newsics.com
ಸರಳತೆಯ ಸರದಾರ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನೀವು ರತನ್ ಟಾಟಾ ಬಗ್ಗೆ ಸಾಕಷ್ಟು ಕೇಳಿರಬಹುದು, ಆದರೆ ಅವರ ಆಪ್ತ ಸ್ನೇಹಿತ ಯಾರು ಎಂದು ನಿಮಗೆ ತಿಳಿದಿದೆಯೇ? ಅದರ ಡಿಟೈಲ್ಸ್ ಇಲ್ಲಿದೆ..
ಸರಳತೆಯ ಸರದಾರ ಎನಿಸಿಕೊಂಡಿರುವ ರತನ್ ಟಾಟಾ ಅವರು ತಮ್ಮ ಹೆಸರಿಗೆ ತಕ್ಕಂತೆ ಗುಣ ಉಳ್ಳವರು ಅವರು ಎಷ್ಟು ಸಿಂಪಲ್ ಎಂದರೆ, ಒಬ್ಬ ಸಾಮಾನ್ಯ ಯುವಕನ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು, ಅಷ್ಟಕ್ಕೂ ರತನ್ ಟಾಟಾ ವಿಶೇಷ ಸ್ನೇಹ ಬೆಳೆಸಿಕೊಂಡಿದ್ದು ಒಬ್ಬ ವಿಶೇಷ ವ್ಯಕ್ತಿಯ ಜೊತೆ, ಟಾಟಾ ಅವರಿಗೂ ಅವರ ಸ್ನೇಹಿತನಿಗೂ ಇದ್ದದ್ದು, ಬರೋಬ್ಬರಿ 55 ವರ್ಷದ ವಯಸ್ಸಿನ ಅಂತರ.

ರತನ್ ಟಾಟಾ ಸ್ನೇಹ ಬೆಳೆಸಿದ ಆ ವ್ಯಕ್ತಿಯ ಹೆಸರು, ಶಾಂತನು ನಾಯ್ಡು ಇವರು 1993 ರಲ್ಲಿ ಪುಣೆಯ ತೆಲುಗು ಕುಟುಂಬದಲ್ಲಿ ಜನಿಸಿದರು. ಇವರಿಗೆ ಪ್ರಾಣಿಗಳೆಂದರೆ ಬಹು ಪ್ರೀತಿ, ಸಮಾಜ ಸೇವೆ ಮಾಡುತ್ತಾ ಬಂದಿರುವ ಈ ಯುವಕ ತಮ್ಮ 31 ನೇ ವಯಸ್ಸಿಗೆ, ಉದ್ಯಮದಲ್ಲಿ ಒಳ್ಳೆ ಹೆಸರು ಗಳಿಸಿದ್ದಾರೆ.
ರತನ್ ಟಾಟಾ ಹಾಗೂ ಶಾಂತನೂ ನಾಯ್ಡು ಅವರಿಗೆ ಇದ್ದದ್ದು ಸಾಮಾನ್ಯ ಸ್ನೇಹ ಅಲ್ಲ, ಅದು ತುಂಬಾ ಗಾಢವಾದದ್ದು, ಅಷ್ಟಕ್ಕೂ ರತನ್ ಟಾಟಾ ಅವರಿಗೂ ಈ ಯುವಕನಿಗೂ ಗಾಢವಾದ ಸ್ನೇಹ ಉಂಟಾಗಲು ಹಿಂದಿನ ಒಂದು ಕಾರಣ ಇದೆ.
