newsics.com
ಮೈಸೂರು: ಕರ್ನಾಟಕದ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಕಳೆದ ವಾರ ಅವರು ಬೆಂಗಳೂರಿಗೆ ಕಾರಲ್ಲಿ ಹೊರಟಿದ್ದಾಗ ಇನ್ನೊಂದು ಕಾರು ಬಂದು ಡಿಕ್ಕಿ ಹೊಡೆದ ಘಟನೆ ಮಂಡ್ಯದ ಬಳಿ ನಡೆದಿತ್ತು. ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರಾದ ಡಾ.ಜಯಲಕ್ಷ್ಮೀ ಅವರ ಪತಿ ಡಾ.ರಾಜಶೇಖರ್
ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ವಿದೇಶದಲ್ಲಿ ಇಬ್ಬರು ಪುತ್ರಿಯರು ಇದ್ದಾರೆ.
ಅವರ ಅಂತ್ಯಕ್ರಿಯೆ ಮಂಗಳವಾರ (ಜೂನ್ 18) ಮಧ್ಯಾಹ್ನ ಕುವೆಂಪು ನಗರದ ಕಾವೇರಿ ಶಾಲೆ ಹತ್ತಿರದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ.ಜಯಲಕ್ಷ್ಮೀ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ‘ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು’ ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.
ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ.ಜಯಲಕ್ಷ್ಮೀ ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿಯೂ ಲಭಿಸಿದೆ.
ಡಾ.ಪ್ರೀತಿ ಶುಭಚಂದ್ರ, ಡಾ.ಎಚ್.ಎಲ್.ಶೈಲಾ ಹಾಗೂ ಡಾ.ಎಚ್.ಗೌರಮ್ಮ ಅವರು ಸಂಪಾದಿಸಿದ ‘ಜಾನಪದ ಮಹಿಳಾಯಾನ’ ಕೃತಿಯನ್ನು ಅವರಿಗೆ ಸಮರ್ಪಿಸಲಾಗಿತ್ತು.
ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು… ಎಲ್ಲರೂ ಅದನ್ನೇ ನೋಡ್ತಿದ್ರು…!
ಜುಲೈ 22ಕ್ಕೆ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ, ದಾಖಲೆ ಮುರಿಯಲು ನಿರ್ಮಲಾ ಸೀತಾರಾಮನ್ ಸಜ್ಜು
ಹಾರ್ವರ್ಡ್ ವಿವಿ ಸಂಶೋಧಕರ ವರದಿಗೆ ಬೆಚ್ಚಿಬಿದ್ದ ಜಗತ್ತು: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ!