newsics.com
ಸಿನಿಮಾದಲ್ಲಿ ಟಾಪ್ 1 ಸ್ಥಾನವನ್ನು ಎಲ್ಲಾ ಕಾಲಕ್ಕೂ ಉಳಿಸಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಇದು ಬೇರೆಯವರ ಪ್ರವೇಶದಿಂದ ನಂಬರ್ 1 ಸ್ಥಾನ ಕೆಳಗೆ ಬಿದ್ದರೆ ಕೆಲವೊಮ್ಮೆ ಆ ಸ್ಥಾನವನ್ನ ಖುದ್ದು ಕಲಾವಿದರೇ ಕಳೆದುಕೊಂಡುಬಿಡುತ್ತಾರೆ. ಅಂಥವರ ಗುಂಪಿಗೆ ಒಂದು ಕಾಲದಲ್ಲಿ ಟಾಪ್ ಸ್ಥಾನದಲ್ಲಿದ್ದ ನಟಿ ರಿಯಾ ಸೇನ್ ಸೇರುತ್ತಾರೆ.
ರಿಯಾ ಸೇನ್ ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಮೊದಲು ಪ್ರಾರಂಭಿಸಿದಾಗ ಭಾರತದ ದಿಟ್ಟ ಯುವ ಐಕಾನ್ ಎಂದು ಕರೆಯಲ್ಪಟ್ಟು ಪ್ರಸಿದ್ಧ ನಟಿಯಾಗಿದ್ದರು. ಆದರೆ ಒಂದು ವೀಡಿಯೊ ಅವರ ವೃತ್ತಿಜೀವನವನ್ನು ಹಾಳುಮಾಡಿಬಿಟ್ಟಿತು. ಈಗ ಚಲನಚಿತ್ರಗಳಲ್ಲಿ ಮತ್ತು ಟಿವಿಯಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಅನೇಕ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದ ನಂತರ, ರಿಯಾ ಸೇನ್ ಅವರ ವೃತ್ತಿಜೀವನವು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂದುಕೊಳ್ಳುತ್ತಿದ್ದಾಗ ಅವರ ಖಾಸಗಿ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಅವರು ಬಾಲಿವುಡ್‌ನಿಂದ ಹೊರಹೋಗಬೇಕಾಯಿತು, ಇದು ವಿವಾದಕ್ಕೆ ಕಾರಣವಾಯಿತು.
ರಿಯಾ ಸೇನ್ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿಲ್ಲ.ಬದಲಾಗಿ ಅವರು ಬಂಗಾಳಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಜನಪ್ರಿಯ. ಅವರಿಗೆ ಈಗ 43 ವರ್ಷ, ಆದರೆ ಸೌಂದರ್ಯ ಇನ್ನೂ ಹಾಗೇ ಇದೆ.