newsics.com | ನ್ಯೂಸಿಕ್ಸ್
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದ್ದು, ರಷ್ಯಾದ ಕಿರೋವ್ ಪ್ರದೇಶದಲ್ಲಿರುವ ಪ್ರಮುಖ ಕೈಗಾರಿಕಾ ಉದ್ಯಮವನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ ಆರು ಜನರು ಮೃತಪಟ್ಟು, 26ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಾಸ್ಕೋದಿಂದ 790 ಕಿ.ಮೀ ದೂರದಲ್ಲಿರುವ ಈ ಕೈಗಾರಿಕೆಯು ರಷ್ಯಾ ಯುದ್ಧ ವಿಮಾನಗಳು ಹಾಗೂ ಕ್ಷಿಪಣಿಗಳಿಗೆ ಬಿಡಿಭಾಗಗಳನ್ನು ತಯಾರಿಸುತ್ತಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಆನ್‌ಲೈನ್ ದೈತ್ಯ ‘ವೈಲ್ಡ್‌ಬೆರ್ರಿಸ್’ ಗೋದಾಮಿನ ಮೇಲೆಯೂ ದಾಳಿ ನಡೆಸಲಾಗಿದ್ದು, ಅಲ್ಲಿ ಸೇನಾ ಡ್ರೋನ್‌ಗಳ ಭಾಗಗಳನ್ನು ಇರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಕೀವ್ ಮೇಲೆ ರಷ್ಯಾ ಪ್ರತಿದಾಳಿ
ಇತ್ತ ಉಕ್ರೇನ್ ರಾಜಧಾನಿ ಕೀವ್ ಹೊರಭಾಗದಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಆರು ಮಂದಿ ಬಲಿಯಾಗಿದ್ದರೆ, ಸ್ಲೊವಿಯಾನ್ಸ್ಕ್ ನಗರದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಅಸುನೀಗಿದ್ದಾರೆ. ರಷ್ಯಾವನ್ನು ಶಾಂತಿ ಮಾತುಕತೆಗೆ ತರಲು ಈ ರೀತಿಯ ಪ್ರತಿದಾಳಿಗಳು ಅನಿವಾರ್ಯ ಎಂದು ಉಕ್ರೇನ್ ಸಮರ್ಥಿಸಿಕೊಂಡಿದೆ. ಯುದ್ಧ ಆರಂಭವಾದಾಗಿನಿಂದ ಇದೇ ಬೇಸಿಗೆಯಲ್ಲಿ ಅತಿ ಹೆಚ್ಚು ನಾಗರಿಕರು ಜೀವ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು