Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Kidnap attempt ಪಿಯು ವಿದ್ಯಾರ್ಥಿನಿ ಕಿಡ್ನ್ಯಾಪ್‌ಗೆ ಯತ್ನ, ಬಾಲಕಿಗೆ ಗಾಯ, ಆಸ್ಪತ್ರೆಗೆ ದಾಖಲು, ಬೆಳ್ತಂಗಡಿಯಲ್ಲಿ ಆತಂಕ
ಕರ್ನಾಟಕಪ್ರಮುಖ

Kidnap attempt ಪಿಯು ವಿದ್ಯಾರ್ಥಿನಿ ಕಿಡ್ನ್ಯಾಪ್‌ಗೆ ಯತ್ನ, ಬಾಲಕಿಗೆ ಗಾಯ, ಆಸ್ಪತ್ರೆಗೆ ದಾಖಲು, ಬೆಳ್ತಂಗಡಿಯಲ್ಲಿ ಆತಂಕ

Share
1 Min Read
SHARE

https://youtube.com/shorts/s_4DpSB4DuI?si=4AZmgba8KEPzCEfP

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಳ್ತಂಗಡಿ(ದಕ್ಷಿಣ ಕನ್ನಡ): ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬಲವಂತವಾಗಿ ಕಾರಿಗೆ ಎಳೆದು ಹಾಕಲು ಸಾಧ್ಯವಾಗದಿದ್ದಾಗ ವಿದ್ಯಾರ್ಥಿನಿಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಎಂದಿನಂತೆ ತನ್ನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ನಿರ್ಜನ ಪ್ರದೇಶವೊಂದರಲ್ಲಿ ಇಕೋ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಸ್ಕೂಟಿಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ಬಂದ ಮೂವರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎನ್ನಲಾಗಿದೆ.

ಕಾರಿನಿಂದ ಇಳಿದ ಮುಸುಕುಧಾರಿಗಳು, ಬಾಲಕಿಗೆ ಚೂರಿ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ, ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಕಾರಿನೊಳಗೆ ಕೂರಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ ಧೈರ್ಯಗೆಡದ ವಿದ್ಯಾರ್ಥಿನಿ ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ವಿಚಲಿತರಾದ ದುಷ್ಕರ್ಮಿಗಳು ಆಕೆಯ ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.

ವಿದ್ಯಾರ್ಥಿನಿ ಸಂಕಷ್ಟದಲ್ಲಿದ್ದಾಗಲೇ ಆ ರಸ್ತೆಯಲ್ಲಿ ದೈವದೂತನಂತೆ ಅಬ್ಬುಸಾಲಿ ಎಂಬುವರು ಆಗಮಿಸಿದ್ದಾರೆ.

ಹಿಂದಿನಿಂದ ಬರುತ್ತಿದ್ದ ಅಬ್ಬುಸಾಲಿ ಅವರನ್ನು ಕಂಡ ತಕ್ಷಣ, ಸಿಕ್ಕಿಬೀಳುವ ಭಯದಿಂದ ಮೂವರು ಆರೋಪಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಪಂದಿಸಿದ ಅಬ್ಬುಸಾಲಿ ಅವರು, ಭಯಭೀತಗೊಂಡಿದ್ದ ಮತ್ತು ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಹಲ್ಲೆಕೋರರು ಬಳಸಿದ ಇಕೋ ಕಾರಿನ ಪತ್ತೆಗೆ ಬಲೆ ಬೀಸಿದ್ದಾರೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಪಟ್ಟಣದ ಸಮೀಪವೇ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ನಡೆದಿರುವುದು ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದಾಗಲೇ ಸ್ವಾಮೀಜಿ ಲಾಕ್ ಮಾಡಿಕೊಂಡ ಆಂಟಿ! ಮರ್ಯಾದೆಗೆ ಅಂಜಿ ಸುಚಿತ್ರಾಳ ದಾಸನಾದ ಕಮಲಾಕರ್ ಭಟ್

GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?

5 ವರ್ಷದ ಪುಟ್ಟ ಬಾಲಕನ ಜತೆ ಮೋನಿಕಾ ಹಾಡಿಗೆ ಡಾನ್ಸ್ ಮಾಡಿದ ಪೂಜಾ ಹೆಗ್ಡೆ! ವಿಡಿಯೋ ನೋಡಿ

TAGGED:admitted to hospitalgirl injuredpanic in BelthangadyPU student attempted to kidnap
Share This Article
Facebook Twitter Copy Link Print
Previous Article GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?
Next Article ಮೊಡವೆಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು?

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಮನರಂಜನೆ

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read
ಪ್ರಮುಖಕರ್ನಾಟಕಮನರಂಜನೆ

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪ್ರಮುಖದೇಶವಿದೇಶ

FIFA World Cup 2026 ಫಿಫಾ ವಿಶ್ವಕಪ್ ಫೈನಲ್; ಜುಲೈ 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?