Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…
ಅನಾವರಣಈ ದಿನಪ್ರಮುಖ

HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…

Share
2 Min Read
SHARE

newsics.com

ಹೊಸ ವರ್ಷದ ಮೊದಲ ದಿನ ಹಾಗಿರಬೇಕು, ಹೀಗಿರಬೇಕು ಎಂದು ಜನರು ಪ್ಲಾನ್ ಮಾಡ್ತಾರೆ. ಆದ್ರೆ ಅದನ್ನು ಕಾರ್ಯರೂಪಕ್ಕೆ ತರುವವರ ಸಂಖ್ಯೆ ತೀರಾ ವಿರಳ.

ಬೆಳಗಿನ ಜಾವದವರೆಗೆ ಪಾರ್ಟಿ ಮಾಡುವ ಜನರಿಗೆ ವರ್ಷದ ಮೊದಲ ಬಾಲಸೂರ್ಯನನ್ನೇ ನೋಡಲು ಸಾಧ್ಯವಾಗಲ್ಲ. ಅವರೆಲ್ಲ ಹ್ಯಾಂಗೋವರ್‌ನಲ್ಲೇ ಇರ್ತಾರೆ‌.

ಇನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ವರ್ಷದ ಮೊದಲ ದಿನವನ್ನು ಶುರು ಮಾಡ್ತಾರೆ. ವರ್ಷದ ಮೊದಲ ದಿನ ನಾವು ಮಾಡುವ ತಪ್ಪುಗಳು ಇಡೀ ವರ್ಷ ನಮ್ಮನ್ನು ಕಾಡುತ್ತವೆ ಎನ್ನುವ ನಂಬಿಕೆಯೊಂದಿದೆ.

2025ರ ಮೊದಲ ದಿನ ನೀವು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ. ಇದರಿಂದ ಸಮಸ್ಯೆ ನಿಮ್ಮ ಜತೆಯಾಗಬಹುದು. ಹೀಗಾಗಿ ನೀವು ಈ ಬರಹವನ್ನು ಗಂಭೀರವಾಗಿ ಓದಿ, ಸುದೀರ್ಘ ಕಾಲ ನೆನಪಿಟ್ಟುಕೊಳ್ಳಿ.

ಅಳದಿರಿ:

ವರ್ಷಪೂರ್ತಿ ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕು. ಹೀಗಾಗಿ ಯಾವುದೇ ಕಾರಣಕ್ಕೂ ವರ್ಷದ ಮೊದಲ ದಿನ ಕಣ್ಣೀರು ಹಾಕ್ಬೇಡಿ. ನಕಾರಾತ್ಮಕ ಆಲೋಚನೆಯನ್ನು ಮಾಡ್ತಾ, ನಿಮ್ಮ ಕಷ್ಟಗಳನ್ನು ನೆನಪಿಸಿಕೊಳ್ತಾ ನೋವು ತಿನ್ನಬೇಡಿ. ಯಾವುದೇ ಕಾರಣಕ್ಕೂ ಅಳಬೇಡಿ. ಮೊದಲ ದಿನವನ್ನು ಸಾಧ್ಯವಾದಷ್ಟೂ ಖುಷಿಯಿಂದ ಕಳೆಯಿರಿ. ಪ್ರತಿ ಕ್ಷಣವನ್ನೂ ಸಕಾರಾತ್ಮಕ ಆಲೋಚನೆಗೆ ಮೀಸಲಿಡಿ.

ಯಾವುದೇ ವಸ್ತು ನಾಶ ಮಾಡದಿರಿ:

ವರ್ಷದ ಮೊದಲ ದಿನ ಯಾವುದೇ ವಸ್ತುವನ್ನು ಒಡೆಯಬೇಡಿ. ಅದು ಗಾಜಿನ ವಸ್ತುವಾಗಿರಲಿ ಅಥವಾ ಬೇರೆ ಯಾವುದೇ ವಸ್ತುವಿರಲಿ. ಅದನ್ನು ಕೆಳಗೆ ಬೀಳಿಸಿ ಒಡೆಯುವ ತಪ್ಪು ಮಾಡ್ಬೇಡಿ. ಇದರಿಂದ ದುರಾದೃಷ್ಟ ನಿಮ್ಮ ನೆರಳಾಗಬಹುದು.

ಕಪ್ಪು ಬಟ್ಟೆ ಬೇಡ:

ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಅಶುಭ ಎನ್ನಲಾಗುತ್ತದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅಥವಾ ವರ್ಷದ ಮೊದಲ ದಿನ ನೀವು ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ.

ಪರ್ಸ್‌ನಲ್ಲಿರಲಿ ಹಣ:

ವರ್ಷದ ಮೊದಲ ದಿನ ನಿಮ್ಮ ಪರ್ಸ್ ಖಾಲಿ ಇಡಬೇಡಿ. ಪರ್ಸ್ನಲ್ಲಿ ಹಣ ಇರುವಂತೆ ನೋಡಿಕೊಳ್ಳಿ. ಪರ್ಸ್‌ನಲ್ಲಿ ಹಣವಿದ್ದರೆ ವರ್ಷಪೂರ್ತಿ ಹಣ ಬರ್ತಿರುತ್ತದೆ. ಆರ್ಥಿಕ ಸಮಸ್ಯೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ.

