Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?
ದೇಶಪ್ರಮುಖ

New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?

Share
2 Min Read
SHARE

newsics.com

ಹೊಸ ವರ್ಷ 2025 ಆರಂಭವಾಗಿದೆ. ‘ಹೊಸ ವರ್ಷದಲ್ಲಿ ಜಾರಿಯಾಗಲಿವೆ’ ಎಂದು ಈಗಾಗಲೇ ಸರ್ಕಾರ ಮತ್ತು ಖಾಸಗಿ ವಲಯದ ಕಂಪನಿಗಳು ಘೋಷಿಸಿರುವ ಹಲವು ನಿರ್ಧಾರಗಳು ಜ.1ರಿಂದ ಮತ್ತು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ಬದಲಾವಣೆಯ ಪಟ್ಟಿ ಇಲ್ಲಿದೆ.

ಹೊಸ ಕಾರು ಶೇ.4 ದುಬಾರಿ

ಮಾರುತಿ ಸುಝುಕಿ, ಹ್ಯುಂಡೈ, ಮಹೀಂದ್ರಾ, ಎಂಜಿ, ಕಿಯಾ, ಆಡಿ, ಬಿಎಂಡಬ್ಲ್ಯು, ಕಂಪನಿ ಗಳು ಹೊಸ ವರ್ಷದಲ್ಲಿ ಕಾರಿನ ದರ ಶೇ.2ರಿಂದ 4ರಷ್ಟು ಏರಿಕೆಗೆ ಚಿಂತಿಸಿವೆ. ಕಾರು ದುಬಾರಿಯಾಗಲು ಕಚ್ಚಾವಸ್ತು, ವೇತನ ಹೆಚ್ಚಳದ ಕಾರಣ ಎಂದು ಕಂಪನಿಗಳು ಹೇಳಿವೆ.

ಎಟಿಎಂನಲ್ಲೇ ಪಿಎಫ್ ಹಣ!

ಕೇಂದ್ರೀಕೃತ ಪಿಂಚಣಿ ವ್ಯವಸ್ಥೆ ಜಾರಿ ಪರಿಣಾಮ, ಇಪಿಎಫ್‌ಒ ಪಿಂಚಣಿದಾರರು ಇನ್ನು ಬ್ಯಾಂಕಿನ ಯಾವುದೇ ಶಾಖೆಯ ಎಟಿಎಂಗಳ ಮೂಲಕ ಪಿಂಚಣಿ ಹಣ ಪಡೆಯಬಹುದು. ಜನವರಿಯಿಂದಲೇ ಈ ಸೌಲಭ್ಯ ಲಭ್ಯವಾಗಲಿದೆ.

ಸಣ್ಣ ಫೋನಲ್ಲಿ 10,000 ಕಳಿಸಿ

ಇಂಟರ್ನೆಟ್ ರಹಿತ, ಫೀಚರ್ ಫೋನುಗಳಲ್ಲಿ ಈವರೆಗೆ 5000 ರೂ. ಇದ್ದ ವಹಿವಾಟಿನ ಮಿತಿಯನ್ನು 10,000 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ.

ರೈತರಿಗೆ ಸಿಗಲಿದೆ ಹೆಚ್ಚು ಸಾಲ

ಪ್ರಸ್ತುತ 1.60 ಲಕ್ಷ ರೂ.ವರೆಗೆ ರೈತರು ಖಾತರಿರಹಿತ ಸಾಲ ಪಡೆಯಬಹುದಾಗಿದ್ದು, ಈ ಮೊತ್ತವನ್ನು ಆರ್‌ಬಿಐ 2 ಲಕ್ಷ ರೂ.ಗೆ ಏರಿಸಿದೆ. ಇದು ಜ.1ರಿಂದ ಜಾರಿಯಾಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಉತ್ಪಾದಕತೆ ಹೆಚ್ಚಲಿದೆ.

ಇಂಟರ್ನೆಟ್ ದುಬಾರಿ

ಲಾಭದ ಪ್ರಮಾಣ ಹೆಚ್ಚಿಸುವ ಸಲುವಾಗಿ ಇಂಟ ರ್ನೆಟ್ ಶುಲ್ಕ ಹೆಚ್ಚಿಸಲು ಟೆಲಿಕಾಂ ಕಂಪನಿಗಳು ಯೋಜಿಸಿವೆ. ಜತೆಗೆ ಹಳೆಯ ಆ್ಯಂಡ್ರಾಯ್ಡ್ ಆ್ಯಪ್‌ನ ಮೊಬೈಲ್‌ಗೆ ವಾಟ್ಸ್ಯಾಪ್ ಸ್ಥಗಿತವಾಗಲಿದೆ. ಜತೆಗೆ ಫೀಚ‌ರ್ ಪೋನ್‌ಗಳಿಗೂ ಹೊಸ ಪ್ಲಾನ್ ಲಭಿಸಲಿದೆ. 180 ದಿನಗಳಿಗಿಂತ ಇತ್ತೀಚಿನ ದಾಖಲೆಗಳಿಗೆ ಮಾತ್ರ ಇ-ವೇ ಬಿಲ್‌ ರಚಿಸಲು ಅವಕಾಶ ಮಾಡಿಕೊಡಲಾಗುವುದು.

