Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > New generation starts ಇಂದಿನಿಂದ ಹೊಸ ಪೀಳಿಗೆ ಶುರು, ಇನ್ನು ಹುಟ್ಟುವವರೆಲ್ಲ ಬೀಟಾ ಮಕ್ಕಳು…! ಏನಿದು ಬೀಟಾ ಬೀಟ್?
ಅನಾವರಣಪ್ರಮುಖಲೈಫ್‌ಸ್ಟೈಲ್

New generation starts ಇಂದಿನಿಂದ ಹೊಸ ಪೀಳಿಗೆ ಶುರು, ಇನ್ನು ಹುಟ್ಟುವವರೆಲ್ಲ ಬೀಟಾ ಮಕ್ಕಳು…! ಏನಿದು ಬೀಟಾ ಬೀಟ್?

Share
2 Min Read
SHARE

newsics.com

ಹೊಸ ವರ್ಷ 2025ರ ಪ್ರವೇಶವಾಗಿದೆ. ಇದರೊಂದಿಗೆ ಹೊಸ ಪೀಳಿಗೆಯೂ ಆರಂಭವಾಗಿದೆ. ಇಂದು ಅಂದರೆ 2025ರ ಜನವರಿ 1 ರಿಂದ 2039 ರ ನಡುವೆ ಹುಟ್ಟುವ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ.

2010 ರಿಂದ 2024 ರ ನಡುವೆ ಜನಿಸಿದ ಮಕ್ಕಳನ್ನು ‘ಜನರೇಷನ್ ಆಲ್ಫಾ’ ಎಂದು ಕರೆಯಲಾಗಿದ್ದು, ಬೀಟಾ ಬೀಟ್ ಶುರುವಾದ ಮರುಕ್ಷಣದಲ್ಲೇ ಆಲ್ಫಾ ಯುಗ ಮುಗಿದಿದೆ.

ಈ ಹೊಸ ಪೀಳಿಗೆಯ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತಿದೆ. ಈ ಪೀಳಿಗೆಯು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. 22 ನೇ ಶತಮಾನಕ್ಕೆ ಪರಿವರ್ತನೆಯ ಮೂಲಕ ಬದುಕಲು ಸಿದ್ಧರಾಗಿದ್ದಾರೆ.

ಭೂಮಿಯ ಮೇಲೆ ಬದುಕುಳಿಯಲು ಹೋರಾಟ ಹೆಚ್ಚಾಗುತ್ತದೆ. ಅದಕ್ಕೂ ಈ ಹೊಸ ಪೀಳಿಗೆ ಸಾಕ್ಷಿಯಾಗಲಿದೆ. ವಿಶ್ವದ ಜನಸಂಖ್ಯೆಯಲ್ಲಿ ಬದಲಾವಣೆಗಳಾಗಲಿದ್ದು, ಅದರಲ್ಲಿ ಈ ಮಕ್ಕಳ ಪಾತ್ರ ದೊಡ್ಡದಾಗಿರುತ್ತದೆ.

ಬೀಟಾ ಏಕೆ ಭಿನ್ನ?:

ದೀರ್ಘಕಾಲದಿಂದ ಸಮಾಜದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಮಾರ್ಕ್ ಮೆಕ್ರಿಂಡಲ್ ‘ಜನರೇಷನ್ ಆಲ್ಫಾ’ ಪದದ ಪ್ರತಿಪಾದಕರು. ಈಗ ಜನರೇಷನ್ ಬೀಟಾ ಬಗ್ಗೆ ಮಾರ್ಕ್ ಹೇಳುವಂತೆ, ಕಳೆದ 14 ವರ್ಷಗಳಲ್ಲಿ ಜನಿಸಿದ ಮಕ್ಕಳಿಗಿಂತ ಈ ಹೊಸ ಪೀಳಿಗೆ ವಿಭಿನ್ನವಾಗಿರುತ್ತದೆ. ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನದ ಸಹಾಯವನ್ನೂ ಪಡೆಯುತ್ತಾರೆ. ಈ ಪೀಳಿಗೆಯ ಮಕ್ಕಳು ಹೆಚ್ಚು ಕಾಲ ಬದುಕುತ್ತಾರೆ.

ಇಲ್ಲಿಯವರೆಗೆ ಬಂದ ಎಲ್ಲಾ ಪೀಳಿಗೆಗಳಿಗಿಂತ ಜನರೇಷನ್ ಬೀಟಾದ ಸರಾಸರಿ ಆಯಸ್ಸು ಹೆಚ್ಚಾಗಿರುತ್ತದೆ. 2025 ರಿಂದ 2039 ರ ನಡುವೆ ಜನಿಸುವ ಮಕ್ಕಳಲ್ಲಿ ಹಲವರು 2100 ರವರೆಗೆ ಆರೋಗ್ಯವಾಗಿ ಬದುಕುತ್ತಾರೆ.

ಮುಂದಿನ ದಿನಗಳಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ. ತಂತ್ರಜ್ಞಾನದಲ್ಲೂ ಅಭಿವೃದ್ಧಿಯಾಗಲಿದೆ. ಇದರಿಂದಾಗಿ ಜನರೇಷನ್ ಬೀಟಾದ ಮಕ್ಕಳು ಹಿಂದಿನ ಎಲ್ಲಾ ಪೀಳಿಗೆಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ.

ಭಾರೀ ಬದಲಾವಣೆ?:

ಜನರೇಷನ್ ಬೀಟಾದ ಮಕ್ಕಳು ‘ಜನರೇಷನ್ ವೈ’ನ ಕಿರಿಯ ವ್ಯಕ್ತಿಗಳು ಮತ್ತು ‘ಜನರೇಷನ್ ಝಡ್’ ನ ಹಿರಿಯ ವ್ಯಕ್ತಿಗಳ ಮಕ್ಕಳು.

ಈ ಹೊಸ ಪೀಳಿಗೆಯು ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಆರ್ಥಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ.

ಸಾಮಾಜಿಕ ಬದಲಾವಣೆ, ಹವಾಮಾನ ಬದಲಾವಣೆ, ವಿಶ್ವ ಜನಸಂಖ್ಯೆಯ ಬದಲಾವಣೆ, ವೇಗವಾಗಿ ನಗರೀಕರಣದಂತಹ ಸಮಸ್ಯೆಗಳನ್ನು ಜನರೇಷನ್ ಬೀಟಾ ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

Health Tips ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತಾ? ಈಗ ತಲೆ ಧಿಂ ಅಂತಿದ್ಯಾ? ಹೀಗೆ ಮಾಡಿದ್ರೆ ಹ್ಯಾಂಗೋವರ್ ಮಾತೇ ಇಲ್ಲ!

HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…

TAGGED:A new generation starts from todayall those born are beta children...!
Share This Article
Facebook Twitter Copy Link Print
Previous Article Country’s first glass bridge ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?
Next Article Andhra favors Shakti Yojana ಶಕ್ತಿ ಯೋಜನೆ ಜಾರಿಗೆ ಆಂಧ್ರ ಒಲವು, ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಬರಲಿದೆ 3 ಸಚಿವರ ನೇತೃತ್ವದ ನಿಯೋಗ

Popular Posts

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

You Might Also Like

ಕರ್ನಾಟಕಪ್ರಮುಖ

Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಪ್ರಮುಖದೇಶ

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read
ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ಪ್ರಮುಖCrimeದೇಶ

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?