newsics.com | ನ್ಯೂಸಿಕ್ಸ್
ಅಹಮದಾಬಾದ್: ನಿರಂತರವಾಗಿ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದಾಗಿ ಗುಜರಾತ್ನ ಹಲವು ಜಿಲ್ಲೆಗಳು ನಡುಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರವಾಹದ ಭೀಕರತೆ ಹೆಚ್ಚಾದ ಬೆನ್ನಲ್ಲೇ ಅಹಮದಾಬಾದ್ ಮತ್ತು ಬಗೋಡ್ರಾ ನಡುವಿನ ಪ್ರಮುಖ ‘ರಾಜ್ಕೋಟ್-ಅಹಮದಾಬಾದ್’ ರಾಷ್ಟ್ರೀಯ ಹೆದ್ದಾರಿಯನ್ನು (NH 47) ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಧುಮುಕಿದ್ದು, ಎಸ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸರ ಜೊತೆಗೂಡಿ ಸಮರೋಪಾದಿಯಲ್ಲಿ ಸಂಕಷ್ಟದಲ್ಲಿರುವವರನ್ನು ತೆರವುಗೊಳಿಸುತ್ತಿದೆ. ಬಾವ್ಲಾದ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ನೀರು ಆವರಿಸಿದ್ದರಿಂದ ಅಸಹಾಯಕರಾಗಿದ್ದ ಸುಮಾರು 900 ಮಂದಿಯನ್ನು ಸೇನಾ ಪಡೆಯ ನೆರವಿನಿಂದ ರಕ್ಷಿಸಲಾಗಿದೆ.
ಇತ್ತ ಧೋಲ್ಕಾ ಭಾಗದಲ್ಲಿ ಭಾರಿ ನೀರಿನ ನಡುವೆ ಬರೋಬ್ಬರಿ 11 ಗಂಟೆಗಳ ಕಾಲ ಪರದಾಡುತ್ತಿದ್ದ ವೃದ್ಧೆ ಸೇರಿದಂತೆ ಮೂವರನ್ನು ತಡರಾತ್ರಿ ದೋಣಿಗಳ ಮೂಲಕ ರಕ್ಷಿಸಿ ಕರೆತರಲಾಗಿದೆ. ನೆರೆ ಪೀಡಿತ ಅಂಬ್ಲಿ-ಬೋಪಾಲ್ ಪ್ರದೇಶಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭೇಟಿ ನೀಡಿ ಸ್ಥಿತಿಗತಿಯ ಪರಿಶೀಲನೆ ನಡೆಸಿದ್ದಾರೆ.
Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