newsics.com
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಬೆನ್ನಲ್ಲೇ ಮೈಸೂರು ಜಿಲ್ಲೆ ನಂಜನಗೂಡಿನಲ್ಲೂ ಕರುವಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ದೇವಸ್ಥಾನದಲ್ಲಿ ಹರಕೆಗೆ ಬಿಟ್ಟ ಕರುವಿನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾರೆ. ಕರುವಿನ ಹಿಂಬದಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದ್ದು, ಬಾಲ ತುಂಡಾಗುವ ಸ್ಥಿತಿಯಲ್ಲಿದೆ. ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಗೋ ಕಳ್ಳಸಾಗಣೆದಾರರು ಹರಕೆಗೆ ಬಿಟ್ಟ ಕರುವನ್ನು ಎಳೆದೊಯ್ಯಲು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಬಾಲ ಹಿಡಿದು ಎಳೆದಿದ್ದಲ್ಲದೆ ಮಚ್ಚಿನಿಂದ ಬಾಲ ಕತ್ತರಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Actor Darshan ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ: ಪೊಲೀಸರಿಗೆ ನಟ ದರ್ಶನ್ ಮನವಿ
Pregnant mountain! ಗರ್ಭಿಣಿಯಾಗಬಯಸುವ ಮಹಿಳೆಯರು ಈ ಪರ್ವತಕ್ಕೆ ಬರ್ತಾರೆ! ಏನಿದರ ಮಹತ್ವ?
Sanjith Hegde v/s Manju ಸಂಜಿತ್ ಹೆಗಡೆ ಸೇರಿ ಕನ್ನಡ ಗಾಯಕರ ವಿರುದ್ಧ ನಿರ್ಮಾಪಕ ಮಂಜು ಗರಂ ಆಗಿದ್ದೇಕೆ?