Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನೀವು ಹೀಗೆ ಮಾಡಿದರೆ ಬೆಡ್‌ ರೂಮ್‌ನಲ್ಲಿ ಯಶಸ್ವೀ ಪುರುಷರಾಗಬಹುದು!
ಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

ನೀವು ಹೀಗೆ ಮಾಡಿದರೆ ಬೆಡ್‌ ರೂಮ್‌ನಲ್ಲಿ ಯಶಸ್ವೀ ಪುರುಷರಾಗಬಹುದು!

Share
3 Min Read
SHARE

newsics.com
ಲೈಫ್‌ಸ್ಟೈಲ್‌ ಸಮಸ್ಯೆಗಳು, ನಿದ್ದೆಗೆಡುವುದು, ಪೌಷ್ಟಿಕ ಆಹಾರ ಸೇವಿಸದಿರುವುದು, ಮದ್ಯಪಾನ, ಧೂಮಪಾನ, ಸಂಗಾತಿ ಜತೆ ಕ್ವಾಲಿಟಿ ಟೈಮ್‌ ಕಳೆಯದಿರುವುದು ಗಂಡಸರ ಲೈಂಗಿಕ ಸಾಮರ್ಥ್ಯ ಕೊರತೆಗೆ ಪ್ರಮುಖ ಕಾರಣಗಳಾಗಿವೆ. ಬೆಡ್ ರೂಮ್‌ನಲ್ಲಿ ಸಮರ್ಥರೆನಿಸಿಕೊಳ್ಳಲು ನಿಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆ ಅತ್ಯವಶ್ಯ.

ಪೌಷ್ಟಿಕ ಆಹಾರ:

ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಆಹಾರ ಪದ್ಧತಿಯಲ್ಲಿ ಅತ್ಯುತ್ತಮ ತರಕಾರಿಗಳು, ಹಣ್ಣು, ಕಾಳು ಕಡಿ, ಒಣ ಬೀಜಗಳು ಸೇರಿರಲಿ. ಇವು ನಿಮ್ಮ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಹೆಚ್ಚಿಸುತ್ತವೆ.

ಮದ್ಯಪಾನ, ಧೂಮಪಾನದಿಂದ ದೂರವಿರಿ:

ಧೂಮಪಾನ ಅಥವಾ ಮದ್ಯಪಾನ ಅಭ್ಯಾಸ ನಿಮ್ಮ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಮುಖ್ಯವಾಗಿ ಮದ್ಯಪಾನ ಮಾಡುವುದರಿಂದ ಪುರುಷರಿಗೆ ಸಂಬಂಧಪಟ್ಟ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗುತ್ತದೆ.
ಇದು ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ವೀರ್ಯಾಣುಗಳ ಗುಣಮಟ್ಟ ಕುಸಿಯಲು ಕೂಡ ಇದೇ ಕಾರಣ. ಪ್ರತಿದಿನ ಮದ್ಯಪಾನ ಮಾಡುವವರಿಗೆ ಲಿವರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ವಿಟಮಿನ್ ಎ ಅಂಶವನ್ನು ಸರಿಯಾಗಿ ಸಂಸ್ಕರಿಸದೆ ಇರುವುದರಿಂದ ವೀರ್ಯಾಣು ಉತ್ಪತ್ತಿಯಾಗುವುದಿಲ್ಲ. ಧೂಮಪಾನ ಕೂಡ ಇಂತಹುದೇ ದುಷ್ಪರಿಣಾಮ ಬೀರುತ್ತದೆ.

ಮಾನಸಿಕ ಸದೃಢತೆ:

ಸಾಧ್ಯವಾದಷ್ಟು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಪ್ರಯತ್ನಿಸಿ. ಇದಕ್ಕಾಗಿ ಯೋಗ, ಧ್ಯಾನ ಇತ್ಯಾದಿಗಳನ್ನು ಅನುಸರಿಸಿ. ಉಸಿರಾಟದ ವ್ಯಾಯಾಮದ ಮೇಲೆ ಗಮನಹರಿಸಿ 10 ರಿಂದ 20 ನಿಮಿಷ ದೀರ್ಘ ಉಸಿರಾಟ ನಡೆಸಿ. ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಪಡೆದುಕೊಳ್ಳಿ. ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಸಿ.

ಹೆಚ್ಚು ಸೈಕ್ಲಿಂಗ್ ಬೇಡ:

ನೀವು ಪ್ರತಿದಿನ ಜಿಮ್‌ಗೆ ಹೋಗುವ ಅಭ್ಯಾಸ ಇದ್ದರೆ, ಅಥವಾ ಪ್ರತಿದಿನ ಓಡಾಡಲು ಬೈಕ್ ಬಳಸುತ್ತಿದ್ದರೆ, ಸ್ವಲ್ಪ ದಿನಗಳ ಕಾಲ ಅದರಿಂದ ದೂರವಿರಿ. ಏಕೆಂದರೆ ಈ ಪ್ರಕ್ರಿಯೆಗಳು ನಿಮ್ಮ ವೃಷಣಗಳ ಶಕ್ತಿ ಕುಂದಿಸಬಹುದು ಮತ್ತು ಅದರಿಂದ ವೀರ್ಯಾಣುಗಳಿಗೆ ಹಾನಿಯಾಗಬಹುದು.

