newsics.com
ಹುಡುಗಿಯರಂತೆಯೇ ಅತ್ಯಂತ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ರೋಬೋಟ್ ಮಾರುಕಟ್ಟೆಗೆ ಬಂದಿದೆ.
ಅಮೆರಿಕ ಮೂಲದ ಟೆಕ್ ಕಂಪನಿ ರಿಯಲ್ ಬೊಟಿಕ್ಸ್ (Realbotics) ಈ ಕ್ರಾಂತಿಕಾರಿ ಆವಿಷ್ಕಾರ ಮಾಡಿದೆ. ಈ ಕಂಪನಿ ತಯಾರಿಸಿದ AI ರೋಬೋಟ್ ಮಾನವನ ರೀತಿಯಲ್ಲಿ ಅಭಿವ್ಯಕ್ತಿಗಳನ್ನು ತೋರ್ಪಡಿಸುತ್ತದೆ. ಈ ರೋಬೋಟ್‌ಗಳು ಮಾನವರ ರೀತಿಯಲ್ಲಿಯೇ ಕೆಲಸ ಮಾಡಲಿವೆ ಎಂದು ಕಂಪನಿ ಹೇಳಿಕೊಂಡಿದೆ.
ಟೆಕ್ ಕಂಪನಿಯು ಆರಿಯಾ ಎಂಬ ಹೆಸರಿನ AI ರೋಬೋಟ್‌ಗೆ ಗೆಳತಿಯನ್ನು ನೀಡಿದೆ. ಈ ರೋಬೋಟ್ ಒಂಟಿ ಪುರುಷರಿಗೆ ಪ್ರೇಮಿಯಂತೆ ಸಹಕರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜನವರಿ ಮೊದಲ ವಾರದಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ 2025ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ರಿಯಲ್‌ಬೋಟಿಕ್ಸ್ ಆರಿಯಾಳನ್ನು ಜಗತ್ತಿಗೆ ಪರಿಚಯಿಸಿತು. ಈ AI ಪ್ರಿಯತಮೆಯ ಬೆಲೆ ರೂ 1.5 ಕೋಟಿ ($175,000) ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.
https://twitter.com/dominicditanna/status/1877175915806945683
ಪ್ರೀತಿ ಮಾಡುವ ಹುಡುಗಿಯಂತೆ ರೊಮ್ಯಾಂಟಿಕ್ ಆಗಿ ವರ್ತಿಸುವ ಈ ರೋಬೋಟ್ ತನ್ನ ಪ್ರೀತಿ ಪಾತ್ರ ವ್ಯಕ್ತಿಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆರಿಯಾ ಎಐ ರೋಬೋಟ್ ನಿರ್ಮಾಣದ ವೇಳೆ ಇದನ್ನು ಖರೀದಿ ಮಾಡುವ ವ್ಯಕ್ತಿಯೊಂದಿಗೆ ಹೇಗೆ ಪ್ರೀತಿಯಿಂದ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಅದಕ್ಕೆ ಸರಿ ಹೊಂದುವ ಮುಖಭಾವ ಹೇಗೆ ವ್ಯಕ್ತಪಡಿಸಬೇಕು ಎಂಬುದರ ಮೇಲೆ ಕೇಂದ್ರೀಕರಿಸಿದ್ದಾರೆ.