Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನೆನಪು > Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್
ದೇಶನೆನಪುಪ್ರಮುಖ

Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್

Share
3 Min Read
SHARE

newsics.com

ನಮ್ಮ ದೈನಂದಿನ ಜೀವನದಲ್ಲಿ ಟಾಟಾ ಬ್ರಾಂಡ್‌ನ ಒಂದಾದರೂ ಉತ್ಪನ್ನ ಬಳಸದೆ ಒಂದು ದಿನ ಕಳೆಯುವುದು ಕಷ್ಟ. ಉಪ್ಪಿನಿಂದ ವಿಮಾನದವರೆಗೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಬಟ್ಟೆಗಳವರೆಗೆ. ಅಷ್ಟರಮಟ್ಟಿಗೆ ಟಾಟಾ ಬ್ರ್ಯಾಂಡ್ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಗ್ರೂಪ್ ಆಫ್ ಟಾಟಾ ನಮ್ಮ ಜೀವನದ ಭಾಗವೇ ಆಗಿಬಿಟ್ಟಿದೆ.

ಟಾಟಾ ಗ್ರೂಪ್‌ಗೆ ಎರಡು ಶತಮಾನಗಳ ಇತಿಹಾಸವಿದೆ. ಆದರೆ ಸುವರ್ಣ ಯುಗ ಎಂದರೆ ರತನ್ ನೇತೃತ್ವದ ಎರಡು ದಶಕಗಳು. 30ಕ್ಕೂ ಹೆಚ್ಚು ಲಿಸ್ಟೆಡ್ ಕಂಪನಿಗಳು, ಹಲವಾರು ಅಂಗಸಂಸ್ಥೆಗಳು. 30 ಬಿಲಿಯನ್ ಡಾಲರ್‌ಗೂ ಹೆಚ್ಚು ಆಸ್ತಿ, 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು. ಹೀಗೆ ಹೇಳುತ್ತಾ ಹೋದರೆ ಸಾಕಾಗುವುದಿಲ್ಲ.

ದುಬಾರಿ ಸಂಪತ್ತಿನ ಪಾರ್ಸಿ ಕುಟುಂಬದಲ್ಲಿ ರತನ್ ಟಾಟಾ 1937 ಡಿಸೆಂಬರ್ 28 ರಂದು ಬಾಂಬೆಯಲ್ಲಿ ಜನಿಸಿದರು. ಆದರೆ ಬಾಲ್ಯ ಕಷ್ಟಕರವಾಗಿತ್ತು. ತಂದೆ ಮತ್ತು ತಾಯಿ ಬೇರೆ ಬೇರೆಯಾದಾಗ ಅನಾಥ ಜೀವನವನ್ನು ಅನುಭವಿಸಿದರು. ಅಜ್ಜಿ ನವಾಜ್ಬಾಯಿ ಮೊಮ್ಮಗನನ್ನು ದತ್ತು ಪಡೆದರು.

ಅಮೆರಿಕದಲ್ಲಿ ವಾಸ್ತುಶಿಲ್ಪ ಅಧ್ಯಯನ. ಈ ನಡುವೆ ಮೊಳಕೆಯೊಡೆದ ಪ್ರೇಮ ನಿರಾಶೆಯಲ್ಲಿ ಕೊನೆಗೊಂಡಿತು. ಇದರೊಂದಿಗೆ ಮದುವೆಯೇ ಬೇಡ ಎಂದು ನಿಶ್ಚಯಿಸಿದರು.

ಭಾರತಕ್ಕೆ ಮರಳಿ ಜೆಮ್‌ಶೆಡ್‌ಪುರದಲ್ಲಿ ಟಾಟಾ ಸ್ಟೀಲ್‌ನಲ್ಲಿ ಕೆಲಸಕ್ಕೆ ಸೇರಿದರು. ನಂತರ ಟಾಟಾದ ಉನ್ನತ ಹುದ್ದೆಗಳಿಗೆ ಏರಿದರು.

ಆರಂಭದಲ್ಲಿ ಕೈಗೆತ್ತಿಕೊಂಡ ಉದ್ಯಮಗಳಲ್ಲಿ ಲಾಭ ಗಳಿಸಿದರೂ ನಂತರ ಅವುಗಳನ್ನು ಮುಚ್ಚಬೇಕಾಯಿತು. ಆದರೂ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ಜೆ.ಆರ್.ಡಿ ಟಾಟಾ ಅವರಿಗೆ ರತನ್ ಅವರ ಮೇಲೆ ಸಂಪೂರ್ಣ ನಂಬಿಕೆಯಿತ್ತು.

1991 ರಲ್ಲಿ ಜೆ.ಆರ್.ಡಿ ಟಾಟಾ ಅವರು ಹುದ್ದೆಯಿಂದ ನಿವೃತ್ತರಾದಾಗ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಸ್ಟೀಲ್, ಟಾಟಾ ಟೀ, ಟಾಟಾ ಕೆಮಿಕಲ್ಸ್, ಟಾಟಾ ಹೋಟೆಲ್ಸ್‌ನಂತಹ ಟಾಟಾ ಕಂಪನಿಗಳ ಮುಖ್ಯಸ್ಥರಾಗಿದ್ದ ಎಲ್ಲರನ್ನೂ ಈ ನೇಮಕ ಆಶ್ಚರ್ಯಗೊಳಿಸಿತು.

ನಂತರ ಟಾಟಾದಲ್ಲಿ ರತನ್ ಅವರ ಸಂಪೂರ್ಣ ಪ್ರಾಬಲ್ಯ. ಅಧಿಕಾರ ಮತ್ತು ಸಂಪತ್ತು ಮುಖ್ಯವಲ್ಲ ಎಂದು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದರು. ಆಟೋಮೊಬೈಲ್ ಉದ್ಯಮದಲ್ಲಿ ಕಾಲಿಟ್ಟ ಟಾಟಾ, ಒಂದು ಲಕ್ಷ ರೂಪಾಯಿಗೆ ಕಾರು ಎಂಬ ಕನಸನ್ನು ನನಸಾಗಿಸಿದರು ರತನ್ ಟಾಟಾ. ನ್ಯಾನೋ ಕಾರು ಭಾರತೀಯ ಮಧ್ಯಮ ವರ್ಗದ ಕನಸುಗಳನ್ನು ಹೊತ್ತು ಓಡಿತು.

ರತನ್ ಅವರ ನೇತೃತ್ವದಲ್ಲಿ ಟಾಟಾದ ಆಸ್ತಿ 40 ಪಟ್ಟು ಹೆಚ್ಚಾಯಿತು. ಲಾಭವು 50 ಪಟ್ಟು ಹೆಚ್ಚಾಯಿತು. ಸಾಧನೆಯ ಉತ್ತುಂಗದಲ್ಲಿ ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು.

1991 ರಿಂದ 2012 ರವರೆಗೆ ಅಧ್ಯಕ್ಷರಾಗಿದ್ದ ಟಾಟಾ 2016 ರಲ್ಲಿ ಮಧ್ಯಂತರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ರತನ್ ಅವರು ಕೇವಲ ಉದ್ಯಮಿ ಮಾತ್ರವಲ್ಲ ಪರೋಪಕಾರಿ ಕೂಡ ಹೌದು, ಶಿಕ್ಷಣ , ಸಮಾಜಸೇವೆ, ಆರೋಗ್ಯ , ಚಾರಿಟಬಲ್ ಟ್ರಸ್ಟ್‌ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆ ಇದೆ. ಭಾರತದಲ್ಲಿ ಇಂದಿಗೂ ಟಾಟಾ ಎಂಬುದು ಗ್ರಾಹಕರ ನಂಬಿಕಸ್ಥ ಕಂಪನಿಯಾಗಿದೆ. ರತನ್ ಟಾಟಾ ಅವರಿಗೆ 2000 ನೇ ಇಸವಿಯಲ್ಲಿ ಪದ್ಮಭೂಷಣ 2008ರಲ್ಲಿ ಪದ್ಮವಿಭೂಷಣ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

2000 ರಲ್ಲಿ ಬ್ರಿಟಿಷ್ ಟೀ ಕಂಪನಿ ಟೆಟ್ಲಿಯನ್ನು ಟಾಟಾ ಟೀ ಸ್ವಾಧೀನಪಡಿಸಿಕೊಂಡಿತು. ಟಾಟಾ ಟೀ ಅನ್ನು ಜಾಗತಿಕವಾಗಿ ಎರಡನೇ ಅತಿದೊಡ್ಡ ಟೀ ಕಂಪನಿಯಾಗಿ ಪರಿವರ್ತಿಸಿತಲ್ಲದೆ ಟಾಟಾದ ಜಾಗತಿಕ ಮಹತ್ವಾಕಾಂಕ್ಷೆಗಳ ಆರಂಭವನ್ನು ಗುರುತಿಸಿತು.

ರತನ್ ಅವರ ಅಧಿಕಾರಾವಧಿಯಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ವಿಶ್ವದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರರಲ್ಲಿ ಒಂದಾಗಿ ಬೆಳೆಯಿತು‌ ಭಾರತವನ್ನು ಜಾಗತಿಕ ಐಟಿ ಕೇಂದ್ರವಾಗಿ ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

2007 ರಲ್ಲಿ, ಟಾಟಾ ಸ್ಟೀಲ್ ಆಂಗ್ಲೋ-ಡಚ್ ಸ್ಟೀಲ್ ತಯಾರಕ ಕೋರಸ್ ಅನ್ನು $13 ಶತಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಇಙದು ಟಾಟಾ ಸ್ಟೀಲ್ ಅನ್ನು ವಿಶ್ವದ ಅತಿದೊಡ್ಡ ಉಕ್ಕು ಉತ್ಪಾದಕರಲ್ಲಿ ಒಂದಾಗಿದೆ.

ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪನಿ, ಅವರ ಮಾರ್ಗದರ್ಶನದಲ್ಲಿ, ಭಾರತೀಯ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕಡಿಮೆ-ವೆಚ್ಚದ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಕೈಗೆಟುಕುವ ವಸತಿ ಯೋಜನೆಗಳನ್ನು ಪ್ರಾರಂಭಿಸಿತು.

ಒಟ್ಟಿನಲ್ಲಿ ಜನಸಾಮಾನ್ಯನ ಏಳ್ಗೆಗೆ ಶ್ರಮಿಸುವ ಟಾಟಾ ಗ್ರೂಪ್ ಜನಮಾನಸದಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ.

ದೇಶದ ಹೆಮ್ಮೆಯ ಶ್ರೇಷ್ಠ ಉದ್ಯಮಿ ರತನ್ ಟಾಟಾ ಇನ್ನಿಲ್ಲ

TAGGED:Reminiscence of Rathan Tata | Tata brand is a staple in every Indian's life
Share This Article
Facebook Twitter Copy Link Print
Previous Article ಶುಭೋದಯ‌… ಇಂದಿನ ಪಂಚಾಂಗ, 10-10-2024, ಗುರುವಾರ, ಸರಸ್ವತಿ ಪೂಜೆ
Next Article Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?