newsics.com
ಜಿರಳೆಗಳಿಂದಲೂ ದುಡ್ಡು ಮಾಡಬಹುದು. ಹೌದು, ವಿಶ್ವ ಮಾರುಕಟ್ಟೆಯಲ್ಲಿ ಜಿರಳೆಗಳು ಚಿನ್ನದಷ್ಟೇ ದುಬಾರಿಯಾಗುತ್ತಿವೆ.
ಒಂದು ಕೆಜಿ ಜಿರಳೆಗೂ ಕೂಡ ಅಲ್ಲಿ ಹಣವನ್ನು ನೀಡಲಾಗುತ್ತದೆ, ಆದರೆ ನಮ್ಮ ದೇಶದಲ್ಲಿ ಜಿರಳೆಗೆ ಬೆಲೆ ಇಲ್ಲ. ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ತುಂಬಾ ದುಬಾರಿಯ ಬೆಲೆ ಇದೆ.
ಚೀನಾದವರು ಆರು ಶತಕೋಟಿ ಜಿರಳೆಯನ್ನು ಕೂಡ ಉತ್ಪಾದಿಸುತ್ತಿದ್ದಾರೆ. ಚೀನಾ ದೇಶದಲ್ಲಿ ಜಿರಳೆಗಳಿಗೆ ತುಂಬಾ ಬೇಡಿಕೆ ಇದೆ. ಆದರೆ ಚೀನಾ ದೇಶದಲ್ಲಿ ಜಿರಳೆಗಳ ಉತ್ಪಾದನೆ ತುಂಬಾ ಕಡಿಮೆ ಮಟ್ಟದಲ್ಲಿದೆ.
ವಿಶ್ವದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕವು ಚೀನಾದ ಕ್ಸಿಚಾಂಗ್‌ನಲ್ಲಿದೆ. 2018 ರ ವರದಿಯ ಪ್ರಕಾರ, ಗುಡ್‌ಡಾಕ್ಟರ್‌ನ AI ನಿಯಂತ್ರಿತ ಫಾರ್ಮ್‌ಗಳು ವರ್ಷಕ್ಕೆ 6 ಶತಕೋಟಿ ಜಿರಳೆಗಳನ್ನು ಉತ್ಪಾದಿಸುತ್ತವೆ. ಚೀನಾದಲ್ಲಿ, ವಿಶ್ವ ಮಾರುಕಟ್ಟೆಯಲ್ಲಿ ಜಿರಳೆಗಳು ಚಿನ್ನದಷ್ಟೇ ದುಬಾರಿಯಾಗುತ್ತಿವೆ.
ಚೀನಾದಲ್ಲಿ ಜಿರಳೆಗಳನ್ನು ಖಾದ್ಯಗಳೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಏಷ್ಯಾದಲ್ಲಿ ಔಷಧ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಜಿರಳೆಗಳನ್ನು ಬಳಸಲಾಗುತ್ತದೆ.
ಆಡೇನಿಯಲ್ ರೋಹುರಾ ಆಫ್ರಿಕಾದ ತಾಂಜಾನಿಯಾದಲ್ಲಿ ಜಿರಳೆಗಳನ್ನು ಬೆಳೆಸುತ್ತಾರೆ. ಈ ಯುವಕನ ದೃಷ್ಟಿಯಲ್ಲಿ ಜಿರಳೆ ಬಂಗಾರದಷ್ಟೇ ಅಮೂಲ್ಯ. ಅವರು ಪ್ರತಿ ಕೆಜಿಗೆ 5 ಯುರೋಗಳಿಗೆ ಜಿರಳೆಗಳನ್ನು ಮಾರಾಟ ಮಾಡುತ್ತಾರೆ. ಜಿರಳೆಗಳನ್ನು ಸಾಕುವವರು ಬಹಳ ಮಂದಿ ಇದ್ದಾರೆ. ಜಿರಳೆಗಳಿಂದ ಸಿಗುವ ಎಣ್ಣೆಗೂ ಬಲು ಬೇಡಿಕೆಯಿದೆ.
ಈ ಕೀಟಗಳು ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳನ್ನು ಸಹ ಹೊಂದಿವೆ. ಪರಿಣಾಮವಾಗಿ, ಆಫ್ರಿಕದಲ್ಲಿ 20 ಪ್ರತಿಶತ ಅಪೌಷ್ಟಿಕ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಮೂಲಗಳ ಪ್ರಕಾರ, ಆಫ್ರಿಕಾದಲ್ಲಿ ಹಂದಿಗಳು, ಆಡುಗಳು, ಮೀನುಗಳು ಮತ್ತು ಕೋಳಿಗಳ ಒಟ್ಟು ಕಚ್ಚಾ ಪ್ರೋಟೀನ್ ಅಗತ್ಯಗಳಲ್ಲಿ 14 ಪ್ರತಿಶತವನ್ನು ಜಿರಳೆ ಸಾಕಣೆಯ ಮೂಲಕ ಪೂರೈಸಬಹುದು. ಪ್ರಸ್ತುತ, ಜಗತ್ತಿನಲ್ಲಿ 2100 ಜಾತಿಯ ಕೀಟಗಳನ್ನು ಖಾದ್ಯವೆಂದು ಗುರುತಿಸಲಾಗಿದೆ.
ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?
ಡಿವೋರ್ಸ್ ಆದ ಹೆಂಡತಿಯನ್ನೇ ಗಂಡ ಮತ್ತೆ ಮದುವೆ ಆಗಬಹುದಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಹುಡುಗಿಯರೇ… ನೀವು ಇಲ್ಲೆಲ್ಲ ಟ್ಯಾಟು ಹಾಕಿಸಿಕೊಳ್ಳಲೇಬೇಡಿ… ಕಾರಣವೇನು ಗೊತ್ತಾ?