newsics.com
ಅಮರಾವತಿ(ಆಂಧ್ರಪ್ರದೇಶ): ಅಶ್ಲೀಲ ವಿಡಿಯೊ ನೋಡಿದ ಮೂವರು ಅಪ್ರಾಪ್ತ ಬಾಲಕು ಎಙಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಭಯಾನಕ ಕೃತ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.
ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡಿದ್ದ ಮೂವರು ಬಾಲಕರು, ಅದರಲ್ಲಿರುವಂತೆ ಮಾಡಲು ಪಕ್ಕದ ಮನೆಯ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಬಾಲಕಿ ಒಪ್ಪಿಕೊಳ್ಳದಿದ್ದಾಗ ಮೂವರೂ ಸೇರಿ ಅತ್ಯಾಚಾರವೆಸಗಿ ಬಳಿಕ ಬಾಲಕಿ ಕತ್ತು ಹಿಸುಕಿ ಕೊಂದಿದ್ದಾರೆ. ಬಾಲಕಿಯ ಶವವನ್ನು ತೆಗೆದುಕೊಂಡು ಹೋಗಿ ಬಂಡೆಗೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ.
ನಂದ್ಯಾಲ್ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 12 ಮತ್ತು 13 ವರ್ಷದ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಾಲಕರು ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡಿದ್ದು, ಅದರಲ್ಲಿರುವ ದೃಶ್ಯಗಳನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಸ್ಥಳೀಯ ದೇವಸ್ಥಾನದ ಅವರಣದಲ್ಲಿ ಈ ಹೀನಕೃತ್ಯ ನಡೆದಿದ್ದು, ಒಪ್ಪದ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಘೋರ ಕೃತ್ಯ ಎಸಗಿದ ಬಳಿಕ ಆರೋಪಿಯ ತಂದೆ ಮತ್ತು ಚಿಕ್ಕಪ್ಪ ಸಾಕ್ಷ್ಯ ಮರೆಮಾಚಲು ಅಪ್ರಾಪ್ತ ಬಾಲಕಿಯ ಶವವನ್ನು ತೆಗೆದುಕೊಂಡು ಹೋಗಿ ಬಂಡೆಗೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಬಾಲಕರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಬಂಧನದಲ್ಲಿದ್ದಾರೆ.
ನದಿಯಿಂದ ಬಾಲಕಿಯ ಶವವನ್ನು ಹೊರತೆಗೆಯಲು ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದ್ದಾರೆ ಎಂದು ಆಂಧ್ರಪ್ರದೇಶದ ಗೃಹ ಸಚಿವ ವಿ ಅನಿತಾ ಘೋಷಿಸಿದ್ದಾರೆ.
ಉದ್ಯಮಿಗಳ ವಿರೋಧಕ್ಕೆ ಬೆದರಿದ ಸರ್ಕಾರ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ತಡೆ, ಸಿಎಂ ಮಾಹಿತಿ
ಗುಂಡಿನ ಚಕಮಕಿ: 12 ನಕ್ಸಲರ ಎನ್‌ಕೌಂಟರ್, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
ಕೇರಳದಲ್ಲಿ ಕಾಡಾನೆ ಸಂಖ್ಯೆ ಶೇ.7ರಷ್ಟು ಇಳಿಕೆ! ಈಗ ದೇವರ ನಾಡಲ್ಲಿವೆ 1793 ಕಾಡಾನೆಗಳು