ಮೋಟೋಪಾಸ್ ಸಂಸ್ಥೆಯನ್ನು ರಚಿಸಿರುವ ಶಾಂತನೂ, ಬೀದಿಯಲ್ಲಿ ತಿರುಗಾಡುವ ನಾಯಿಗಳಿಗಾಗಿ ಡೆನಿಮ್ ಕಾಲರ್‌ಗಳನ್ನು ರಚಿಸಿದ್ದರು, ಇದು ರಾತ್ರಿಯ ವೇಳೆ ಕಾಣಿಸದೆ ರಸ್ತೆಯಲ್ಲಿ ವಾಹನಗಳಿಗೆ ಸಿಲುಕಿ ಸಾಯುತ್ತಿದ್ದ ನಾಯಿಗಳನ್ನು ರಕ್ಷಿಸಲು ಮಾಡಿದ್ದ ಒಂದು ಕಾರ್ಯವಾಗಿತ್ತು. ಯುವ ಯುವಕ ಮಾಡಿದ್ದ ಈ ಯೋಚನೆ ಪ್ರಾಣಿ ಪ್ರಿಯರಾಗಿದ್ದ ರತನ್ ಟಾಟಾ ಅವರ ಮನಸ್ಸನ್ನು ಗೆದ್ದತ್ತು. ಶಾಂತನು ಮಾಡಿದ್ದ ಈ ಕಾರ್ಯವನ್ನು ಗುರುತಿಸಿದ್ದ ರತನ್ ಟಾಟಾ ಅವರು ಶಾಂತನು ಅವರನ್ನು ಮುಂಬೈಗೆ ಕರೆಸಿಕೊಂಡಿದ್ದರು. ಇಬ್ಬರ ನಡುವಿನ ಚಿಂತನೆಗಳು ಒಂದೆ ರೀತಿ ಇದ್ದವು, ಇಬ್ಬರ ಪರಿಚಯ ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ಅಲ್ಲಿಂದ ಇವರಿಬ್ಬರ ಸ್ನೇಹ ಗಾಢವಾಗಿತ್ತು.
ಹೀಗೆ ವಿಶೇಷ ಚಿಂತನೆಯನ್ನು ಹೊಂದಿದ್ದ ಶಾಂತನು ಅವರಿಗೆ ರತನ್ ಟಾಟಾ ಅವರು ಶಾಂತನು ಅವರಿಗೆ ಜನರಲ್ ಮ್ಯಾನೇಜರ್ ಆಗಿ ಕೆಲಸ ಕೊಟ್ಟಿದ್ದರು, ಇಷ್ಟೆ ಅಲ್ಲದೆ ಶಾಂತನು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಟಾಟಾ ಗ್ರೂಪ್‌ಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಇದರ ನಡುವೆಯೇ ಶಂತನು ನಾಯ್ಡು ಅಗಲಿದ ದಿಗ್ಗಜ ಉದ್ಯಮಿಗೆ ಭಾವುಕ ವಿದಾಯ ಹೇಳಿದ್ದಾರೆ. ಈ ಕುರಿತಂತೆ ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿರುವ ಶಂತನು ನಾಯ್ಡು, ಅವರ ನಡುವೆ ಇದ್ದ ನಿಕಟ ಸ್ನೇಹವನ್ನು ಬಿಚ್ಚಿಟ್ಟಿದ್ದಾರೆ. ‘ಈ ಗೆಳೆತನ ನನ್ನೊಂದಿಗೆ ಈಗ ಉಂಟುಮಾಡಿರುವ ಶೂನ್ಯವನ್ನು ತುಂಬಲು ನನ್ನ ಉಳಿದ ಜೀವನವನ್ನು ಕಳೆಯುತ್ತೇನೆ. ಪ್ರೀತಿಗೆ ತೆರಬೇಕಾದ ಬೆಲೆ ದುಃಖ ಇದಾಗಿದೆ. ನನ್ನ ಪ್ರೀತಿಯ ಲೈಟ್ ಹೌಸ್ ಗೆ ವಿದಾಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅವರೊಂದಿಗೆ ಕಳೆದ ಸುಂದರ ನೆನಪಿನ ಕ್ಷಣಗಳ ಫೋಟೋವನ್ನು 31 ವರ್ಷದ ಜನರಲ್ ಮ್ಯಾನೇಜರ್ ಹಂಚಿಕೊಂಡಿದ್ದಾರೆ
ಯುವತಿಯೊಬ್ಬಳ ಪ್ರೀತಿಗೆ ಮನಸೋತಿದ್ದ ರತನ್ ಟಾಟಾ; ರತನ್ ಪ್ರೀತಿಸಿದ ಹುಡುಗಿ ಯಾರು?
Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್