Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Money showered on the singer ಭಕ್ತಿ ಗಾಯನಕ್ಕೆ ಮಾರುಹೋದ ಭಕ್ತರು: ಗಾಯಕನ ಮೇಲೆ ಹಣದ ಸುರಿಮಳೆ! ವಿಡಿಯೋ‌ ನೋಡಿ
ದೇಶಪ್ರಮುಖವೈರಲ್

Money showered on the singer ಭಕ್ತಿ ಗಾಯನಕ್ಕೆ ಮಾರುಹೋದ ಭಕ್ತರು: ಗಾಯಕನ ಮೇಲೆ ಹಣದ ಸುರಿಮಳೆ! ವಿಡಿಯೋ‌ ನೋಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಜುನಾಘಡ: ಧಾರ್ಮಿಕ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಶ್ರೀಮದ್ ಭಗವತ್ ಕಥಾವನ್ನು ಸುಶ್ರಾವ್ಯವಾಗಿ ಹಾಡಿದ ಜನಪದ ಗಾಯಕನಿಗೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಗೋಣಿ ಚೀಲದಲ್ಲಿ ತಂದು ಹಣ ಸುರಿದಿದ್ದಾರೆ. ಭಕ್ತರು ಸುರಿದ ನೋಟುಗಳ ಕಂತೆಯಲ್ಲಿ ಗಾಯಕ ಮುಳುಗಿ ಹೋಗಿದ್ದಾನೆ. ಆದರೂ ತನ್ನ ಶ್ರೀಮದ್ ಭಗವತ್ ಕಥಾ ನಿಲ್ಲಿಸದೆ ಹಾಡಿದ ಘಟನೆ ಗುಜರಾತ್‌ನ ಜುನಾಘಡ ಜಿಲ್ಲೆಯಲ್ಲಿ ನಡೆದಿದೆ.

ಜುನಾಘಡದಲ್ಲಿ ಆಯೋಜಿಸಲಾಗಿದ್ದ ಒಂದು ವಾರದ ಶ್ರೀಮದ್ ಭಗವತ್ ಕಥಾ ಪುರಾಣ ಕಾವ್ಯ ಕಾರ್ಯಕ್ರಮದಲ್ಲಿ ಜನಪದ ಗಾಯಕ ಜಿಗ್ನೇಶ್ ಕವಿರಾಜ್ ಪುರಾಣ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಜಿಗ್ನೇಶ್ ಕವಿರಾಜ್ ಕಂಠಕ್ಕೆ ಭಕ್ತರು ಭಕ್ತಿ ಪರಕಾಷ್ಠೆಯಲ್ಲಿ ಮುಳುಗಿದ್ದಾರೆ. ಈ ವೇಳೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕಂಬಾಲಿಯಾ ಗ್ರಾಮದಲ್ಲಿ ಅಹಿರ್ ಸಮಾಜ್ ಹಾಗೂ ಪ್ರಯಾಗರಾಜ್ ಗ್ರೂಪ್ ಒಂದು ವಾರಗಳ ಶ್ರೀಮದ್ ಭಗವತ್ ಕಥಾ ಕಾರ್ಯಕ್ರಮ ಆಯೋಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಶ್ರೀಕೃಷ್ಣನ ಭಜನೆ, ಪುರಾಣ ಕಾವ್ಯಗಳನ್ನು ಹಾಡಲಾಗಿತ್ತು. ಈ ಪೈಕಿ ಒಂದು ದಿನ ಸಂಜೆ ಜನಪದ ಗಾಯಕ ಜಿಗ್ನೇಶ್ ಕವಿರಾಜ್ ಹಾಗೂ ತಂಡ ಶ್ರೀಕೃಷ್ಣನ ಜನಪದ ಗೀತೆಯ, ಪುರಾಣ ಕಾವ್ಯಗಳನ್ನು ಹಾಡಿತ್ತು. ಗುಜರಾತ್‌ನ ಜನಪ್ರಿಯ ಆಧ್ಯಾತ್ಮಿಕ ಡೈರೋ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ವೇಳೆ ಜಿಗ್ನೇಶ್ ಕವಿರಾಜ್ ಸತತ ಒಂದೂವರೆ ಗಂಟೆ ನಿರಂತರವಾಗಿ ಶ್ರೀಕೃಷ್ಣನ ಲೀಲೆಗಳನ್ನು ತಮ್ಮ ಸುಮಧುರ ಕಂಠದಿಂದ ಹಾಡಿದ್ದರು. ಭಕ್ತರು ಭಕ್ತಿಯಲ್ಲಿ ಮುಳಿಗಿದ್ದರು. ಜೊತೆಗೆ ಹಲವು ಭಕ್ತರು ಕುಣಿದು ಭಕ್ತಿ ಭಾವಪ್ರದರ್ಶಿಸಿದ್ದರು.

