newsics.com/ನ್ಯೂಸಿಕ್ಸ್
ನವದೆಹಲಿ: ನೈಋತ್ಯ ಮಾನ್ಸೂನ್ ಮೇ 26ಕ್ಕೆ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮುನ್ಸೂಚನೆ ನೀಡಿದೆ.
ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಮಾನ್ಸೂನ್ ಆರಂಭವಾಗುತ್ತದೆ. ನಂತರ ಅದು ದೇಶದ ಉಳಿದ ಭಾಗಗಳನ್ನು ಆವರಿಸುತ್ತದೆ. ಇದು ದೇಶದಲ್ಲಿ ಮಾನ್ಸೂನ್ ಋತುವಿನ (ಜೂನ್‌ನಿಂದ ಸೆಪ್ಟೆಂಬರ್) ಆರಂಭವನ್ನು ಸೂಚಿಸುತ್ತದೆ. ಕಳೆದ ವರ್ಷ ಮಾನ್ಸೂನ್ ಮೇ 24ರಂದು ಪ್ರಾರಂಭವಾಗಿತ್ತು ಎಂದು ಇಲಾಖೆ ತಿಳಿಸಿದೆ.
ಈ ವರ್ಷ ನೈಋತ್ಯ ಮಾನ್ಸೂನ್ ಮೇ 26ರಂದು ಕೇರಳದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ ಮತ್ತು ಅದು ನಾಲ್ಕು ದಿನಗಳ ಮೊದಲು ಅಥವಾ ನಂತರ ಸಂಭವಿಸುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಇನ್ನು, ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಮುಂಗಾರು ಪ್ರವೇಶಿಸಲು ಅನುಕೂಲಕರ ಪರಿಸ್ಥಿತಿಗಳಿವೆ. ಭಾರತದ ಮುಖ್ಯ ಭೂಭಾಗದ ಮೇಲೆ ನೈಋತ್ಯ ಮಾನ್ಸೂನ್‌ನ ಮುನ್ನಡೆಯನ್ನು ಕೇರಳದಲ್ಲಿ ಮಾನ್ಸೂನ್ ಆರಂಭದಿಂದ ಗುರುತಿಸಲಾಗುತ್ತದೆ ಮತ್ತು ಇದು ಬಿಸಿ ಮತ್ತು ಶುಷ್ಕ ಋತುವಿನಿಂದ ಮಳೆಗಾಲಕ್ಕೆ ಪರಿವರ್ತನೆಗೊಳ್ಳುವ ಪ್ರಮುಖ ಸೂಚಕ ಎಂದು ಇಲಾಖೆ ಮಾಹಿತಿ ನೀಡಿದೆ.
ಮಾನ್ಸೂನ್ ಉತ್ತರದ ಕಡೆಗೆ ಸಾಗುತ್ತಿದ್ದಂತೆ, ಬೇಸಿಗೆಯ ಸುಡುವ ತಾಪಮಾನದಿಂದ ಈ ಪ್ರದೇಶಗಳಿಗೆ ಪರಿಹಾರ ದೊರೆಯುತ್ತದೆ. ನಾಲ್ಕು ತಿಂಗಳ ಮಾನ್ಸೂನ್ ಋತು ದೇಶದ ವಾರ್ಷಿಕ ಮಳೆಯ ಸುಮಾರು ಶೇ.70ರಷ್ಟನ್ನು ತರುತ್ತದೆ. ಇದು ಕೃಷಿ ಮತ್ತು ಬೆಳೆಗಳಿಗೆ ನಿರ್ಣಾಯಕವಾಗಿದೆ.
ಈ ವರ್ಷ ಮಾನ್ಸೂನ್ ಋತುವಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ಮಾನ್ಸೂನ್ ತಿಂಗಳುಗಳಲ್ಲಿ ದೇಶ 80 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ. ದೀರ್ಘಾವಧಿಯ ಸರಾಸರಿ (1971-2020) ಮಳೆ 87 ಸೆಂ.ಮೀ ಆಗಿದೆ. ಎಲ್ ನಿನೋ ಪರಿಸ್ಥಿತಿಗಳ ಹೊರಹೊಮ್ಮುವಿಕೆಯಿಂದ ಇದು ಸಂಭವಿಸಬಹುದು. ಇದು ದೇಶದಲ್ಲಿ ಕಡಿಮೆ ಮಳೆಗೆ ಕಾರಣವಾಗುತ್ತದೆ. ಮೇ 1ರಂದು ತನ್ನ ಮಾಸಿಕ ಮುನ್ಸೂಚನೆಯಲ್ಲಿ, ಸಮಭಾಜಕ ಪೆಸಿಫಿಕ್ ಮೇಲೆ ಎಲ್ ನಿನೋ-ದಕ್ಷಿಣ ಆಂದೋಲನ (ENSO)-ತಟಸ್ಥ ಪರಿಸ್ಥಿತಿಗಳು ಎಲ್ ನಿನೋ ಪರಿಸ್ಥಿತಿಗಳ ಕಡೆಗೆ ವಿಕಸನಗೊಳ್ಳುತ್ತಿವೆ ಎಂದು ಐಎಂಡಿ ಹೇಳಿದೆ.
Money showered on the singer ಭಕ್ತಿ ಗಾಯನಕ್ಕೆ ಮಾರುಹೋದ ಭಕ್ತರು: ಗಾಯಕನ ಮೇಲೆ ಹಣದ ಸುರಿಮಳೆ! ವಿಡಿಯೋ ನೋಡಿ
Shani amavasye ನಾಳೆ ಶನಿ ಅಮಾವಾಸ್ಯೆ: ಈ ಐದು ರಾಶಿಗಳ ಜನರಿಗೆ ಭಾರೀ ಸಂಕಷ್ಟ