newsics.com
ನವದೆಹಲಿ: ಹೊಸ ಸರ್ಕಾರದಲ್ಲೂ ರೈಲ್ವೆ ಸಚಿವರಾಗಿಯೇ ಮುಂದುವರಿದಿರುವ ಅಶ್ವಿನಿ ವೈಷ್ಣವ್ ಅವರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವೀ ಸಂಚಾರ ನಡೆಸುತ್ತಿದೆ. ಇದಕ್ಕೆ ಪ್ರಯಾಣಿಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನೆರಡು ತಿಂಗಳಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
https://x.com/ani_digital/status/1802030515924455517?ref_src=twsrc%5Etfw%7Ctwcamp%5Etweetembed%7Ctwterm%5E1802030515924455517%7Ctwgr%5E75aa34f09a9aa3860d17454ea29cd1e22fe22c58%7Ctwcon%5Es1_&ref_url=https%3A%2F%2Fwww.prajavani.net%2Fnews%2Findia-news%2Findias-first-vande-bharat-sleeper-trains-will-be-on-track-within-2-months-says-vaishnaw-2848329
‘ವಂದೇ ಭಾರತ್ ಸ್ವೀಪರ್ ರೈಲಿನ ರೈಲುಸೆಟ್ ಅನ್ನು ಪೂರ್ಣಗೊಳಿಸುವ ಕೆಲಸವು ಭರದಿಂದ ಸಾಗುತ್ತಿದೆ. ಮೊದಲ ರೈಲು ಎರಡು ತಿಂಗಳೊಳಗೆ ಟ್ರ್ಯಾಕ್‌ಗೆ ಬರಲಿದೆ. ಎಲ್ಲಾ ತಾಂತ್ರಿಕ ಕೆಲಸಗಳು ಕೊನೆಯ ಹಂತದಲ್ಲಿವೆ. ರೈಲುಸೆಟ್ ಅನ್ನು ಬಿಇಎಂಎಲ್ ಲಿಮಿಟೆಡ್ ತನ್ನ ಬೆಂಗಳೂರಿನ ಘಟಕದಲ್ಲಿ ತಯಾರಿಸಿದೆ. ಬಹುನಿರೀಕ್ಷಿತ ವಂದೇ ಭಾರತ್ ಸ್ಟೀಪರ್ ಕೋಚ್ ರೈಲು ಜಾಗತಿಕ ಮಾನದಂಡಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ್ ಸ್ವೀಪರ್ ಟ್ರೇನ್ ಅನ್ನು ಉನ್ನತ ದರ್ಜೆಯ ಆಸ್ಟೆನಿಟಿಕ್ ಸ್ಪೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗಿದೆ. ಕ್ರಾಶ್ ಬಫರ್‌ಗಳನ್ನು ಅಳವಡಿಸಲಾಗಿದೆ. ಅತ್ಯಂತ ಸುರಕ್ಷಿತ ಮಾನದಂಡಗಳನ್ನು ಈ ರೈಲಿನಲ್ಲಿ ಅಳವಡಿಸಲಾಗಿದೆ. ಅಗ್ನಿ ನಿರೋಧಕ ಸಾಮರ್ಥ್ಯದ ಪರಿಕರಗಳನ್ನು ಬಳಸಲಾಗಿದೆ ಎಂದಿದ್ದಾರೆ.ಬಿಇಎಂಎಲ್ ರೈಲಿನ ಒಳವಿನ್ಯಾಸ, ಸ್ಟೀಪರ್ ಕೋಚ್ ಮತ್ತು ಹೊರ ವಿನ್ಯಾಸಗಳನ್ನು ಮಾಡಿದ್ದು, ಆಕರ್ಷಣೆ ಮತ್ತು ಕ್ರಿಯಾತ್ಮಕತೆ ಎರಡಕ್ಕೂ ಅವಕಾಶ ನೀಡಲಾಗಿದೆ ಎಂದರು.