newsics.com
ಜಾತಕ ನೋಡಿ ಭವಿಷ್ಯದ ವಿಚಾರ ತಿಳಿಯುವುದು ಮುಖ್ಯವಾದ ಭಾಗವಾದರೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು.
ಶರೀರದ ರಚನೆಯ ಬದಲಾವಣೆಯಲ್ಲಿಯೂ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ. ಹಾಗಾಗಿ ಕಣ್ಣು, ಬೆರಳು, ಹಸ್ತದ ರಚನೆಯೂ ಸಹ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಸುತ್ತದೆ.
ಅಷ್ಟೇ ಅಲ್ಲ, ಹುಬ್ಬು ಸಹ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಅದರಿಂದ ಸ್ವಭಾವವನ್ನು ಸಹ ತಿಳಿಯಬಹುದಾಗಿದೆ. ಹಾಗಾಗಿ ಹುಬ್ಬುಗಳ ರಚನೆಯಿಂದ ಸ್ವಭಾವವನ್ನು ತಿಳಿಯಬಹುದು.
ದಪ್ಪ ಕಣ್ಣಿನ ಹುಬ್ಬು:
ದಪ್ಪವಾದ ಮತ್ತು ಹೆಚ್ಚು ಹುಬ್ಬಿನ ಕೂದಲುಗಳನ್ನು ಹೊಂದಿರುವವರು ಹೆಚ್ಚು ವಿಶ್ವಾಸಕ್ಕೆ ಯೋಗ್ಯರಾಗಿರುವುದಿಲ್ಲವೆಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ಹೆಚ್ಚು ಅಹಂಕಾರ ಗುಣವನ್ನು ಹೊಂದಿರುತ್ತಾರೆ. ಹಣದ ಬಗ್ಗೆ ಹೆಚ್ಚಿನ ವ್ಯಾಮೋಹ ಹೊಂದಿರುತ್ತಾರೆ.
ಅಷ್ಟೆ ಅಲ್ಲದೆ ಹೇಗಾದರೂ ಸರಿ ಹಣ ಸಂಪಾದಿಸಬೇಕೆಂಬ ನಿಲುವು ಇವರದ್ದಾಗಿರುತ್ತದೆ. ಈ ರೀತಿ ಹುಬ್ಬು ಹೊಂದಿರುವ ವ್ಯಕ್ತಿಗಳು ಹೆಚ್ಚು ಸಿಟ್ಟನ್ನೂ ಹೊಂದಿರುತ್ತಾರೆ, ಅಷ್ಟೇ ಚಾಲಾಕಿ ಕೂಡ ಆಗಿರುತ್ತಾರೆ.
ತೆಳುವಾದ ಹುಬ್ಬು:
ತೆಳುವಾದ ಹುಬ್ಬನ್ನು ಹೊಂದಿರುವ ವ್ಯಕ್ತಿಗಳು ಸಮಾಧಾನಚಿತ್ತರಾಗಿರುತ್ತಾರೆ. ಸದಾ ಸಂತೋಷದಿಂದ ಇರುವ ಈ ವ್ಯಕ್ತಿಗಳಿಗೆ ತಾಳ್ಮೆಯೂ ಅತ್ಯಧಿಕವಾಗಿರುತ್ತದೆ. ಆದರ್ಶ ಮತ್ತು ಸಿದ್ಧಾಂತಗಳ ನೆಲೆಗಟ್ಟಿನಲ್ಲಿಯೇ ಮುಂದುವರಿದು ಗುರಿ ಸಾಧಿಸುವ ಛಲ ಹೊಂದಿರುತ್ತಾರೆ.
ಈ ವ್ಯಕ್ತಿಗಳು ಹೆಚ್ಚು ಜವಾಬ್ದಾರಿಯುತ ಗುಣವನ್ನು ಮತ್ತು ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.
ಕಡುಗಪ್ಪು ಹುಬ್ಬು:
ಗಾಢವಾದ ಕಪ್ಪು ಬಣ್ಣದ ಹುಬ್ಬನ್ನು ಹೊಂದಿರುವವರು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ. ಕಲೆಯನ್ನು ಪ್ರೀತಿಸುವ ಈ ವ್ಯಕ್ತಿಗಳು ಐಷಾರಾಮಿ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತಮ್ಮ ವೃತ್ತಿ ಕ್ಷೇತ್ರದ ಬಗ್ಗೆ ಹೆಚ್ಚು ಗಂಭೀರತೆ ಹೊಂದಿರುವ ಈ ವ್ಯಕ್ತಿಗಳು ಯಶಸ್ಸಿನ ಮೆಟ್ಟಿಲನ್ನು ಹತ್ತುವಲ್ಲಿ ಸಫಲರಾಗುತ್ತಾರೆ.
ಕೂಡಿರುವ ಹುಬ್ಬು:
ಕೆಲವರಿಗೆ ಹುಬ್ಬು ಕೂಡಿರುವುದನ್ನು ಗಮನಿಸಿರುತ್ತೇವೆ. ಅಂಥವರು ಚತುರರು ಮತ್ತು ಸಂಯಮವನ್ನು ಹೊಂದಿರುವವರು ಆಗಿರುತ್ತಾರೆ. ಈ ವ್ಯಕ್ತಿಗಳು ಸದಾ ತಮ್ಮ ಯಶಸ್ಸು ಮತ್ತು ಜೀವನದಲ್ಲಿ ಸಾಧಿಸಬೇಕಾದ ಗುರಿಗಳ ಬಗ್ಗೆಯೇ ಆಲೋಚಿಸುತ್ತಾ ಇರುತ್ತಾರೆ. ಇತರರಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ.
ಉದ್ದವಾದ ಹುಬ್ಬು:
ಕೆಲ ವ್ಯಕ್ತಿಗಳ ಹುಬ್ಬು ಇನ್ನೇನು ಕಿವಿಗೆ ತಾಕುತ್ತದೆ ಎನ್ನುವಷ್ಟು ಉದ್ದವಾಗಿರುತ್ತದೆ. ಅಂತಹ ವ್ಯಕ್ತಿಗಳು ಜಿಪುಣರಾಗಿರುತ್ತಾರೆ. ಅಲ್ಲದೆ ಇವರು ಚಂಚಲ ಸ್ವಭಾವವನ್ನು ಹೊಂದಿದ್ದು, ಓದುವುದು ಮತ್ತು ಬರೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ. ಇಂತಹ ವ್ಯಕ್ತಿಗಳಿಗೆ ವ್ಯಾವಹಾರಿಕ ಜ್ಞಾನವೂ ಕಡಿಮೆಯೇ ಎಂದು ಹೇಳಲಾಗುತ್ತದೆ.
ಮಳೆಗಾಲ ಶುರುವಾಗಿದೆ… ಇದು ಶೀತ-ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