newsics.com
ಚೀನಾ: ಪ್ರೀತಿ ಕುರುಡು, ಅದಕ್ಕೆ ವಯಸ್ಸು, ಜಾತಿ, ರೂಪ ಅಂತಸ್ತು ಯಾವೊಂದೂ ಅಡ್ಡಿಯಾಗುವುದಿಲ್ಲ ಎಂಬ ಮಾತು ಕ್ಲೀಶೆಯಂತೆ ಕೇಳಬಹುದು. ಆದರೆ, ಈ ಅಜ್ಜ ವೃದ್ಧಾಶ್ರಮ ದಿನ ಕೆಲಸ ಮಾಡುತ್ತಿದ್ದ ಹುಡುಗಿನೆ ಲವ್ ಮಾಡಿ ಮದುವೆಯಾಗಿದ್ದಾರೆ.ಲೀ ಎಂಬ ಈ ಹಣ್ಣು ಹಣ್ಣು ಮುದುಕ ಕ್ಸಿಯಾಫಂಗ್ ಎಂಬ 23 ವರ್ಷದ ಚೆಲುವೆಯನ್ನು ವಿವಾಹವಾಗಿದ್ದಾರೆ.
ಮೊದಲಿಗೆ ಈ ಲೀ ತಾತ, Xiaofangಳ ಪ್ರೌಢತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಹೊಗಳಿದರಂತೆ. ಹೊಗಳಿಕೆಗೆ ಬೀಳದ ಹುಡುಗಿಯರ್ಯಾರು? ಅಂತೆಯೇ ಇವರಿಬ್ಬರ ನಡುವೆ ಸ್ನೇಹ ಅರಳಿತು. ನಂತರ ಕ್ಸಿಯಾಫಂಗ್‌ಳ ಯೌವನದ ಚೈತನ್ಯ ಮತ್ತು ದಯೆಗೆ ಲಿ ಸೆಳೆಯಲ್ಪಟ್ಟರು. ವಿಷಯ ತಿಳಿಯುತ್ತಿದ್ದಂತೆ ಕ್ಸಿಯಾಫಂಗ್‌ಳ ಕುಟುಂಬದಿಂದ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಯಿತು.
ದಂಪತಿ ಸಾಧಾರಣ ಸಮಾರಂಭದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು, ಇದಕ್ಕೆ ಎರಡೂ ಕಡೆಯಿಂದ ಕುಟುಂಬ ಸದಸ್ಯರು ಗೈರು ಹಾಜರಾಗಿದ್ದರು. ಅವರ ಪ್ರೀತಿಯನ್ನು ಪ್ರದರ್ಶಿಸುವ ಅವರ ಮದುವೆಯ ಫೋಟೋಗಳು, ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಸೃಷ್ಟಿ ಮಾಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಟ ದರ್ಶನ್‌ಗೆ ಎದುರಾಗುತ್ತಾ ಮತ್ತಷ್ಟು ಕಂಟಕ? ಗ್ರಹಗತಿ ಬಗ್ಗೆ ಅರ್ಚಕರ ಮಾತು
ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