ಅಂತಿಮ ಹಂತ ತಲುಪುತ್ತಿದ್ದಂತೆ ಭಕ್ತರು ಜಿಗ್ನೇಶ್ ಕವಿರಾಜ್ ಮೇಲೆ ಹಣ ತಂದು ಸುರಿದಿದ್ದಾರೆ. ಒಬ್ಬೊಬ್ಬ ಭಕ್ತರು ಗೋಣಿ ಚೀಲದಲ್ಲಿ ಹಣ ತಂದು ಸುರಿದಿದ್ದಾರೆ. ನೋಟುಗಳಿಂದ ಜಿಗ್ನೇಶ್ ಕವಿರಾಜ್ ಮುಳುಗಿ ಹೋಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದೇ ವೇಳೆ ಕೆಲವರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ವಿದೇಶಿ ವಿನಿಮಯ ಸಮಸ್ಯೆ, ತೈಲ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗಳ ನಡುವೆ ಹಣದ ಸುರಿಮಳೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಅಸಲಿ ಕಾರಣ ತಿಳಿದ ಜನ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಹಿರ್ ಸಮಾಜ ಬಾಲಕಿಯ ಹಾಸ್ಟೆಲ್ ನಿರ್ಮಾಣ ಮಾಡುತ್ತಿದೆ. ಸಮುದಾಯದ ಬಡ ಮಕ್ಕಳಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದೆ. ಜಿಗ್ನೇಶ್ ಕವಿರಾಜ್ ಕೂಡ ಇದಕ್ಕೆ ಕೈಜೋಡಿಸಿದ್ದಾರೆ. ಇದರ ಅಂಗವಾಗಿ ಜಿಗ್ನೇಶ್ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಕ್ತರು ಹಣದ ಸುರಿಮಳೆ ಮಾಡಿದ್ದಾರೆ. ಇಲ್ಲಿ ಸಂಗ್ರವಾದ ಹಣವನ್ನು ಅಹಿರ್ ಸಮಾಜದ ಬಾಲಕಿಯ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

Watch | A singer was nearly buried under a shower of currency notes during a Dayro event in Gujarat. The video is from last night’s performance at a Shrimad Bhagwat Saptah in Khambhaliya, Dwarka district. Organisers announced that after covering the event’s operational expenses,… pic.twitter.com/C3MQY3ht28

— DeshGujarat (@DeshGujarat) May 15, 2026

TAGGED:Devotees captivated by devotional singing: Singer showered with money! Watch the video
Share This Article
Facebook Twitter Copy Link Print
Previous Article Highcourt verdict ಭೋಜಶಾಲಾ ಸರಸ್ವತಿ ಮಂದಿರಕ್ಕೆ ಸೇರಿದ್ದು, ಮಸೀದಿಗೆ ಪರ್ಯಾಯ ಭೂಮಿ: ಎಂಪಿ ಹೈಕೋರ್ಟ್ ತೀರ್ಪು
Next Article Kiyoko Iphone case ಐಫೋನ್ ಕೇಸ್ ಮಾರಲು ಕಿಯೋಕೊ ಕಂಪನಿ ಕಟ್ಟಿದ ಬೆಂಗಳೂರಿನ ದಂಪತಿ! ಆರೇ ತಿಂಗಳಲ್ಲಿ 16 ಲಕ್ಷ ಸಂಪಾದನೆ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?