Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮಳೆಗಾಲ ಶುರುವಾಗಿದೆ… ಇದು ಶೀತ- ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ
ಆರೋಗ್ಯಲೈಫ್‌ಸ್ಟೈಲ್

ಮಳೆಗಾಲ ಶುರುವಾಗಿದೆ… ಇದು ಶೀತ- ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ

Share
2 Min Read
SHARE

newsics.com
ಮಳೆಗಾಲ ಶುರುವಾಗಿದೆ. ಹೀಗಾಗಿ ಇದು ಶೀತ ಮತ್ತು ಕೆಮ್ಮು ಕಾಡುವ ಸಮಯ. ಮಕ್ಕಳು ಹಾಗೂ ವಯಸ್ಕರ ಮೇಲೂ ಮಳೆಗಾಲ ಪರಿಣಾಮ ಬೀರುತ್ತದೆ. ಶೀತ, ಕೆಮ್ಮು ಬಿಡದೇ ಕಾಡಬಹುದು. ಅಂದಮಾತ್ರಕ್ಕೆ ಭಯ ಬೇಕಿಲ್ಲ. ವೈದ್ಯರ ಬಳಿಗೆ ಹೋಗಬೇಕೆಂದೇನೂ ಇಲ್ಲ. ಮನೆಯಲ್ಲೇ ಕಷಾಯ ತಯಾರಿಸಿ ಒಂದೆರಡು‌ ದಿನ ಕುಡಿದರೆ ಶೀತ, ಕೆಮ್ಮು ದೂರವಾಗುತ್ತದೆ. ಇದು ಶೀತ,‌‌ ಕೆಮ್ಮು ಅಷ್ಟೇ ಅಲ್ಲ, ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
ಸಾಮಾನ್ಯ ಶೀತ-ಕೆಮ್ಮಿಗೆ ಕಷಾಯ ಪರಿಣಾಮಕಾರಿ ಮನೆಮದ್ದು. ಹಾಗಾದರೆ, ಈ ಕಷಾಯ ತಯಾರಿಸೋದು ಹೇಗೆ?
ಅಗತ್ಯ ಸಾಮಗ್ರಿ:
ಅರಿಶಿನ ಪುಡಿ – 1/2 ಟೀ ಸ್ಪೂನ್, 1/2 ಟೀ ಸ್ಪೂನ್ ಶುಂಠಿ ಪುಡಿ ಅಥವಾ 1/2 ಇಂಚು ಹಸಿ ಶುಂಠಿ, 1 ಟೀ ಸ್ಪೂನ್ ನಿಂಬೆ ರಸ, ಸ್ವಲ್ಪ ಲವಂಗ ಪುಡಿ, ಅರ್ಧ ಟೀ ಸ್ಪೂನ್ ದಾಲ್ಚಿನ್ನಿ ಪುಡಿ‌.
ತಯಾರಿಸೋದು ಹೇಗೆ?:
ನಿಂಬೆ ರಸ ಹಾಗೂ ಜೇನುತುಪ್ಪ ಹೊರತಪಡಿಸಿ ಉಳಿದ ಪದಾರ್ಥಗಳನ್ನು 5 ನಿಮಿಷ ಕಾಲ ಕುದಿಸಬೇಕು. ನಂತರ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಕೆಮ್ಮು ಮತ್ತು ಶೀತ ಸಂಪೂರ್ಣ ನಿವಾರಣೆಯಾಗುತ್ತದೆ.
ಕಷಾಯ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಅರಿಶಿನ ತುಂಬಾ ಸಹಾಯಕ. ಇದು ಕೆಮ್ಮು-ಶೀತವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುಂಠಿ, ಕೆಮ್ಮು ಮತ್ತು ಶೀತಕ್ಕೆ ಮದ್ದು. ಶುಂಠಿಯು ಗಂಟಲು ನೋವು ಮತ್ತು ಕೆಮ್ಮನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸದಲ್ಲಿ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೆಮ್ಮು ಮತ್ತು ಶೀತ ತಡೆಯಲು ಇದು ಸಹಾಯಕ.
ದಾಲ್ಚಿನ್ನಿ ಪುಡಿ ಗಂಟಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಜೇನು ಕೆಮ್ಮು ಮತ್ತು ಶೀತ ನಿವಾರಣೆಗೆ ಪರಿಣಾಮಕಾರಿ ಔಷಧ.
ಕಷಾಯಕ್ಕೆ ತಪ್ಪದೇ ಜೇನುತುಪ್ಪವನ್ನು ಸೇರಿಸಬೇಕು. ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ.
ಮಳೆಗಾಲದಲ್ಲಿ ಈ ಕಷಾಯ ಹೆಚ್ಚು ಪರಿಣಾಮಕಾರಿ. ಕೆಮ್ಮು ಮತ್ತು ಶೀತಕ್ಕೆ ಅತ್ಯುತ್ತಮ ಮನೆಮದ್ದು. ತುಂಬಾ ಚಿಕ್ಕ ಮಕ್ಕಳಿಗೆ ಕಷಾಯ ಕುಡಿಸಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಪ್ರಮಾಣದಲ್ಲಿ ಕಷಾಯ ಕುಡಿಸಬಹುದು.
ಕಷಾಯ ಯಾವುದೇ ಅಡ್ಡ ಪರಿಣಾಮ ಹೊಂದಿಲ್ಲದಿರುವುದರಿಂದ ಮಳೆಗಾಲದಲ್ಲಿ ಸಾಮಾನ್ಯ ಎನ್ನಬಹುದಾದ ಶೀತ-ಕೆಮ್ಮಿಗೆ ಕಷಾಯ ಅತ್ಯುತ್ತಮ ಔಷಧ.

TAGGED:#Monsoon #season #cold-cough #home made kashaya #drink #health #newsics
Share This Article
Facebook Twitter Copy Link Print
Previous Article ಐದೇ ನಿಮಿಷದಲ್ಲಿ ರಸಂ ತಯಾರಿಸಿ!
Next Article ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಳಬಹುದು!

Popular Posts

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

You Might Also Like

ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳೆ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?