newsics.com
ಇತ್ತೀಚಿನ ದಿನಗಳಲ್ಲಿ ಯುವಕರು ರಿಲೇಷನ್‌ಶಿಪ್‌ನಲ್ಲಿ ಹೊಸ ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಅದು ಸಿಚುವೇಶನ್ ಶಿಪ್ , ಬ್ರೆಡ್ ಕ್ರಂಬಿಂಗ್, ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಹೀಗೆ ನಾನಾ ರೀತಿಯ ರಿಲೇಷನ್‌ಶಿಪ್‌ಗಳನ್ನು ಮಾಡಿಕೊಂಡಿದ್ದಾರೆ.
ಅದರಲ್ಲಿ ಈಗ ಸದ್ದು ಮಾಡುತ್ತಿರುವ ರಿಲೇಷನ್‌ಶಿಪ್ ”ಬೆಂಚಿಂಗ್”. ಅಷ್ಟಕ್ಕೂ ಬೆಂಚಿಂಗ್ ರಿಲೇಶನ್ಶಿಪ್ ಅಂದ್ರೆ ಏನು? ಯಾಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ?
ಇಷ್ಟಕ್ಕೂ ಬೆಂಚಿಂಗ್ ರಿಲೇಶನ್ ಶಿಪ್ ಅಂದ್ರೆ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಇಂಟ್ರೆಸ್ಟ್ ಇದೆ. ಆದರೆ ಆ ವ್ಯಕ್ತಿ ಜತೆ ಸೀರಿಯಸ್ ರಿಲೇಶನ್ ಶಿಪ್ ನಲ್ಲಿರೋದು ಇಷ್ಟವಿರೋದಿಲ್ಲ, ಇದಕ್ಕೆ ಬೆಂಚಿಂಗ್ ಅಂತಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪ್ಲಾಟ್ ಫಾರ್ಮ್‌ಗಳು ಜನರಿಗೆ ಸಂಗಾತಿಯನ್ನು ಹುಡುಕೋದನ್ನು ಸುಲಭಗೊಳಿಸಿವೆ. ಕೆಲವು ಜನರಿಗೆ ‘ಆಯ್ಕೆಗಳನ್ನು ಮುಕ್ತವಾಗಿಡಲು’ ಮತ್ತು ಒಂದೇ ಸಮಯದಲ್ಲಿ ಅನೇಕ ಜನರೊಂದಿಗೆ ಡೇಟಿಂಗ್ ಮಾಡಲು ಸಹ ಅವಕಾಶ ನೀಡಿದೆ. ಇದು ಬೆಂಚಿಂಗ್ ಅಪಾಯ ಹೆಚ್ಚಿಸುತ್ತದೆ.
ಬೆಂಚಿಂಗ್‌ನಂತಹ ರಿಲೇಶನ್‌ಶಿಪ್ ಹೊಂದಿರುವುದು ಇತರ ವ್ಯಕ್ತಿಯ ಭಾವನೆಗಳನ್ನು ನೋಯಿಸಬಹುದು. ನಿಮ್ಮ ಫೀಲಿಂಗ್ ಬಗ್ಗೆ ಯಾವುದೇ ಸೀರಿಯಸ್‌ನೆಸ್ ಇಲ್ಲದೇ ಇರುವ ವ್ಯಕ್ತಿ ಜತೆ ಸಂಬಂಧ ಹೊಂದುವುದರಿಂದ ಸಮಯ ವ್ಯರ್ಥ ಅಷ್ಟೇ. ಅದರ ಬದಲಾಗಿ, ನಿಮ್ಮನ್ನು ಇಷ್ಟಪಡುವ ವ್ಯಕ್ತಿ ಜತೆ ಸಮಯ ಕಳೆಯಿರಿ.
ಈಗಿನ ಕಾಲದಲ್ಲಿ ಹೆಚ್ಚಿನ ಜನರಿಗೆ ಸೀರಿಯಸ್ ರಿಲೇಷನ್‌ಶಿಪ್ ಇಷ್ಟ ಇರಲ್ಲ. ಏಕೆಂದರೆ ಪ್ರೀತಿ ಪ್ರೇಮಕ್ಕೆ ಮನೇಲಿ ಒಪ್ಪಲ್ಲ, ಬ್ರೇಕಪ್ ಆದಾಗ ತುಂಬಾ ನೋವಾಗುತ್ತೆ. ಹೀಗೆ ನಾನಾ ಕಾರಣಗಳಿಂದ ಪ್ರೇಮಿಗಳು ಸೀರಿಯಸ್ ರಿಲೇಷನ್ಶಿಪ್ ಇಟ್ಕೊಳ್ಳಲ್ಲ. ಒಟ್ಟಿನಲ್ಲಿ ರಿಲೇಶನ್ ಶಿಪ್ಪಿನಲ್ಲೂ ಕೂಡ ಟ್ರೆಂಡ್ ಕಾಲಿಟ್ಟಿದ್ದು, ಬಟ್ಟೆ ಬದಲಾಯಿಸಿದಂತೆ ಈ ರಿಲೇಷನ್ಶಿಪ್ ಕೂಡ ಭಾವನೆಗಳನ್ನು ಬದಲಾಯಿಸುವಂತೆ ಮಾಡಬಹುದು.
ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು… ಎಲ್ಲರೂ ಅದನ್ನೇ ನೋಡ್ತಿದ್ರು…!