newsics.com
ಹಳ್ಳುಗಳನ್ನು ಸ್ವಚ್ಚಗೊಳಿಸುವುದು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿದೆ. ಪ್ರತಿದಿನ ಮೌತ್ ವಾಶ್ ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಮೌತ್ ವಾಶ್ ಬಳಕೆಯನ್ನು ಮಿತಿಗೊಳಿಸಿ, ಅಂದರೆ ಪ್ರತಿದಿನ ಬಳಸುವುದನ್ನು ತಪ್ಪಿಸಿ ಎಂದು ಎಚ್ಚರಿಕೆ ನೀಡುತ್ತಾರೆ.
ಮೌತ್ ವಾಶ್ ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದಲ್ಲದೆ ಇದು ಅನೇಕ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಪ್ರತಿದಿನ ಅಥವಾ ಅತಿಯಾಗಿ ಮೌತ್ ವಾಶ್ ಬಳಸುವ ಜನರಿಗೆ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದರಲ್ಲಿ ಬಳಕೆಯಾಗುವ ವಸ್ತುಗಳು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಇದನ್ನು ಕಡಿಮೆ ಬಳಸಿ, ಆರೋಗ್ಯವಾಗಿರಿ.
ಮೌತ್ ವಾಶ್ ನಲ್ಲಿ ಆಲ್ಕೋಹಾಲ್ ಅಂಶವಿರುತ್ತದೆ. ಇದು ನಿಮ್ಮ ಬಾಯಿಯನ್ನು ಒಣಗಿಸುತ್ತದೆ. ಅದಲ್ಲದೆ ದಿನನಿತ್ಯದ ಬಳಕೆಯು ದೇಹದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಕೆಲವು ಅಧ್ಯಯನಗಳ ಪ್ರಕಾರ, ಮೌತ್ ವಾಶ್ ನ ಬಳಕೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.