ಸಾಲ ಪಡೆಯದಿರಿ:

ವರ್ಷದ ಮೊದಲ ದಿನ ಸಾಲ ಪಡೆಯಬೇಡಿ. ಮೊದಲ ದಿನ ಸಾಲ ಪಡೆದರೆ ನಿಮ್ಮ ಮೈಮೇಲೆ ಸಾಲದ ಹೊರೆ ಹೆಚ್ಚಾಗಬಹುದು. ವರ್ಷಪೂರ್ತಿ ನೀವು ಸಾಲದ ಸಮಸ್ಯೆಯಲ್ಲಿ ಕಳೆಯಬೇಕಾಗಬಹುದು.

ಹರಿತವಾದ ವಸ್ತು ಬಳಸದಿರಿ:

ವರ್ಷದ ಮೊದಲ ದಿನ ಚಾಕು, ಚೂರಿ ಸೇರಿದಂತೆ ಯಾವುದೇ ಅಪಾಯಕಾರಿ ವಸ್ತುಗಳನ್ನು ಬಳಸಬೇಡಿ. ಹಾಗೆಯೇ ಇದನ್ನು ಮಾರುಕಟ್ಟೆಯಿಂದ ಖರೀದಿಸಬೇಡಿ.

ನಕಾರಾತ್ಮಕತೆಯಿಂದ ದೂರವಿರಿ:

ವರ್ಷದ ಮೊದಲ ದಿನ ನಕಾರಾತ್ಮಕತೆಯಿಂದ ದೂರವಿರಿ. ನಕಾರಾತ್ಮಕವಾಗಿ ಆಲೋಚನೆ ಮಾಡುವ, ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ತುಂಬುವ ವ್ಯಕ್ತಿಯನ್ನು ಭೇಟಿಯಾಗಬೇಡಿ. ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ತುಂಬುವ, ನಿಮ್ಮನ್ನು ಹುರಿದುಂಬಿಸುವ ಜನರನ್ನು ಭೇಟಿ ಮಾಡಿ. ಅವರ ಸ್ನೇಹ ಸಂಪಾದಿಸಿಕೊಳ್ಳಿ.

ದೇವಸ್ಥಾನಕ್ಕೆ ಹೋಗುವಾಗ ಹೀಗಿರಿ:
• ದೇವಸ್ಥಾನಕ್ಕೆ ಹೋಗುವಾಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ದೇವರ ಧ್ಯಾನ ಮಾಡ್ತಾ ಹೋಗಿ. ದ್ವೇಷದ ಭಾವನೆಯಲ್ಲಿ ದೇವಸ್ಥಾನಕ್ಕೆ ಹೋಗಬೇಡಿ. ಅನಾವಶ್ಯಕ ಚರ್ಚೆ ದೇವಸ್ಥಾನದಲ್ಲಿ ಬೇಡವೇ ಬೇಡ.
• ಶುದ್ಧತೆ ಬಗ್ಗೆ ಗಮನಹರಿಸಿ. ಸ್ನಾನ ಮಾಡಿಯೇ ದೇವಸ್ಥಾನಕ್ಕೆ ಹೋಗಿ. ಶುದ್ಧವಾದ ಬಟ್ಟೆಯನ್ನೇ ಧರಿಸಿ.
• ಮನೆಯಲ್ಲಿರುವ ದೇವರನ್ನು ಪೂಜಿಸಿಯೇ ನಂತರ ದೇವಸ್ಥಾನಕ್ಕೆ ಹೋಗಿ. ಯಾವುದೇ ವ್ಯಕ್ತಿಯಾಗಿರಲಿ ಮೊದಲು ಮನೆಯಲ್ಲಿರುವ ದೇವರಿಗೆ ನಮಸ್ಕರಿಸಿದ ನಂತರವೇ ದೇವಸ್ಥಾನಕ್ಕೆ ತೆರಳಿ.

Health Tips ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತಾ? ಈಗ ತಲೆ ಧಿಂ ಅಂತಿದ್ಯಾ? ಹೀಗೆ ಮಾಡಿದ್ರೆ ಹ್ಯಾಂಗೋವರ್ ಮಾತೇ ಇಲ್ಲ!

TAGGED:Be like this on the first day of the new year... Don't do all this...
Share This Article
Facebook Twitter Copy Link Print
Previous Article Heavy traffic jam 12 ದಿನ ನಿಂತಲ್ಲೇ ನಿಂತ ವಾಹನಗಳು! ಇದೆಂಥಾ ಟ್ರಾಫಿಕ್ ಜಾಮ್? ಎಲ್ಲಿ ಏಕೆ ಹೀಗಾಯ್ತು?
Next Article ಪ್ರೀತಿಸಿ ಮದ್ವೆಯಾದ ಎರಡೇ ವರ್ಷಕ್ಕೆ ಮಹಿಳೆ ಅನುಮಾನಾಸ್ಪದವಾಗಿ ಸಾವು

Popular Posts

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read

You Might Also Like

ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ಪ್ರಮುಖCrimeದೇಶ

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read
ಪ್ರಮುಖCrimeವಿದೇಶ

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read
ಪ್ರಮುಖಕರ್ನಾಟಕ

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?