ತೀರಾ ಭಾರ ಎತ್ತದಿರಿ:

ವೆಯ್ಟ್ ಲಿಫ್ಟಿಂಗ್ ಅಭ್ಯಾಸವು ದೈಹಿಕವಾಗಿ ನಿಮ್ಮನ್ನು ಸದೃಢವಾಗಿಸುತ್ತದೆ ನಿಜ. ಆದರೆ ಕ್ರಮೇಣ ನಿಮ್ಮ ವೀರ್ಯಾಣುಗಳ ಗುಣಮಟ್ಟ ಕುಸಿಯುವಂತೆ ಮಾಡುತ್ತದೆ. ತುಂಬಾ ಭಾರ ಎತ್ತುವುದು ನಿಮ್ಮ ವೀರ್ಯಾಣಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಬಹುದು. ಹೀಗಾಗಿ ಮಕ್ಕಳು ಮಾಡಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ನೀವಿದ್ದರೆ, ಈ ವ್ಯಾಯಾಮದಿಂದ ಸ್ವಲ್ಪ ದೂರ ಇರಿ.

ಬಿಸಿ ನೀರ ಸ್ನಾನ ತ್ಯಜಿಸಿ:

ಅತಿಯಾದ ಬಿಸಿ ನೀರು ಕೂಡ ನಿಮ್ಮ ಲೈಂಗಿಕ ಶಕ್ತಿ ಕುಸಿಯುವಂತೆ ಮಾಡುತ್ತದೆ ಮತ್ತು ವೃಷಣಗಳ ಗುಣಮಟ್ಟ ಕಡಿಮೆಯಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಪದೇ ಪದೇ ಬಿಸಿನೀರು ಸ್ನಾನ ಮಾಡುವುದರಿಂದ ಮಗು ಪಡೆಯಲು ಕಷ್ಟವಾಗಬಹುದು.

ಫಾಸ್ಟ್ ಫುಡ್ ಬಿಡಿ:

ಫಾಸ್ಟ್ ಫುಡ್ ಮತ್ತು ಕೆಂಪು ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ಮದ್ಯಪಾನ ಸೇವನೆ ಮಾಡಿದಷ್ಟೇ ಅಪಾಯ ಎಂದು ಹೇಳುತ್ತಾರೆ. ನಿಮ್ಮ ಫಲವತ್ತತೆಯನ್ನು ಕಡಿಮೆ ಮಾಡುವಲ್ಲಿ ಮತ್ತು ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಕೆಂಪು ಮಾಂಸಾಹಾರ ಪ್ರಮುಖ ಪಾತ್ರ ವಹಿಸುತ್ತದೆ.

ನಿದ್ರೆ:

ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುವುದರಿಂದ ನಿಮ್ಮ ಆರೋಗ್ಯ ಸಾಕಷ್ಟು ಸರಿ ಹೋಗುತ್ತದೆ. ಇದು ನಿಮ್ಮ ಜನನಾಂಗದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜತೆಗೆ ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸಲು ಸಹಾಯವಾಗುತ್ತದೆ.

ನೀರು:

ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ದೂರ ಮಾಡುವ ಜತೆಗೆ ನಿಮ್ಮ ಆರೋಗ್ಯವನ್ನು ಸಮರ್ಪಕವಾಗಿ ರಕ್ಷಣೆ ಮಾಡುತ್ತದೆ. ಲೈಂಗಿಕ ಶಕ್ತಿ ಹಾಗೂ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಗಂಡುಮಕ್ಕಳಿಗೆ ಈ ಅಭ್ಯಾಸಗಳಿದ್ರೆ ಮಕ್ಕಳಾಗೋದು ಕಷ್ಟವಂತೆ!

ಯಾವಾಗ್ಲೂ ಯಂಗ್ ಆಗಿ ಕಾಣಬೇಕಾ? ಈ ಪದಾರ್ಥಗಳನ್ನು ತಪ್ಪದೇ ತಿನ್ನಿ!

ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ; ಈ ಸೀರೆಗೆ ಹೆಚ್ಚಿದ ಡಿಮ್ಯಾಂಡ್

TAGGED:Here's how you can be a competent man in the bedroom...
Share This Article
Facebook Twitter Copy Link Print
Previous Article ಸಿಪಿವೈ ವಿರುದ್ಧ ಪುತ್ರಿ ನಿಶಾ ಯೋಗೇಶ್ವರ್ ನಿಗಿನಿಗಿ, ವಿಡಿಯೋ‌ ನೋಡಿ
Next Article ಶುಭೋದಯ‌… ಇಂದಿನ ಪಂಚಾಂಗ, ಸುಭಾಷಿತ, ಮೊದಲ ಮಾತು, 25-10-2024, ಶುಕ್ರವಾರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?