newsics.com | ನ್ಯೂಸಿಕ್ಸ್
ಇಂದು, ಜುಲೈ 25, ಶನಿವಾರ, ಬ್ರಹ್ಮ ಯೋಗ, ಇಂದ್ರ ಯೋಗದ ಜತಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ಇದು ಈ ದಿನದ ಮಹತ್ವವನ್ನು ಹೆಚ್ಚಿಸಲಿದೆ.
ಇಂದು ಶನಿಯ ದಿನವೂ ಆಗಿದೆ. ಇಂದು , ಶನಿವಾರ, ಶನಿ ದೇವರಿಗೆ ಸಮರ್ಪಿತವಾದ ದಿನವಾಗಿದೆ. ಹಾಗಾಗಿ ಇಂದು ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಮಂಗಳ ಗ್ರಹವು ತನ್ನ ಚಲನೆಯನ್ನು ಬದಲಾಯಿಸುವ ಮೂಲಕ ಕ್ರಾಂತಿವೃತ್ತ ಬದಲಾವಣೆಯನ್ನು ಮಾಡಲಿದ್ದಾನೆ.
ಇದರಿಂದಾಗಿ ಕೆಲವು ರಾಶಿಯವರಿಗೆ ಪ್ರಯೋಜನವಾಗಲಿದೆ. ಜುಲೈ 25 ರಂದು ಯಾವ ರಾಶಿಗಳಿಗೆ ಶನಿ ದೇವನ ಕೃಪೆ ಲಭಿಸಲಿದೆ..? ಈ ರಾಣಿ ಗಳಿಗೆ ಶನಿವಾರ ಹೇಗಿರುತ್ತದೆ..?
ಮೇಷ ರಾಶಿಗೆ ಸೇರಿದ ಜನರು ಈ ದಿನ ಹೊಸ ಆರಂಭವನ್ನು ಹೊಂದುವುದರೊಂದಿಗೆ ಅನೇಕ ಅವಕಾಶಗಳನ್ನು ಪಡೆದುಕೊಳ್ಳುವರು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿಯನ್ನು ಗಳಿಸುವಿರಿ. ನಿಮ್ಮ ಕಠಿಣ ಪರಿಶ್ರಮವನ್ನು ಕೆಲಸದ ಸ್ಥಳದಲ್ಲಿ ಎಲ್ಲರೂ ಗಮನಿಸವರು. ಹಾಗೆ ಹೊಸ ಜವಾಬ್ದಾರಿಗಳು ದೊರಕುವ ಯೋಗವಿದೆ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶ ಮತ್ತು ಹೊಸ ಗ್ರಾಹಕರನ್ನು ಪಡೆಯುವಿರಿ. ಮೇಷ ರಾಶಿಗೆ ಸೇರಿದ ಜನರ ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳು ದೊರಕುವುದು.
ಹಳೆಯ ಹೂಡಿಕೆಗಳಿಂದ ವ್ಯಾಪಾರದಲ್ಲಿ ಲಾಭವನ್ನು ಗಳಿಸುವಿರಿ. ನಿಮ್ಮ ಮನೆಯಲ್ಲಿ ನಿಮ್ಮ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ದೊರಕುವುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯವಿರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಪ್ರತಿ ಕೆಲಸದಲ್ಲಿ ಉತ್ಸಾಹವನ್ನು ಹೊಂದುವುದರಿಂದ ಹೆಚ್ಚಿನ ಪ್ರಯೋಜನಗಳಾಗುವುದು. ಅನುಭವಿ ವ್ಯಕ್ತಿಗಳ ಸಲಹೆಯಿಂದ ಅಪಾರ ಲಾಭ ದೊರಕುವುದು. ಅಲ್ಪ ದೂರ ಪ್ರಯಾಣಿಸುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ. ಹೊಸ ಯೋಜನೆಗಳಿಂದ ಭವಿಷ್ಯದಲ್ಲಿ ದೊಡ್ಡ ಫಲಿತಾಂಶ ದೊರಕುವುದು.
ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಇಂದು ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳುವುದು. ನಿಮ್ಮ ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವ ಸಂಭವವಿದೆ. ನಿಮ್ಮ ಖರ್ಚುಗಳನ್ನು ನಿಧಾನವಾಗಿ ನಿಯಂತ್ರಿಸುವಿರಿ. ಕೆಲಸದಲ್ಲಿ ಶುಭ ಸುದ್ದಿ ಲಭಿಸುವುದು. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಿರಿ. ಮನೆಯಲ್ಲಿ ಸಂತೋಷಮಯವಾದ ವಾತಾವರಣ ಇರುವುದು. ಸಂಬಂಧದಲ್ಲಿ ನಂಬಿಕೆ ಇನ್ನಷ್ಟು ಬಲಗೊಳ್ಳಲಿದೆ. ಯಾವುದಾದರೂ ಆಪ್ತರ ಸಂಪೂರ್ಣ ಬೆಂಬಲ ದೊರಕುವುದು.
ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಹೊಂದುವಿರಿ. ಸರಿಯಾದ ನಿರ್ಧಾರದಿಂದ ಭವಿಷ್ಯದಲ್ಲಿ ದೊಡ್ಡ ಪ್ರಯೋಜನಗಳಾಗುವುದು. ಹಳೆಯ ತಪ್ಪು ತಿಳುವಳಿಕೆಗಳು ದೂರವಾಗಲಿವೆ. ಹಾಗೆ ಹೊಸ ಸಂಪರ್ಕಗಳಿಂದ ಭವಿಷ್ಯದಲ್ಲಿ ಲಾಭವನ್ನು ಗಳಿಸುವಿರಿ. ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗಿ ಬರುವುದು.ದಿನ
ಸಿಂಹ ರಾಶಿಗೆ ಸೇರಿದ ಜನರಿಗೆ ಈ ಶನಿವಾರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗುವುದು. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವನ್ನು ಹೊಂದುವರು. ನಾಳೆ ನಿಮ್ಮ ಬಡ್ತಿಯ ಬಗ್ಗೆ ಚರ್ಚೆ ಆರಂಭವಾಗಲಿದೆ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಉತ್ತಮ ಅವಕಾಶ ಲಭಿಸುವುದು. ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಮುಂದೆ ಸಾಗುವಿರಿ.
ಧನ ಲಾಭವನ್ನು ಹೊಂದುವ ಉತ್ತಮ ಅವಕಾಶಗಳು ನಿಮಗೆ ದೊರಕಲಿವೆ. ಹಾಗೆ ಮನೆಯಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಪ್ರೀತಿಯ ಜೀವನದಲ್ಲಿ ಸಂಬಂಧಗಳು ಬಲಗೊಳ್ಳುವುದು. ನಿಮ್ಮ ನಾಯಕತ್ವದ ಸಾಮರ್ಥದಿಂದ ಜನರು ಆಕರ್ಷಣೆಗೆ ಒಳಗಾಗುವರು. ಸರ್ಕಾರಿ ಕೆಲಸದಲ್ಲಿ ನಿಮಗೆ ಯಶಸ್ಸು ದೊರಕುವ ಸಂಭವವಿದೆ. ಹೊಸ ಜವಾಬ್ದಾರಿಗಳು ದೊರಕುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಜತೆಗೆ ಸಿಂಹ ರಾಶಿಗೆ ಸೇರಿದ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ಅದ್ಭುತ ಫಲಿತಾಂಶವನ್ನು ಗಳಿಸಲಿದ್ದಾರೆ.
ಕನ್ಯಾ ರಾಶಿಗೆ ಸೇರಿದ ಜನರು ನಾಳೆ ಶನಿ ದೇವನ ಕೃಪೆಯಿಂದಾಗಿ ತಮ್ಮ ಕಠಿಣ ಪರಿಶ್ರಮಕ್ಕೆ ಅದ್ಭುತ ಫಲಿತಾಂಶವನ್ನು ಪಡೆಯಲಿದ್ದಾರೆ. ಕೆಲಸದಲ್ಲಿ ಹೊಸ ಜವಾಬ್ದಾರಿ ದೊರಕುವುದು. ಸಂದರ್ಶನ ಅಥವಾ ಹೊಸ ಉದ್ಯೋಗಕ್ಕಾಗಿ ಪ್ರಯತ್ನವನ್ನು ಪಡುತ್ತಿರುವವರಿಗೆ ಉತ್ತಮ ಅವಕಾಶ ದೊರಕುವುದು. ವ್ಯಾಪಾರದಲ್ಲಿ ಹೊಸ ಅವಕಾಶಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ. ನಾಳೆ ನಿಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸಲಿದೆ.
