newsics.com
ಸಿನಿಮಾ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಯಕ್ಟಿವ್ ಆಗಿರುವ ಮಾಳವಿಕಾ ಮೋಹನನ್, ಆಗಾಗ ಪೋಸ್ಟ್ ಗಳನ್ನು ಹಂಚಿಕೊಳ್ತಾರೆ. ನಟಿಯ ಫೋಟೋಗಳಿಗೆ ನೆಟ್ಟಿಗರು ಕಾಯುತ್ತಿರುತ್ತಾರೆ. ಮಾಳವಿಕಾ ಮೋಹನನ್ ತನ್ನ ಸೌಂದರ್ಯ ದಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಈ ಚೆಲುವೆ ವಿಕ್ರಮ್ ಜೊತೆ ತಂಗಳನ್ ಸಿನಿಮಾ ಮಾಡುತ್ತಿದ್ದಾರೆ. ನಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಟ್ರೇಲರ್ ಗಳಲ್ಲಿ ಆಕೆಯ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಇವರು ನಿಜವಾಗಲೂ ನಟಿ ಮಾಳವಿಕಾ ಅವರೇನಾ ಎಂದು ಅನೇಕರು ಅನುಮಾನಿಸಿದ್ರು. ಈ ಸಿನಿಮಾದಲ್ಲಿ ಮಾಳವಿಕಾಗೆ ವೃತ್ತಿಜೀವನದ ಬೆಸ್ಟ್ ರೋಲ್ ಸಿಕ್ಕಿದೆ ಎಂಬುದು ಇಂಡಸ್ಟ್ಟಿಯ ಮಾತಾಗಿದೆ ಮಾತು. ಜೊತೆಗೆ ತಂಗಳನ್ ಸಿನಿಮಾದಲ್ಲಿ ಮಾಳವಿಕಾ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.