newsics.com
9 ತಿಂಗಳು ಇನ್ನೊಂದು ಜೀವವನ್ನು ಒಡಲೊಳಗಿಟ್ಟು ಪೋಷಿಸುವುದು ಸುಲಭವಲ್ಲ. ಅಂತಹ ಸೂಕ್ಷ್ಮ ಸ್ಥಿತಿಯ ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ದೈಹಿಕ ಮಾನಸಿಕ ಬದಲಾವಣೆಗೆ ಒಳಪಡುತ್ತಾರೆ. ಹೀಗಾಗಿ ಆಗ ಚಿತ್ರವಿಚಿತ್ರ ಪದಾರ್ಥಗಳನ್ನು ತಿನ್ನುವ ಆಸೆ ಗರ್ಭಿಣಿಯರನ್ನು ಕಾಡುತ್ತದೆ. ಅದರಲ್ಲೂ ಗರ್ಭಾವಸ್ಥೆಯ ಮೊದಲು ಮೂರು ತಿಂಗಳಲ್ಲಿ ಗರ್ಭಿಣಿಯರಿಗೆ ಕಪ್ಪು ಅಥವಾ ಕೆಂಪು ಮಣ್ಣು ತಿನ್ನುವ ಬಯಕೆ ಕಾಡುತ್ತದೆಯಂತೆ. ಹೀಗಾಗಿ ಎಷ್ಟೋ ಹೆಣ್ಣುಮಕ್ಕಳು ಮುಷ್ಠಿಯಷ್ಟು ಮಣ್ಣು ತಿನ್ನೋದು ಇದೆಯಂತೆ.
ವೈದ್ಯಕೀಯ ಅಧ್ಯಯನದ ಪ್ರಕಾರ, ಪೋಷಕಾಂಶ ಅಥವಾ ಕ್ಯಾಲ್ಸಿಯಂ ಕೊರತೆ ಇದ್ದಾಗ ಹೆಣ್ಣುಮಕ್ಕಳು ಮಣ್ಣು ತಿನ್ನುತ್ತಾರೆ. ಇದು ಸಹಜವಾಗಿದ್ದು, ಮಿತಿಯಲ್ಲಿದ್ದರೇ ಯಾವುದೇ ದುಷ್ಪರಿಣಾಮವಿಲ್ಲ. ಆದರೆ ಇದಕ್ಕೆ ಮುಂಜಾಗ್ರತೆಯ ಅವಶ್ಯಕತೆ ಇದೆ.
ಮಣ್ಣು ಸೇವನೆ ಅತಿಯಾದರೆ ಇದರಿಂದ ಮಗುವಿನ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಕೇವಲ ಮೊದಲ ಮೂರು ತಿಂಗಳು ಮಾತ್ರವಲ್ಲ 9 ತಿಂಗಳಲ್ಲಿ ಯಾವಾಗ ಬೇಕಾದರೂ ಮಣ್ಣು ತಿನ್ನುವ ಆಸೆ ಗರ್ಭಿಣಿಯರನ್ನು ಕಾಡಬಹುದು ಎಂದು ಹೇಳಲಾಗುತ್ತದೆ. ಕೆಮ್ಮಣ್ಣು, ಚಾಕ್ ಪೀಸ್, ಹಿಂಡಿ, ರಂಗೋಲಿ ಪುಡಿ, ಸುಣ್ಣ ಸೇರಿದಂತೆ ವಿವಿಧ ಬಗೆಹ ಅಸಹಜ ವಸ್ತುಗಳನ್ನು ತಿನ್ನುವ ಗರ್ಭಿಣಿಯರೂ ಇದ್ದಾರೆ.