Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ
ಅನಾವರಣಪ್ರಮುಖ

Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

10.10.2024

ಶ್ವೇತೇ ವೃಷಾ ಸಮಾರೂಢಾ
ಶ್ವೇತಾಂಬರಾ ಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾತ್
ಮಹಾದೇವಪ್ರಮೋದದಾ||

ನವರಾತ್ರಿ ಎಂಟನೇ ದಿನ ತಾಯಿಯ ಸ್ವರೂಪವು ಮಹಾಗೌರೀ ಎಂದಾಗಿರುತ್ತದೆ. ಆಕೆಯ ಬಣ್ಣ ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಆ ಬಿಳಿಯ ಬಣ್ಣಕ್ಕೆ ಉಪಮೆಯಂತೆ ಶಂಖ, ಚಂದ್ರ ಮತ್ತು ಕುಂದ ಪುಷ್ಪಗಳನ್ನು ಉಲ್ಲೇಖಿಸಲಾಗಿದೆ. ಈ ತಾಯಿಯ ವಯಸ್ಸು ಎಂಟು ವರ್ಷ ಮಾತ್ರ. ‘ಅಷ್ಟ ವರ್ಷಾ ಭವೇದ್ ಗೌರೀ’ ಎನ್ನಲಾಗುತ್ತದೆ. ದೇವಿ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ.

ಅಷ್ಟೇ ಅಲ್ಲ, ಆಭರಣಗಳು ಕೂಡ ಬಿಳಿಯೇ. ಮಹಾಗೌರೀ ತಾಯಿಗೆ ನಾಲ್ಕು ಭುಜಗಳು. ಅವಳ ವಾಹನ ವೃಷಭ ಹಾಗೂ ಅದು ಕೂಡ ಬೆಳ್ಳಗಿದೆ. ತಾಯಿಯ ಬಲಗೈ ಮೇಲು ಭಾಗವು ಅಭಯಮುದ್ರೆಯನ್ನು ಪ್ರದರ್ಶಿಸುತ್ತಿದ್ದು, ಕೆಳಗಿನ ಬಲಗೈಯಲ್ಲಿ ತ್ರಿಶೂಲ ಇದೆ. ಅದೇ ರೀತಿ ಎಡಭಾಗದ ಮೇಲು ಕೈನಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದ ಮುದ್ರೆಯಿದೆ. ತಾಯಿಯ ಮುದ್ರೆಯು ಶಾಂತವಾಗಿದೆ.

ಕಠಿಣ ತಪಸ್ಸು:

ಮಹಾದೇವನನ್ನು ಹೊರತುಪಡಿಸಿ ಇನ್ಯಾರನ್ನೂ ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾಳೆ. ಆ ಶಿವನಿಗಾಗಿಯೇ ಕಠಿಣವಾದ ತಪಸ್ಸು ಮಾಡುತ್ತಾಳೆ. ತಪಸ್ಸಿನ ಕಾರಣಕ್ಕೆ ಆಕೆಯ ಮೈಬಣ್ಣ ಕಪ್ಪಾಗಿರುತ್ತದೆ. ಆದರೆ ತಪಸ್ಸಿಗೆ ಒಲಿದ ಶಿವನು ಆಕೆಯ ದೇಹವನ್ನು ಗಂಗೆಯ ಪವಿತ್ರ ಜಲದಿಂದ ತೊಳೆಯುತ್ತಾನೆ. ಆಗ ಅವಳ ದೇಹ ಪ್ರಕಾಶಮಾನವಾಗಿ ಹೊಳೆಯುತ್ತ ಬೆಳ್ಳಗಾಯಿತು. ಯಾವಾಗ ಈ ರೀತಿ ಆಕೆಯ ಮೈಬಣ್ಣವು ಬದಲಾಯಿತೋ ಆಗಿನಿಂದ ಅವಳ ಹೆಸರು ಗೌರೀ ಎಂದು ಬದಲಾಯಿತು ಎಂಬ ಪ್ರತೀತಿಯಿದೆ.

ಶರನ್ನವರಾತ್ರಿಯ ಎಂಟನೇ ದಿನದಂದು ಮಹಾಗೌರೀ ಆರಾಧನೆ ಮಾಡುವುದರಿಂದ ಸಕಲ ಸಂಚಿತ ಪಾಪಗಳು ನಿವಾರಣೆ ಆಗುತ್ತವೆ. ಅಷ್ಟೇ ಅಲ್ಲ, ಅಲ್ಲಿಂದ ಮುಂದೆ ಪಾಪ-ಸಂತಾಪ, ದುಃಖ, ದೈನ್ಯಾದಿಗಳು ಬರುವುದಿಲ್ಲ. ಯಾರು ಈ ದೇವಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಎಂದಿಗೂ ಕರಗದ ಪುಣ್ಯಕ್ಕೆ ಅಧಿಪತಿಗಳಾಗುತ್ತಾರೆ.

ಮಹಾಗೌರೀ ವಿಶೇಷ ಏನೆಂದರೆ, ಯಾರು ಏಕಾಗ್ರತೆಯಿಂದ ಈಕೆಯನ್ನು ಧ್ಯಾನ ಮಾಡುತ್ತಾರೋ ಅಂಥವರಿಗೆ ಅಲೌಕಿಕ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಭಕ್ತರ ಅದೆಂಥದ್ದೇ ಕಷ್ಟಗಳಿದ್ದರೂ ಅವಳು ದೂರ ಮಾಡುತ್ತಾಳೆ. ಯಾವ ಕೆಲಸ ಆಗುವುದೇ ಇಲ್ಲ ಎಂದು ಭಕ್ತರು ಅಂದುಕೊಂಡಿರುತ್ತಾರೋ ಅಂಥ ಕೆಲಸಗಳು ಸಹ ಸರಾಗವಾಗಿ ಆಗುತ್ತವೆ.

ಪುರಾಣಗಳಲ್ಲಿ ಈ ದೇವಿಯ ಮಹಿಮೆಯನ್ನು ತುಂಬ ಚೆನ್ನಾಗಿ ವಿವರಿಸಲಾಗಿದೆ. ಮನುಷ್ಯರಲ್ಲಿ ಇರುವಂಥ ಪ್ರವೃತ್ತಿಯನ್ನು ಉತ್ತಮದ ಕಡೆಗೆ ಒಯ್ಯುವ ಹಾಗೂ ಸಾಗುವ ಕಡೆಗೆ ಮನಸ್ಸು ನೀಡುವವಳು ಅದೇ ಮಹಾಗೌರೀ. ಆದ್ದರಿಂದ ಆ ದೇವಿಯಲ್ಲಿ ಶರಣಾಗತರಾಗಬೇಕು. ಹೀಗೊಂದು ಶರಣಾಗತ ಭಾವ ಮೂಡುವುದರಿಂದ ಆ ದೇವಿಯೇ ನಮ್ಮನ್ನು ರಕ್ಷಿಸುತ್ತಾಳೆ, ಪೊರೆಯುತ್ತಾಳೆ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ಸಹ ನೀಡುತ್ತಾಳೆ.

Dasara Special | ಪಾಪಗಳನ್ನು ಸಂಹರಿಸುವ ಕಾಲರಾತ್ರಿ: ನವರಾತ್ರಿ ಏಳನೇ ದಿನ

Dasara Special | ಸೌಭಾಗ್ಯ ನೀಡುವ ಕಾತ್ಯಾಯಿನಿ: ನವರಾತ್ರಿ ಆರನೇ ದಿನ

Dasara Special | ಸ್ಕಂದಮಾತೆಯ ಕೃಪಾದೃಷ್ಟಿ: ನವರಾತ್ರಿ ಐದನೇ ದಿನ

Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ

ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Mahagauri who bestows supernatural siddhis: Navratri is the eighth day
Share This Article
Facebook Twitter Copy Link Print
Previous Article Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್
Next Article ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ರತನ್ ಟಾಟಾ ಅಂತ್ಯಕ್ರಿಯೆ

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?