ಸೆನ್ಸೆಕ್ಸ್‌ ಎಕ್ಸ್‌ಪೈರಿ ದಿನಾಂಕ ಬದಲು

ಸೆನ್ಸೆಕ್ಸ್ ಸೇರಿದಂತೆ ಅನ್ಯ ಸೂಚ್ಯಂಕಗಳ ಎಕ್ಸ್‌ಪೈರಿ ದಿನವನ್ನು ಈಗಿರುವ ಶುಕ್ರವಾರದ ಬದಲು ಮಂಗಳವಾರಕ್ಕೆ ಬದಲಾಯಿಸಲಾಗಿದೆ. ಇದು ಜ.1ರಿಂದಲೇ ಅನ್ವಯಿಸಲಿದೆ.

ಅಮೆರಿಕ ವೀಸಾ ನಿಯಮ ಮಾರ್ಪಾಡು

ವಲಸಿಗರಲ್ಲದ ಭಾರತೀಯರು 2025ರ ಜ.1ರಿಂದ ಒಂದು ಬಾರಿ ಯಾವುದೇ ಶುಲ್ಕವಿಲ್ಲದೆ ತಮ್ಮ ಅಪಾಂಯಿಂಟ್‌ಮೆಂಟ್ ಅನ್ನು ಮರು ಹೊಂದಾಣಿಕೆ ಮಾಡಿಕೊಳ್ಳಬಹುದು.

ಅಮೆರಿಕದಲ್ಲಿ ಕಠಿಣ ವಲಸೆ ನೀತಿ

ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಬಳಿಕ ವಲಸೆ ವಿಷಯದಲ್ಲಿ ಕಠಿಣ ನೀತಿ ಜಾರಿ ಸಾಧ್ಯತೆ. ಇದು ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ತರುವ ಆತಂಕ ಇದೆ.

ಎಫ್‌ಡಿ ಹಿಂಪಡೆತ ಶುಲ್ಕರಹಿತ

10,000 ರೂ.ಗಿಂತ ಕಡಿಮೆ ಮೊತ್ತದ ಎಫ್‌ಡಿ ಮೊತ್ತವನ್ನು, ಮುಕ್ತಾಯದ ಅವಧಿಗೆ ಮೊದಲೇ ಯಾವುದೇ ದಂಡವಿಲ್ಲದೇ ಹಿಂಪಡೆಯುವ ಅವಕಾಶ ಲಭ್ಯವಾಗಲಿದೆ. ಗಂಭೀರ ಸ್ವರೂಪದ ಕಾಯಿಲೆ ಇದ್ದ ಪೂರ್ಣ ಹಣ ಹಿಂಪಡೆಯಬಹುದು.

ವಾಹನ ಮಾರಾಟಕ್ಕೆ ಟ್ಯಾಕ್ಸ್

10 ಲಕ್ಷ ರೂ. ಮೇಲ್ಪಟ್ಟ ಮೊತ್ತದ ಮೋಟಾರು ವಾಹನಗಳ ಮಾರಾಟಕ್ಕೆ ಶೇ.1ರಷ್ಟು ಟಿಸಿಎಸ್ (ಟ್ಯಾಕ್ಸ್ ಕಲೆಕ್ಷೆಡ್ ಅಟ್‌ಸೋರ್ಸ್) ಜ.1ರಿಂದ ಜಾರಿಗೆ ಬರಲಿದೆ.

ಎಲ್‌ಪಿಜಿ ದರ ಏರಿಕೆ ಸಾಧ್ಯತೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 6293 ರೂ.ಗೆ ತಲುಪಿದೆ. ಇದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಹೆಚ್ಚುವ ಸಾಧ್ಯತೆಯಿದೆ.

HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…

TAGGED:What has changed from today? Which is expensivewhich is simple?
Share This Article
Facebook Twitter Copy Link Print
Previous Article M M Hills ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಿದ್ಧತೆ
Next Article Country’s first glass bridge ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?

Popular Posts

₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ಆಸ್ತಿ ಮೌಲ್ಯ ಕಂಡು ದಂಗಾದ ಅಧಿಕಾರಿಗಳು

2 Min Read

ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

2 Min Read

ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

1 Min Read

ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?

2 Min Read

You Might Also Like

ಕರ್ನಾಟಕಪ್ರಮುಖ

ಮದುವೆ ಆಗೋದಾಗಿ ಹೇಳಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

1 Min Read
ಕರ್ನಾಟಕಪ್ರಮುಖ

ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಪಾಪಿ

1 Min Read
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 Audition ಬಿಗ್ ಬಾಸ್ ಮನೆಯೊಳಕ್ಕೆ ಹೋಗಲು ನಿಮಗೂ ಭರ್ಜರಿ ಅವಕಾಶ: ಮಾಡಬೇಕಾಗಿದ್ದು ಇಷ್ಟೆ

1 Min Read
ಪ್ರಮುಖಲೈಫ್‌ಸ್ಟೈಲ್

Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ?ಈ ಸುಲಭ ಉಪಾಯಗಳನ್ನು ಬಳಸಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?