Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Tiger family captured ಮೈಸೂರಲ್ಲಿ ಐದು ಮರಿಗಳ ಜತೆ ರಾಣಿ ಹುಲಿ ಸೆರೆ
ಕರ್ನಾಟಕಪ್ರಮುಖ

Tiger family captured ಮೈಸೂರಲ್ಲಿ ಐದು ಮರಿಗಳ ಜತೆ ರಾಣಿ ಹುಲಿ ಸೆರೆ

Share
1 Min Read
SHARE

newsics.com | ನ್ಯೂಸಿಕ್ಸ್

ಮೈಸೂರು: ಕಳೆದ ಹಲವು ದಿನಗಳಿಂದ ಮೈಸೂರು ಸರಗೂರು ತಾಲೂಕಿನ ಮುಳ್ಳೂರು ಮತ್ತು ಬೆಣ್ಣೆಗೆರೆ ಗ್ರಾಮಗಳ ಜನರನ್ನು ನಿದ್ದೆಗೆಡಿಸಿದ್ದ ಹುಲಿ ಫ್ಯಾಮಿಲಿ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.

ಐದು ಪುಟ್ಟ ಮರಿಗಳೊಂದಿಗೆ ಗ್ರಾಮದ ಅಂಚಿನಲ್ಲಿ ಬೀಡುಬಿಟ್ಟಿದ್ದ ಹೆಣ್ಣು ಹುಲಿ ರಾಣಿಯನ್ನು ಇಲಾಖೆಯು ಅತ್ಯಂತ ಜಾಣ್ಮೆ ಮತ್ತು ಸಾಹಸದಿಂದ ಸೆರೆಹಿಡಿದು, ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಿದೆ.

ಗ್ರಾಮದ ಸಮೀಪವೇ ಹುಲಿ ಕಾಣಿಸಿಕೊಳ್ಳುತ್ತಿದ್ದುದರಿಂದ ಜನರು ಭಯಭೀತರಾಗಿದ್ದರು. ತಮ್ಮ ಮರಿಗಳ ರಕ್ಷಣೆಗಾಗಿ ಹೆಣ್ಣು ಹುಲಿ ಆಕ್ರಮಣಕಾರಿ ವರ್ತನೆ ತೋರುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಅರಣ್ಯ ಇಲಾಖೆ, ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಅನುಭವಿ ಅಧಿಕಾರಿಗಳು, ಪಶುವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ದೊಡ್ಡ ತಂಡವೇ ಅಖಾಡಕ್ಕಿಳಿದಿತ್ತು.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿತು. ಕತ್ತಲಲ್ಲೂ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಲು ಥರ್ಮಲ್ ಡ್ರೋನ್‍ಗಳನ್ನು ಬಳಸಲಾಯಿತು. ಪತ್ತೆಯಾದ ನಂತರ, ಅರಣ್ಯ ಸಿಬ್ಬಂದಿ ಮಹೇಂದ್ರ ಹೆಸರಿನ ಆನೆಯ ಸಹಾಯ ಪಡೆದರು. ಆನೆ ಮೇಲೆ ಕುಳಿತಿದ್ದ ಪಶುವೈದ್ಯ ಡಾ. ವಾಸಿಂ ಮಿರ್ಜಾ ಅವರು ಅತ್ಯಂತ ನಿಖರವಾಗಿ ಹುಲಿಗೆ ಅರವಳಿಕೆ ಬಾಣ ಪ್ರಯೋಗಿಸಿದರು. ಮಂಪರು ಆವರಿಸಿದ ಹುಲಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಯಿತು.

ಸೆರೆ ಸಿಕ್ಕ ಹುಲಿಗೆ ಸುಮಾರು 12 ವರ್ಷ ವಯಸ್ಸಾಗಿದ್ದರೆ, ಅದರ ಮರಿಗಳಿಗೆ ಕೇವಲ 1-2 ತಿಂಗಳಾಗಿವೆ. ತಜ್ಞರ ಪ್ರಕಾರ, ಮರಿಗಳಿಗೆ ಸುರಕ್ಷಿತ ತಾಣ ಹುಡುಕಲು ಹುಲಿ ಜನವಸತಿ ಪ್ರದೇಶದ ಅಂಚಿಗೆ ಬಂದಿತ್ತು. ತಾಯಿ ಮತ್ತು ಮರಿಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ, ವಿಶೇಷ ವಾಹನದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ವನ್ಯಜೀವಿ ಕೇಂದ್ರಕ್ಕೆ ಕರೆದೊಯ್ಯಲಾಯಿತು.

 

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

TAGGED:Queen tiger captured with five cubs in Mysore
Share This Article
Facebook Twitter Copy Link Print
Previous Article Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!
Next Article Rain & Holiday ರಾಜ್ಯದ ಅಲ್ಲಲ್ಲಿ ಮುಂಗಾರು ಮಳೆ ಜೋರು: 9 ಜಿಲ್ಲೆಗಳಿಗೆ ಅಲರ್ಟ್, 5 ಜಿಲ್ಲೆಗಳಲ್ಲಿಂದು ಶಾಲಾ‌ ಕಾಲೇಜುಗಳಿಗೆ ರಜೆ

Popular Posts

Grihajyoti scheme ಗೃಹಜ್ಯೋತಿ ಯೋಜನೆ ಮರುಪರಿಶೀಲನೆ: ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿವೆ ಐದು ಸರಳ ಹಂತಗಳು

3 Min Read

Rain & Holiday ರಾಜ್ಯದ ಅಲ್ಲಲ್ಲಿ ಮುಂಗಾರು ಮಳೆ ಜೋರು: 9 ಜಿಲ್ಲೆಗಳಿಗೆ ಅಲರ್ಟ್, 5 ಜಿಲ್ಲೆಗಳಲ್ಲಿಂದು ಶಾಲಾ‌ ಕಾಲೇಜುಗಳಿಗೆ ರಜೆ

1 Min Read

Tiger family captured ಮೈಸೂರಲ್ಲಿ ಐದು ಮರಿಗಳ ಜತೆ ರಾಣಿ ಹುಲಿ ಸೆರೆ

1 Min Read

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

You Might Also Like

Crimeಕರ್ನಾಟಕಪ್ರಮುಖ

Ballari ಡಬಲ್ ಮರ್ಡರ್: ಪತ್ನಿ ಮಾವನನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ

1 Min Read
ಕರ್ನಾಟಕದೇಶಪ್ರಮುಖ

Lorry Strike ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ

1 Min Read
ಕರ್ನಾಟಕದೇಶಪ್ರಮುಖ

Voter List Revision SIR ಪ್ರಕ್ರಿಯೆ​ ವೇಳೆ ಕರ್ನಾಟಕದಲ್ಲಿ ಭಾರಿ ಲೋಪ ಆರೋಪ : ಮೈತ್ರಿ ನಾಯಕರಿಂದ ದೂರು

2 Min Read
ಕರ್ನಾಟಕಪ್ರಮುಖವೈರಲ್

Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?