Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ
ವಿದೇಶ

ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ

Share
1 Min Read
SHARE

newsics.com

ಫ್ಲೋರಿಡಾ: ಐರ್ಲೆಂಡ್ ವಿರುದ್ಧ ಮೂರು ವಿಕೆಟ್‌ಗಳ ಪ್ರಯಾಸದ ಜಯದೊಂದಿಗೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು.

2009ರ ಚಾಂಪಿಯನ್ ಪಾಕಿಸ್ತಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಔಪಚಾರಿಕ ಪಂದ್ಯದಲ್ಲಿ ಜಯ ಕಂಡಿತು.

ಡಿ ಗ್ರೂಪ್ ಪಂದ್ಯಗಳಲ್ಲಿ ಭಾರತ ಮತ್ತು ಯುಎಸ್ ವಿರುದ್ಧ ಸೋತ ಬಳಿಕ ಪಾಕ್ ಸೂಪರ್-8 ಕನಸು ಕಮರಿತ್ತು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಶಾಹೀನ್ ಶಾ ಆಫ್ರಿದಿ (22/3) ಹಾಗೂ ಇಮಾದ್ ವಾಸಿಂ (8/3) ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಐರ್ಲೆಂಡ್ 9 ವಿಕೆಟ್‌ಗೆ 106 ಮಾತ್ರ ಗಳಿಸಲು ಶಕ್ತವಾಯಿತು.

ತಂಡದ ಮೊತ್ತ 32 ರನ್ ಆಗುವಷ್ಟರಲ್ಲೇ ಐರ್ಲೆಂಡ್ನ 6 ವಿಕೆಟ್ ಉರುಳಿದ್ದು, ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಪಾಲ್ ಸ್ಟಿರ್ಲಿಂಗ್ 1, ಆಂಡ್ರ್ಯೂ ಬಾಲ್ಬಿರ್ನಿ 0, ವಿಕೆಟ್ ಕೀಪರ್ ಲೋರ್ಕನ್ ಟಕ್ಕರ್ 2, ಹ್ಯಾರಿ ಟೆಕ್ಟರ್ 0, ಕರ್ಟಿಸ್ ಕ್ಯಾಂಫರ್ 7 ಹಾಗೂ ಜಾರ್ಜ್ ಡಾಕ್ರೆಲ್ 11 ರನ್ಗೆ ವಿಕೆಟ್ ಒಪ್ಪಿಸಿದರು.

https://x.com/ICC/status/1802404555746906516?ref_src=twsrc%5Etfw%7Ctwcamp%5Etweetembed%7Ctwterm%5E1802404555746906516%7Ctwgr%5E2d3dea3933e39f529598c101ee4db08a89f8205d%7Ctwcon%5Es1_&ref_url=http%3A%2F%2Fnewsroom.etvbharat.org

ಈ ಹಂತದಲ್ಲಿ ಒಂದಾದ ಗರೆಥ್ ಡೆಲಾನಿ (31) ಹಾಗೂ ಮಾರ್ಕ್ ಅಡೇರ್(15) 44 ರನ್ ಜೊತೆಯಾಟವಾಡಿ ತಂಡವನ್ನು ಭಾರಿ ಒತ್ತಡದಿಂದ ಪಾರು ಮಾಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಜೋಶುವಾ ಲಿಟಲ್ 22 ರನ್ ಕಾಣಿಕೆ ನೀಡಿ ಐರ್ಲೆಂಡ್ ತಂಡವನ್ನು ನೂರರ ಗಡಿ ದಾಟಿಸಿದರು. ಪಾಕ್ ಪರ ಶಾಹೀನ್ ಶಾ ಆಫ್ರಿದಿ 22ಕ್ಕೆ 3, ಅಮಿರ್ 11ಕ್ಕೆ 2 ಹಾಗೂ ಇಮಾದ್ ವಾಸಿಂ 8 ರನ್ಗೆ 3 ವಿಕೆಟ್ ಪಡೆದರು.

ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ

ಸಸಿ ರಕ್ಷಣೆ, ಬೆಳವಣಿಗೆಗೆ ಜಿಯೋ ಟ್ಯಾಗಿಂಗ್

ACಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ‘ನಿದ್ರಾ’ ಪ್ರತಿಭಟನೆ!

TAGGED:#Pakistan #Ireland #T20 Cricket World Cup #sports #newsics
Share This Article
Facebook Twitter Copy Link Print
Previous Article ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಶೀಘ್ರ ಸಂಚಾರ
Next Article ಬಾಂಗ್ಲಾದೇಶದ ವಿಕೆಟ್ ಪತನ: ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದ ನೇಪಾಳಿ ಅಭಿಮಾನಿ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?