newsics.com
ನೀವಿಲ್ಲಿ ಊಟ ಮಾಡಲು ಹಣ ನೀಡಬೇಕಿಲ್ಲ, ಬದಲಾಗಿ ಕಸ ನೀಡಿದರೆ ಸಾಕು! ಈ ಹೋಟೆಲ್ ಹೆಸರೇ ಹೇಳ್ತಿದೆ, ಕಸ ಕೊಡಿ ಊಟ ಮಾಡಿ. ಈ ಹೋಟೆಲ್ ಈಗ ಭಾರೀ ವೈರಲ್ ಆಗ್ತಿದೆ.
ಛತ್ತೀಸ್‌ಗಢದ ಅಂಬಿಕಾಪುರ ನಗರದ ಗಾರ್ಬೇಜ್ ಕೆಫೆ ತನ್ನ ಅನನ್ಯ ಸೇವೆಯಿಂದ ಎಲ್ಲರ ಗಮನ ಸೆಳೆದಿದೆ. ಇಲ್ಲಿ, ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಉಚಿತವಾಗಿ ಆಹಾರ ಪಡೆಯುತ್ತಾರೆ.
2019ರಲ್ಲಿ ಅಂಬಿಕಾಪುರ ಪುರಸಭೆಯು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಈ ಕೆಫೆಯನ್ನು ಪ್ರಾರಂಭಿಸಿತು. ಇದರ ಉದ್ದೇಶ ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಬಡವರು ಹಾಗೂ ನಿರಾಶ್ರಿತರಿಗೆ ಆಹಾರ ಒದಗಿಸುವುದು.
ಇಲ್ಲಿ 1 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿದರೆ, ಕಸಕ್ಕೆ ಬದಲಾಗಿ ಪೌಷ್ಟಿಕ ಊಟದ ತಟ್ಟೆಯನ್ನು ಉಚಿತವಾಗಿ ಪಡೆಯಬಹುದು. ಅರ್ಧ ಕೆಜಿ (500 ಗ್ರಾಂ) ಪ್ಲಾಸ್ಟಿಕ್ ಕೊಟ್ಟರೆ ವಡಾ ಪಾವ್ ಅಥವಾ ಸಮೋಸಾದಂತಹ ಉಪಾಹಾರವನ್ನು ನೀಡಲಾಗುತ್ತದೆ. ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಗೆ ಕಳುಹಿಸಲಾಗುತ್ತದೆ. ಇದರಿಂದ ನಗರದ ಕಸದ ರಾಶಿಗಳು ಕಡಿಮೆಯಾಗಿ, ಪರಿಸರವು ಸ್ವಚ್ಛವಾಗುತ್ತಿದೆ. ಹಸಿವುನಿಂದ ಬಳಲುತ್ತಿರುವವರು ಪ್ಲಾಸ್ಟಿಕ್ ಕಸ ತಂದು ಉಚಿತವಾಗಿ ಊಟ ಮಾಡುತ್ತಿದ್ದಾರೆ.
https://youtube.com/@newsics_karunadu?si=LCYTsfkEwBnM7Hjh
School Holiday ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ – ನಾಳೆ ಈ ಜಿಲ್ಲೆಗಳಿಗೆ ಶಾಲೆಗಳಿಗೆ ರಜೆ ಘೋಷಣೆ
ಅಮೆರಿಕ ತೆರಿಗೆ ಭಾರ: ತಿರುಪ್ಪುರ್, ಸೂರತ್, ನೊಯ್ಡಾಗಳಲ್ಲಿನ ಜವಳಿ ಉದ್ಯಮ ಸ್ಥಗಿತ, ಸಾವಿರಾರು ಕಾರ್ಮಿಕರು ಬೀದಿಪಾಲು