ನೀವು ಹಣವನ್ನು ಉಳಿತಾಯ ಮಾಡುವ ಬಗ್ಗೆ ಗಮನ ನೀಡುವಿರಿ. ಮನೆಯವರ ಸಂಪೂರ್ಣ ಬೆಂಬಲ ದೊರಕಲಿದೆ. ಸಂದರ್ಶನ ಬಗ್ಗೆ ಗಮನವನ್ನು ನೀಡುವಲ್ಲಿ ನೀವು ಹೆಚ್ಚು ಬಲಶಾಲಿಗಳಾಗುವಿರಿ. ಹೊಸ ಕೌಶಲ್ಯವನ್ನು ಕಲಿಯುವ ಅದ್ಭುತ ಅವಕಾಶ ಲಭಿಸುವುದು. ಕನ್ಯಾ ರಾಶಿಗೆ ಸೇರಿದ ಜನರ ಧೈರ್ಯ ಮತ್ತು ಉತ್ತಮ ಯೋಜನೆಗಳನ್ನು ರೂಪಿಸುವುದರಿಂದ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗಲಿದೆ. ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು. ಹಾಗೆ ಆತ್ಮ ವಿಶ್ವಾಸದಿಂದಾಗಿ ಇನ್ನಷ್ಟು ಬಲಶಾಲಿಗಲಾಗುವಿರಿ.
ಧನುಸ್ಸು ರಾಶಿಗೆ ಸೇರಿದ ಜನರಿಗೆ ಶನಿವಾರದಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರಕುವುದು. ಹಾಗಾಗಿ ಬಹಳ ಸಮಯದಿಂದ ಅಪೂರ್ಣಗೊಂಡಂತಹ ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು. ವೃತ್ತಿ ಜೀವನದಲ್ಲಿ ಹೊಸ ಪ್ರಗತಿಯನ್ನು ಹೊಂದುವಿರಿ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಅವಕಾಶಗಳು ದೊರಕುವುದು. ಜತೆಗೆ ಧನ ಲಾಭವನ್ನು ಹೊಂದುವ ಅದ್ಭುತ ಯೋಗ ಕೂಡ ಲಭಿಸುವುದು.
ಸಮಾಜದಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಹಾಗೆ ಪ್ರಭಾವಶಾಲಿ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಲಭಿಸುವುದು. ನಿಮ್ಮ ಪ್ರೀತಿಯ ಜೀವನದಲ್ಲಿ ಮಾಧುರ್ಯ ವೃದ್ಧಿಯಾಗುವುದು. ಜತೆಗೆ ಧನುಸ್ಸು ರಾಶಿಗೆ ಸೇರಿದ ಜನರು ಪ್ರಯಾಣಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಗಳಿಸಲಿದ್ದಾರೆ. ಇದರೊಂದಿಗೆ ನಿಮ್ಮ ಕಠಿಣ ಪರಿಶ್ರಮದಿಂದಾಗಿ ಅಪಾರ ಯಶಸ್ಸನ್ನು ಗಳಿಸುವಿರಿ. ಹೊಸ ಪಾಲುದಾರಿಕೆಯನ್ನು ಹೊಂದುವುದರಿಂದ ಶುಭ ಫಲಿತಾಂಶ ದೊರಕುವುದು. ನಿಮ್ಮ ಅಪೂರ್ಣ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ಸಮಯ ಲಭಿಸಲಿದೆ, ಭವಿಷ್ಯದ ಬಗ್ಗೆ ನಿಮ್ಮ ನಂಬಿಕೆ ನಾಳೆ ಮತ್ತಷ್ಟು ಬಲಗೊಳ್ಳುವುದು.
Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?