newsics.com
ಮೌನಿರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಪಶ್ಚಿಮ ಬಂಗಾಳದ ಮೂಲದ ಮೌನಿ ಅವರು ಹಿಂದಿ ಸಿರೀಯಲ್‌ನಿಂದ ತಮ್ಮ ಕಲಾವೃತ್ತಿಯನ್ನು ಆರಂಭಿಸಿದರು. ಕೇವಲ ನಟಿಯಲ್ಲದೇ ಗಾಯಕಿ, ಕಥಕ್ ನರ್ತಕಿ ಮತ್ತು ಮಾಜಿ ಮಾಡೆಲ್ ಕೂಡ ಆಗಿದ್ದಾರೆ.
ಮೌನಿ ರಾಯ್ ಒಬ್ಬ ಫ್ಯಾಷನಿಸ್ಟ್ ಆಗಿದ್ದು, ಜೊತೆಗೆ ಮಾಡೆಲ್ ಕೂಡ ಆಗಿದ್ದಾರೆ. ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳತ್ತಾ ಇರುತ್ತಾರೆ. ಆದರೆ ಇದೀಗ ನಟಿ ಮೌನಿ ರಾಯ್ ಅಚರು ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಂಚಿದ್ದಾರೆ. ಸ್ಟ್ರಾಪ್‌ಲೆಸ್ ಬ್ಲೌಸ್ ಧರಿಸಿದ ನಟಿ ಪೋನಿಟೇಲ್ ಶೈಲ್ನಲ್ಲಿ ಜಡೆಯನ್ನು ಹೆಣೆದುಕೊಂಡಿದ್ದಾರೆ. ಇದೇ ಫೋಟಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿ ಆಗಾಗ ಭಿನ್ನ ವಿಭಿನ್ನವಾದ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಅತಿ ಹೆಚ್ಚಾಗಿ ಹಾಟ್ ಫೋಟೋಸ್ಗಳನ್ನೇ ಶೇರ್ ಮಾಡಿಕೊಳ್ಳುತ್ತಾ ಇರೋ ನಟಿ 33.4 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಹಾಟ್ ಪೋಟೋಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಸೀರೆಯುಟ್ಟು ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.
ಸ್ಟ್ರಾಪ್‌ಲೆಸ್ ಬ್ಲೌಸ್ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ!