newsics.com
ದೇಶದೆಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಜನರು ಭಕ್ತಿಭಾವದಿಂದ ಬುಧವಾರ ಹಬ್ಬ ಆಚರಿಸಿದ್ದಾರೆ. ದೇಶದ ಹಲವೆಡೆ ಹತ್ತು ದಿನಗಳ ಕಾಲ ಗಣೇಶನಿಗೆ ಪೂಜೆ ನೆರವೇರಲಿದೆ.
ಈ ನಡುವೆ ಸೂರತ್ ನಗರದ ಮಹೀಧರಪುರ ಪ್ರದೇಶದಲ್ಲಿ ಕುಳಿತಿರುವ ‘ಸೂರತ್ ಕಾ ರಾಜ’ ಗಣಪನ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.

ಈ ಗಣೇಶ ಮೂರ್ತಿ ‘ಗುಜರಾತ್‌ನ ಅತ್ಯಂತ ಶ್ರೀಮಂತ ಗಣೇಶ’ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಕಾರಣ ಗಣೇಶನ ಭವ್ಯ ಅಲಂಕಾರ. ಈ ಬಾರಿಯೂ 25 ಕೆಜಿಗಿಂತ ಹೆಚ್ಚು ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ವಜ್ರಖಚಿತ ಅಲಂಕಾರದೊಂದಿಗೆ ವಿಘ್ನ ನಿವಾರಕ ಕಂಗೊಳಿಸುತ್ತಿದ್ದಾನೆ.
ಸೂರತ್ನ ದಲಿಯಾ ಗಾಲಿಯ ಈ ಗಣೇಶ್ ಮೂರ್ತಿಯನ್ನು ಕಳೆದ 52 ವರ್ಷಗಳಿಂದ ಇಲ್ಲಿ ಕೂರಿಸಲಾಗುತ್ತದೆ. ಈ ಪೆಂಡಾಲ್‌ನಲ್ಲಿ ಭಕ್ತರು ದಾನ ಮಾಡಿದ 25 ಕೆಜಿಗಿಂತ ಹೆಚ್ಚು ಚಿನ್ನ ಮತ್ತು ಬೆಳ್ಳಿ ಆಭರಣಗಳಿವೆ.
ಇವುಗಳನ್ನು ವರ್ಷವಿಡೀ ಖಜಾನೆಯಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಈ ಆಭರಣಗಳನ್ನು ಗಣೇಶ ಉತ್ಸವದ ಸಮಯದಲ್ಲಿ ಮಾತ್ರ ಗಣೇಶನಿಗೆ ಧರಿಸುತ್ತಾರೆ. ಈ ವರ್ಷ, 6 ಅಡಿ ಉದ್ದದ, 1 ಕೆಜಿ ಚಿನ್ನ ಮತ್ತು ಬೆಳ್ಳಿಯ ಹಾರವನ್ನು ಮೂರ್ತಿಗೆ ಅಲಂಕರಿಸಲಾಗಿದೆ.
ಅಲ್ಲದೆ, ಒಂದು ಲಕ್ಷ ಅಮೆರಿಕನ್ ವಜ್ರಗಳನ್ನು ಹೊದಿಸಿದ ಎಲೆಯ ಆಕಾರದ ಬೆಳ್ಳಿಯ ವಿಗ್ರಹ ಮತ್ತು 7 ಕೆಜಿ ತೂಕದ ಬೆಳ್ಳಿ ಮೂಷಕ ಕೂಡ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.
ಅಮೂಲ್ಯ ವಿಗ್ರಹ ಮತ್ತು ಆಭರಣಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪೆಂಡಾಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಮತ್ತು 300ಕ್ಕೂ ಹೆಚ್ಚು ಸ್ವಯಂಸೇವಕರು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಎರಡು ಪೊಲೀಸ್ ವಾಹನಗಳನ್ನು ಸಹ ನಿಯೋಜಿಸಲಾಗಿದೆ.
ಗುಜರಾತ್ ಅಲ್ಲದೆ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಭಕ್ತರೂ ಈ ಗಣೇಶನ ಮೇಲೆ ಅಚಲ ನಂಬಿಕೆ ಹೊಂದಿದ್ದಾರೆ.
Garbage Hotel ಒಂದ್ ಕೆಜಿ ಕಸ ಕೊಟ್ರೆ ಹೊಟ್ಟೆ ತುಂಬ ಊಟ ಫ್ರೀ… ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು ಕಸ ಕೊಡಬೇಕು!
School Holiday ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ – ನಾಳೆ ಈ ಜಿಲ್ಲೆಗಳಿಗೆ ಶಾಲೆಗಳಿಗೆ ರಜೆ ಘೋಷಣೆ
ಅಮೆರಿಕ ತೆರಿಗೆ ಭಾರ: ತಿರುಪ್ಪುರ್, ಸೂರತ್, ನೊಯ್ಡಾಗಳಲ್ಲಿನ ಜವಳಿ ಉದ್ಯಮ ಸ್ಥಗಿತ, ಸಾವಿರಾರು ಕಾರ್ಮಿಕರು ಬೀದಿಪಾಲು
ನಿಗದಿತ ಅವಧಿಯಲ್ಲಿ ಈ ಸೂಚನೆ ಪಾಲಿಸದಿದ್ದರೆ ಸರ್ಕಾರಿ ನೌಕರರ ವೇತನ ತಡೆಗೆ ಸರ್ಕಾರ ನಿರ್ಧಾರ
Reels effect ಡೇಟಿಂಗ್‌ಗೆ ಕೊಡಗಿನಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆ! ಭಾರೀ ಚರ್ಚೆಗೆ ಗ್ರಾಸವಾಯ್ತು ರೀಲ್ಸ್
ಗಂಡನ ಜತೆ 15 ದಿನ, ಪ್ರಿಯಕರನ ಜತೆ 15 ದಿನ ಸಂಸಾರ ನಡೆಸಲು ಮಹಿಳೆ ನಿರ್ಧಾರ! ಪಂಚಾಯಿತಿಯಲ್ಲೇ ಘೋಷಣೆ