Facebook Twitter Copy Link Print
Previous Article Road Mishap ಕಾರು, ಟ್ರಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾ*ವು
Next Article Lokayukta Raid ಐಎಎಸ್ ಅಧಿಕಾರಿ ಜಗದೀಶ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Popular Posts

Grihajyoti scheme ಗೃಹಜ್ಯೋತಿ ಯೋಜನೆ ಮರುಪರಿಶೀಲನೆ: ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿವೆ ಐದು ಸರಳ ಹಂತಗಳು

3 Min Read

Rain & Holiday ರಾಜ್ಯದ ಅಲ್ಲಲ್ಲಿ ಮುಂಗಾರು ಮಳೆ ಜೋರು: 9 ಜಿಲ್ಲೆಗಳಿಗೆ ಅಲರ್ಟ್, 5 ಜಿಲ್ಲೆಗಳಲ್ಲಿಂದು ಶಾಲಾ‌ ಕಾಲೇಜುಗಳಿಗೆ ರಜೆ

1 Min Read

Tiger family captured ಮೈಸೂರಲ್ಲಿ ಐದು ಮರಿಗಳ ಜತೆ ರಾಣಿ ಹುಲಿ ಸೆರೆ

1 Min Read

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

You Might Also Like

Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read
Uncategorized

Karnataka Rain: ನಾಳೆಯ ಹವಾಮಾನ: ಕರ್ನಾಟಕದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!

1 Min Read
Uncategorized

Bescom ಜುಲೈ ತಿಂಗಳಲ್ಲಿ ಮೀಟರ್‌ ರೀಡಿಂಗ್‌ ಇಲ್ಲ – ನಿಮ್ಮ ನೋಂದಾಯಿತ ಮೊಬೈಲ್​ಗೆ ಬರಲಿದೆ ಎಸ್​ಎಂಎಸ್​

1 Min Read

Social Networks

Facebook-f Instagram Twitter
Welcome Back!

Sign in to your account

Lost your password?