newsics.com
ಬೆಂಗಳೂರು: ನಾನು ಸೆಲೆಬ್ರಿಟಿಯಾಗಿರುವುದರಿಂದ ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ.
ಪೊಲೀಸರ ನೋಟಿಸ್ಗೆ ಉತ್ತರ ನೀಡಿರುವ ನಟ ದರ್ಶನ್, ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗಾಗಿ ಗನ್ ಬೇಕಾಗುತ್ತದೆ. ಆದ್ದರಿಂದ ಗನ್ ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈಗಾಗಲೇ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜಾಮೀನು ರದ್ದುಮಾಡುವಂತೆ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಬೆನ್ನಲ್ಲೇ ದರ್ಶನ್ ಬಳಿಯಿದ್ದ ಗನ್ ಲೈಸೆನ್ಸ್ ರದ್ದು ಮಾಡಲು ಪೊಲೀಸರು ನಿರ್ಧರಿಸಿ ನಟ ದರ್ಶನ್ಗೆ ನೋಟಿಸ್ ನೀಡಿದ್ದರು. ಇದಕ್ಕೆ ನಟ ದರ್ಶನ್ ಉತ್ತರ ನೀಡಿದ್ದಾರೆ.
ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ, ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಸ್ ಲೈಸೆನ್ಸ್ ರದ್ದುಪಡಿಸಬೇಕಾಗಿದೆ ಎಂದು ಪೊಲೀಸರು ನೋಟಿಸ್ ನೀಡಿದ್ದರು.
ಈ ನಡುವೆ, ನಟ ದರ್ಶನ್ ಗ್ಯಾಂಗ್ನಿಂದ ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿಯ ತಂದೆ ಶಿವನಗೌಡ ಅವರು, ನಾವು ಯಾರಿಂದಲೂ ಹಣ ಪಡೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
Relationship ಶೇ.60 ಮಹಿಳೆಯರು, 53% ಪುರುಷರು ಹೆಚ್ಚಿನ ‘Sಕ್ಸ್’ ಬಯಸುತ್ತಾರಂತೆ!
Pregnant mountain! ಗರ್ಭಿಣಿಯಾಗಬಯಸುವ ಮಹಿಳೆಯರು ಈ ಪರ್ವತಕ್ಕೆ ಬರ್ತಾರೆ! ಏನಿದರ ಮಹತ್ವ?
Sanjith Hegde v/s Manju ಸಂಜಿತ್ ಹೆಗಡೆ ಸೇರಿ ಕನ್ನಡ ಗಾಯಕರ ವಿರುದ್ಧ ನಿರ್ಮಾಪಕ ಮಂಜು ಗರಂ ಆಗಿದ್ದೇಕೆ?
Israel-Hamas war ಒಂದೂವರೆ ವರ್ಷದ ಇಸ್ರೇಲ್- ಹಮಾಸ್ ಯುದ್ಧ ಕೊನೆಗೂ ಅಂತ್ಯ
Realbotics ಸಿಂಗಲ್ ಬಾಯ್ಸ್ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!