newsics.com
ನವದೆಹಲಿ: ದೇಶದಲ್ಲಿ ಪುರುಷರ ಒಳಉಡುಪುಗಳ ಮಾರಾಟ ಗಣನೀಯವಾಗಿ ಏರಿಕೆಯಾಗಿದೆ.
ಒಳಉಡುಪು ತಯಾರಿಕಾ ಮತ್ತು ಮಾರಾಟ ಪ್ರಮಖ ಕಂಪನಿಗಳಾದ ಪೇಜ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಫ್ಯಾಶನ್ & ರಿಟೇಲ್, ಅರವಿಂದ್ ಫ್ಯಾಶನ್ಸ್ ಮತ್ತು ರೂಪಾ & ಕಂಪನಿಗಳು ತಮ್ಮ ಮಾರಾಟದ ವರದಿಗಳನ್ನು ಬಹಿರಂಗಗೊಳಿಸಿವೆ.
ಈ ವರದಿಯಲ್ಲಿ ಒಳಉಡುಪುಗಳ ಮಾರಾಟ ಏರಿಕೆಯಾಗಿರುವುದನ್ನು ದೃಢಪಡಿಸಲಾಗಿದೆ. ಒಳ ಉಡುಪುಗಳ ಮಾರಾಟ ಹೆಚ್ಚಿದರೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ, ಅಂಡರ್ವೇರ್ ಮಾರಾಟದ ಏರಿಕೆ ಆರ್ಥವ್ಯವಸ್ಥೆಗೆ ಗುಡ್ನ್ಯೂಸ್ ಎಂದೇ ನಂಬಲಾಗುತ್ತದೆ. ಇದು ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ.
ಬೆಲೆ ಇಳಿಕೆ, ಉತ್ತಮ ಮಳೆಯಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ವೃದ್ಧಿ ಕಾಣುತ್ತಿದ್ದು, ಇದಕ್ಕೆ ಸಾಕ್ಷಿ ಪುರುಷರ ಒಳಉಡುಪು ಮಾರಾಟ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ. ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ.
ಅಂಡರ್ವೇರ್ ಮಾರಾಟ ಅರ್ಥವ್ಯವಸ್ಥೆಯ ಬೆಳವಣಿಗೆ ಅಥವಾ ಕುಂಠಿತವನ್ನು ಹೇಗೆ ಸೂಚಿಸುತ್ತದೆ ಎಂಬುದರ ಬಗ್ಗೆ ಅಮೆರಿಕದ ಫೆಡರಲ್ ರಿಸರ್ವ್ ಮಾಜಿ ಅಧ್ಯಕ್ಷ ಎಲನ್ ಗ್ರೀನ್ಸ್ಪಾನ್ ಅಧ್ಯಯನವಮ್ನೇ ನಡೆಸಿದ್ದಾರೆ. ಒಳಉಡುಪು ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಿರುವ ಎಲನ್, ಇದಕ್ಕೆ ‘ಮೆನ್ ಅಂಡರ್ವೇರ್ ಇಂಡೆಕ್ಸ್’ ಎಂದು ಕರೆದಿದ್ದಾರೆ.
ಜನರು ಆರ್ಥಿಕವಾಗಿ ದುರ್ಬಲರಾಗಿದ್ದಾಗ ಹಣ ಎಲ್ಲಿ ಮತ್ತು ಹೇಗೆ ಉಳಿತಾಯ ಮಾಡಬೇಕು ಎಂದು ಯೋಚಿಸುತ್ತಾರೆ. ಬಹುತೇಕ ಎಲ್ಲಾ ಪುರುಷರು ಒಳಉಡುಪು ಖರೀದಿಸುವುದನ್ನು ನಿಲ್ಲಿಸುತ್ತಾರೆ. ಆರ್ಥಿಕ ಸ್ಥಿತಿ ಕುಸಿದಾಗ ಅವಶ್ಯಕವಲ್ಲದ ಪಟ್ಟಿಯಲ್ಲಿ ಒಳ ಉಡುಪುಗಳೂ ಸೇರಿವೆ ಎಂದು ಎಲನ್ ಹೇಳುತ್ತಾರೆ.
ಕೋವಿಡ್ ಸಮಯದಲ್ಲಿ ಬಟ್ಟೆ ಸೇರಿದಂತೆ ಎಲ್ಲಾ ಉತ್ಪನ್ನಗಳ ಮಾರಾಟ ತೀವ್ರವಾಗಿ ಕುಸಿದಿತ್ತು. ಅದರಲ್ಲಿ ಪುರುಷರ ಒಳಉಡುಪು ಮಾರಾಟವಂತೂ ತೀರಾ ಕುಸಿತ ಕಂಡಿತ್ತು.