https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ‘ಮೋನಿಕಾ’ ಹಾಡು ಬಿಡುಗಡೆಯಾದಾಗಿನಿಂದಲೇ ಭಾರೀ ಜನಪ್ರಿಯತೆ ಗಳಿಸಿತ್ತು.
ನೂರಾರು ಡ್ಯಾನ್ಸರ್ಸ್ ಜೊತೆ ಈ ಹಾಡಿಗೆ ಪೂಜಾ ಹೆಗ್ಡೆ ಮತ್ತು ಸೌಬಿನ್ ಶಾಹಿರ್ ಕುಣಿದು ರಂಗೇರಿಸಿದ್ದ ದೃಶ್ಯಗಳು ಸಿನಿರಸಿಕರನ್ನು ಮೋಡಿ ಮಾಡಿದ್ದವು.
ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ, ಇದೀಗ ಕೇವಲ 5 ವರ್ಷದ ಪುಟ್ಟ ಬಾಲಕನೊಬ್ಬ ‘ಮೋನಿಕಾ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಯೂಟ್ಯೂಬ್‌ನಲ್ಲಿ ‘ಮೋನಿಕಾ’ ಸಾಂಗ್ ಕೋಟಿ ಕೋಟಿ ವೀವ್ಸ್, ಲೈಕ್ಸ್ ಗಿಟ್ಟಿಸಿತ್ತು. ಇನ್ನು ಸೋಶಿಯಲ್ ಮೀಡಿಯಾ ರೀಲ್ಸ್ ರೂಪದಲ್ಲಿ ಸಖತ್ ಸದ್ದು ಮಾಡಿತ್ತು. ಕಾರ್ಯಕ್ರಮವೊಂದರಲ್ಲಿ ಚಿಕ್ಕ ಬಾಲಕನ ಜೊತೆ ಪೂಜಾ ಹೆಗ್ಡೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಆದರೆ ಆತನ ಡ್ಯಾನ್ಸ್ ಮೂವ್ಸ್ ನೋಡಿ ಆಕೆ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಸ್ಯಾಂಡಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ‘ಮೋನಿಕಾ’ ಸಾಂಗ್ ಸಖತ್ ಸದ್ದು ಮಾಡಿತ್ತು. ಪೂಜಾಗಿಂತ ಸೌಬಿನ್ ಶಾಹಿರ್ ಸ್ಟೆಪ್ಸ್ ನೋಡುಗರ ಗಮನ ಸೆಳೆದಿತ್ತು. ಸದ್ಯ ಪುಟ್ಟ ಬಾಲಕ ಡ್ಯಾನ್ಸ್, ಗ್ರೇಸ್, ಎನರ್ಜಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಪೂಜಾ ಹೆಗ್ಡೆ ಅಭಿಮಾನಿಗಳು ಈ ವೀಡಿಯೋ ವೈರಲ್ ಮಾಡುತ್ತಿದ್ದಾರೆ.
https://x.com/i/status/2020350044902420903
https://www.instagram.com/reel/DUe_yPEEgDI/?igsh=MTJtc3B3dGxsZmhkcQ==
ಲಂಡನ್‌ನಲ್ಲಿ ಪಾನಿಪೂರಿ ಉದ್ಯಮ ಆರಂಭಿಸಿದ ಭಾರತೀಯ ದಂಪತಿ – ಒಂದು ಪ್ಲೇಟ್ ಪಾನಿಪೂರಿಗೆ 6000 ರೂ.