newsics.com
ಬಿಜ್ನೋರ್(ಉತ್ತರ ಪ್ರದೇಶ): ದೇಶದೆಲ್ಲೆಡೆ ಮಳೆ ಹೆಚ್ಚಾಗಿರುವ ಪರಿಣಾಮ ಗ್ರಾಮಗಳನ್ನು ಪ್ರವೇಶಿಸುತ್ತಿರುವ ಮೊಸಳೆ, ಹಾವುಗಳನ್ನು ಹಿಡಿದು ರಕ್ಷಣೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಆದರೆ, ಇಲ್ಲೊಂದು ವಿಡಿಯೋದಲ್ಲಿ ಮೊಸಳೆ ನೋಡಿ ಜನ ಓಡ್ತಿದ್ರೆ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೊಸಳೆಗೆ ಒದ್ದಿದ್ದಾನೆ.
ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯ ನಂಗಲ್ ಸೋತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜನರು ದೂರದಿಂದಲೇ ನಿಂತು ಮೊಸಳೆಯ ವಿಡಿಯೋ ಸೆರೆಹಿಡಿಯುತ್ತಿದ್ದರು. ಗ್ರಾಮಕ್ಕೆ ಬಂದ ಮೊಸಳೆ ಗಲ್ಲಿಗಳಲ್ಲಿ ಭಯದಿಂದ ಓಡಾಡುತ್ತಿತ್ತು. ಜನರು ಮೊಸಳೆಯನ್ನು ಕಂಡು ಓಡುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಯಾವುದೇ ಭಯವಿಲ್ಲದೆ ಮೊಸಳೆಗೆ ಹಿಂದಿನಿಂದ ಒದ್ದಿದ್ದಾನೆ. ಇದರಿಂದ ಭಯಗೊಂಡ ಮೊಸಳೆ ಮುಂದಕ್ಕೆ ವೇಗವಾಗಿ ಚಲಿಸಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುಮಾರು 3 ಗಂಟೆಗಳ ಕಾಲ ಮೊಸಳೆ ಗ್ರಾಮದಲ್ಲಿಯೇ ಸುತ್ತಾಡಿದೆ.
ಮೊಸಳೆ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 3 ಗಂಟೆಯ ನಂತರ ಬಂದ ಅಧಿಕಾರಿಗಳು ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
https://twitter.com/i/status/1821043385605472278
ನಟ ದರ್ಶನ್ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ: ಎಫ್ಎಸ್ಎಲ್ ವರದಿಯಲ್ಲಿ ದೃಢ, ದರ್ಶನ್ಗೆ ಮತ್ತಷ್ಟು ಸಂಕಷ್ಟ
ದಿನದ ತೂಕ 150 ಗ್ರಾಂ ಹೆಚ್ಚಳ, ಒಲಿಂಪಿಕ್ಸ್ನಿಂದ ಅನರ್ಹ ಬೆನ್ನಲ್ಲೇ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು