Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!
ಪ್ರಮುಖ

ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!

Share
2 Min Read
SHARE

newsics.com

ರಾಷ್ಟ್ರೀಯವಾದಿ ಉದ್ಯಮಿ ರತನ್‌ ಟಾಟಾ ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಕೆಲಸಗಳಿಗೆ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ. ಅಷ್ಟರಮಟ್ಟಿಗೆ ಭಾರತದಲ್ಲಿ ಬೇರೂರಿರುವ ಉದ್ಯಮ. ಇನ್ನು ದಿವಂಗತ ರತನ್ ಟಾಟಾ ಅವರಿಗೆ ಕರ್ನಾಟಕದ ಬಗ್ಗೆ ಭಾರೀ ಒಲವಿತ್ತು. ಹೂಡಿಕೆ ಮಾಡಲು ಕರ್ನಾಟಕ ಪ್ರಶಸ್ತ ಸ್ಥಳ ಎನ್ನುತ್ತಿದ್ದರು.

ಇನ್ನು ರತನ್ ಟಾಟಾ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ಬಹಳ ಪ್ರಿಯ. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಈ ಏರೋ ಶೋನಲ್ಲಿ ಅವರು ಫೈಟರ್ ಜೆಟ್ ಗಳನ್ನು ಏರಿ ಹೋಗುತ್ತಿದ್ದರು. ಇಳಿವಯಸ್ಸಿನಲ್ಲೂ ಅವರು ಸಮರ ಸೇನಾನಿಯಂತೆ ಭಾಸವಾಗುತ್ತಿತ್ತು. ಫೈಟರ್ ಜೆಟ್ ನಲ್ಲಿ ಕೂತು ಅದನ್ನು ಚಲಾಯಿಸುವುದಕ್ಕೆ ಚಾಲಾಕಿತನದ ಜೊತೆಗೆ ಗಂಡೆದೆಯೂ ಬೇಕು. ಇಂಥ ರೈಡ್ ಗಳನ್ನು ರತನ್ ಬಹಳ ಇಷ್ಟಪಡುತ್ತಿದ್ದರು.

ಉದ್ಯಮದ ಹೊರತಾಗಿ ತಮ್ಮ ಕೊಡುಗೈ ದಾನದಿಂದಲೂ ಜನಪ್ರಿಯರಾಗಿರುವ ರತನ್ ಟಾಟಾ ಹಿಂದೊಮ್ಮೆ ಎಫ್ -16 ಪೈಟರ್ ಜೆಟ್ ಹಾರಿಸಿ ಅಚ್ಚರಿ ಮೂಡಿಸಿದ್ದರು.

ಹೌದು, 2007ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಯಾರೂ ಊಹಿಸದ ಅಚ್ಚರಿಯೊಂದು ಎದುರಾಯಿತು. 70 ವರ್ಷದ ರತನ್ ಟಾಟಾ ಅವರು ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೆ ಗಂಟೆಗೆ 2,000 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸಬಲ್ಲ ಎಫ್-16 ಫೈಟರ್ ಜೆಟ್ ಅನ್ನು ಹಾರಿಸಿದ್ದರು. ಇದನ್ನು ಅಮೆರಿಕ ರಕ್ಷಣಾ ಗುತ್ತಿಗೆದಾರ ಲಾಕ್ಹೀಡ್ ಮಾರ್ಟಿನ್‌ ಕಮಾಂಡ್ ಮಾಡಿದ್ದರು. ರತನ್ ಟಾಟಾ ಸಹ-ಪೈಲಟ್ ಆಗಿದ್ದರು.

2011 ರಲ್ಲಿ ಇಂಥದ್ದೇ ಒಂದು ಶೋನಲ್ಲಿ ಅವರು ಎಫ್-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. 2020ರಲ್ಲಿ ಅವರು ಈ ಸಂದರ್ಭವನ್ನು ಮೆಲುಕು ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಂಬತ್ತು ವರ್ಷದ ಹಿಂದಿನ ಆ ಘಟನೆ ಈ ದಶಕದ ತನ್ನ ಅವಿಸ್ಮರಣೀಯ ಸಂದರ್ಭ ಎಂದು ಹೇಳಿದ್ದರು. ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಟಾಟಾ ಗ್ರೂಪ್ ನಿಂದ ಹಲವು ಯೋಜನೆಗಳು ಚಾಲನೆಯಲ್ಲಿವೆ.

ರತನ್ ಟಾಟಾ ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಮಾತ್ರವಲ್ಲದೆ ಒಬ್ಬ ಮಹಾನ್ ಲೋಕೋಪಕಾರಿ ಮತ್ತು ಸಮಾಜ ಸೇವಕ. ಟಾಟಾ ಟ್ರಸ್ಟ್ ಮೂಲಕ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳು ಬಡವರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುತ್ತವೆ.

ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ರತನ್ ಟಾಟಾ ಅಂತ್ಯಕ್ರಿಯೆ

Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್

ದೇಶದ ಹೆಮ್ಮೆಯ ಶ್ರೇಷ್ಠ ಉದ್ಯಮಿ ರತನ್ ಟಾಟಾ ಇನ್ನಿಲ್ಲ

ಬ್ರಿಟನ್ ರಾಜಮನೆತನದ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ; ಕಾರಣ?

TAGGED:Bangalore Air Show is Panchaprana for Ratan Tata
Share This Article
Facebook Twitter Copy Link Print
Previous Article 55 ವರ್ಷ ಕಿರಿಯ ವ್ಯಕ್ತಿ ಜತೆ ರತನ್‌ ಟಾಟಾ ಸ್ನೇಹ! ಆಪ್ತ ಗೆಳೆಯನ ನಡುವಿನ ಬಂಧ ಶುರುವಾಗಿದ್ದು ಹೇಗೆ..?
Next Article ಹಾಲಿನ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?