Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Country’s first glass bridge ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?
ದೇಶಪ್ರಮುಖ

Country’s first glass bridge ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?

Share
1 Min Read
SHARE

newsics.com

ತಮಿಳುನಾಡು: ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಗಾಜಿನ ಸೇತುವೆಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಲೋಕಾಪರ್ಣೆಗೊಳಿಸಿದರು.

‘ಕನ್ಯಾಕುಮಾರಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಉದ್ದೇಶದಿಂದ ಗಾಜಿನ ಸೇತುವೆ ನಿರ್ಮಾಣವಾಗಿರುವುದು ದೂರದೃಷ್ಟಿ ಯೋಜನೆ’ ಎಂದು ಸ್ಟಾಲಿನ್ ಬಣ್ಣಿಸಿದರು.

ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ವಾಸ್ತುಶಿಲ್ಪದ ಅದ್ಭುತ ಗಾಜಿನ ಸೇತುವೆ ವಿವೇಕಾನಂದರ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ.

ಗಾಜಿನ ಸೇತುವೆಯು 252 ಅಡಿ (77 ಮೀಟರ್) ಉದ್ದ ಮತ್ತು 10 ಮೀ. ಅಗಲಕ್ಕೆ ವ್ಯಾಪಿಸಿದೆ. ಬರೋಬ್ಬರಿ 37 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡು ಸರ್ಕಾರ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಇದು ಕನ್ಯಾಕುಮಾರಿಯ ಪ್ರವಾಸೋದ್ಯಮ ಆಕರ್ಷಣೆಗೆ ಇನ್ನಷ್ಟು ಕೊಡುಗೆ ನೀಡಲಿದೆ. ಪ್ರವಾಸಿಗರಿಗೆ ಈ ಸೇತುವ ಹೊಸ ಅನುಭವವನ್ನು ನೀಡುತ್ತದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ.

ಪ್ರವಾಸಿಗರು ಈ ಹಿಂದೆ ಕನ್ಯಾಕುಮಾರಿ ಬೋಟ್ ಜೆಟ್ಟಿಯಿಂದ ವಿವೇಕಾನಂದ ಸ್ಮಾರಕಕ್ಕೆ ಮತ್ತು ನಂತರ ತಿರುವಳ್ಳುವರ್ ಪ್ರತಿಮೆಗೆ ದೋಣಿಯಲ್ಲಿ ಪ್ರಯಾಣಿಸಬೇಕಾಗಿತ್ತು. ಇದೀಗ ಗಾಜಿನ ಸೇತುವೆ ಉದ್ಘಾಟನೆ ಆಗಿರುವುದರಿಂದ, ಇನ್ನು ಮುಂದೆ ಪ್ರವಾಸಿಗರು ಎರಡು ಸ್ಮಾರಕಗಳ ನಡುವೆ ನಡೆದುಕೊಂಡೇ ಹೋಗಬಹುದಾಗಿದೆ.

ವಿಶೇಷತೆಗಳೇನು?
77 ಅಡಿ ಉದ್ದ ಮತ್ತು 10 ಮೀಟರ್ ಅಗಲವನ್ನು ವ್ಯಾಪಿಸಿರುವ ‘ಬೌಸ್ಟ್ರಿಂಗ್-ಆರ್ಚ್’ ವಿನ್ಯಾಸದ ಗಾಜಿನ ಸೇತುವೆ, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ.

ಇದರಲ್ಲಿ ಕ್ರಮಿಸುವಾಗ ಪ್ರವಾಸಿಗರಿಗೆ ಸಮುದ್ರದ ಮೇಲೆ ನಡೆಯುವ ಭಾವನೆಯನ್ನು ನೀಡುತ್ತದೆ. ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಸೇತುವೆಯನ್ನು ನಿರ್ಮಿಸಲಾಗಿದೆ.

ಹೆಚ್ಚಿನ ಆರ್ದ್ರತೆ, ಸಮುದ್ರದ ಉಪ್ಪು ನೀರಿನ ಗಾಳಿ ಮತ್ತು ಸವೆತ ಸೇರಿದಂತೆ ಕಠಿಣ ಪರಿಸ್ಥಿತಿಗಳನ್ನು ವಿರೋಧಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಎರಡು ಐತಿಹಾಸಿಕ ಸ್ಮಾರಕಗಳನ್ನು ಸಂಪರ್ಕಿಸುವ ಮೂಲಕ ಈ ಗಾಜಿನ ಸೇತುವೆಯು ತಮಿಳುನಾಡಿನ ಶ್ರೀಮಂತ ಪರಂಪರೆಯನ್ನು ಮತ್ತು ಆಧುನಿಕ ಇಂಜಿನಿಯರಿಂಗ್‌ನ ಸಾಧನೆಗಳನ್ನು ಪ್ರದರ್ಶಿಸುತ್ತದೆ. ಜತೆಗೆ ಈ ಹೂಡಿಕೆಯಿಂದ ಸ್ಥಳೀಯ ಪ್ರವಾಸೋದ್ಯಮ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಿದೆ.

Health Tips ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತಾ? ಈಗ ತಲೆ ಧಿಂ ಅಂತಿದ್ಯಾ? ಹೀಗೆ ಮಾಡಿದ್ರೆ ಹ್ಯಾಂಗೋವರ್ ಮಾತೇ ಇಲ್ಲ!

New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?

HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…

M M Hills ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಿದ್ಧತೆ

TAGGED:Country's first glass bridge at Kanyakumari! What is special?
Share This Article
Facebook Twitter Copy Link Print
Previous Article New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?
Next Article New generation starts ಇಂದಿನಿಂದ ಹೊಸ ಪೀಳಿಗೆ ಶುರು, ಇನ್ನು ಹುಟ್ಟುವವರೆಲ್ಲ ಬೀಟಾ ಮಕ್ಕಳು…! ಏನಿದು ಬೀಟಾ ಬೀಟ್?

Popular Posts

ಭಾರತದಲ್ಲಿದೆ ವಿಶ್ವದ ಅತಿ ದೊಡ್ಡ ಕುಟುಂಬ; ಕುಟುಂಬದ ಸಂಖ್ಯಾಬಲ ಎಷ್ಟು ಗೊತ್ತಾ?

2 Min Read

ಎಳನೀರಿಗೆ ನಿಂಬೆ ರಸ ಹಿಂಡಿ ಕುಡಿದರೆ ಏನಾಗುತ್ತೆ ?

1 Min Read

ಬಿಗ್ ಬಾಸ್ ಶೋಗೆ ಆಡಿಷನ್ ಕೊಡೋದು ಹೇಗೆ? ಈ ವಿಡಿಯೋ ನೋಡಿ

1 Min Read

₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ಆಸ್ತಿ ಮೌಲ್ಯ ಕಂಡು ದಂಗಾದ ಅಧಿಕಾರಿಗಳು

2 Min Read

You Might Also Like

ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

2 Min Read
ಕರ್ನಾಟಕಪ್ರಮುಖ

ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

1 Min Read
ದೇಶಪ್ರಮುಖ

ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?

2 Min Read
ಕರ್ನಾಟಕಪ್ರಮುಖ

ಮದುವೆ ಆಗೋದಾಗಿ ಹೇಳಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?