https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ಪಾನಿಪೂರಿಗೆ 6000 ರೂ, ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ ಇದು. ಭಾರತೀಯ ದಂಪತಿ ಲಂಡನ್‌ನಲ್ಲಿ ಇದೀಗ ಪಾನಿಪೂರಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.
ಅಂಕಿತಾ ಖಾಂಟೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶದ ಅಮನ್ ಕೃಷ್ಣ ಜೊತೆ ಅಂಕಿತಾ ಮದುವೆಯಾಗಿದ್ದರು. ಬಳಿಕ ಇವರ ಜೀವನ ಸಾಗುತ್ತಿತ್ತು. ಇದರ ನಡುವೆ ಪತಿ ಅಮನ್ ಕೃಷ್ಣಾಗೆ ಲಂಡನ್‌ನಿಂದ ಡೇಟಾ ಸೈಂಟಿಸ್ಟ್ ಉದ್ಯೋಗ ಆಫರ್ ಬಂದಿತ್ತು. ಕೈತುಂಬ ವೇತನದ ಉದ್ಯೋಗದ ಕಾರಣ ಈ ದಂಪತಿಗೆ ಲಂಡನ್‌ಗೆ ಸ್ಥಳಾಂತರಗೊಂಡಿದ್ದರು.
ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಇಷ್ಟಪಡದ ಅಂಕಿತಾಗೆ ಏನಾದರೂ ಹೊಸದಾಗಿ ಆರಂಭಿಸುವ ಛಲವಿತ್ತು. ಲಂಡನ್‌ನಲ್ಲಿ ಭಾರತೀಯ ಆಹಾರಕ್ಕೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಏಷ್ಯಾದ ಚಾಟ್ಸ್‌ಗಳಿಗೆ ಇರುವ ಬೇಡಿಕೆಯನ್ನು ಅವರು ಗಮನಿಸಿದರು. ಆರಂಭದಲ್ಲಿ ಪತಿ ಅಮನ್ ಈ ಪ್ಲಾನ್‌ಗೆ ಒಪ್ಪಿರಲಿಲ್ಲ. ಆದರೆ ಅಂಕಿತಾ, ಅವರನ್ನು ಒತ್ತಾಯಿಸಿದ್ದರು ಬಳಿಕ ಅವರೂ ಸಾಥ್ ನೀಡಿದರು.
ತನ್ನ ಭಾರತೀಯ ಗೆಳೆಯರ ಬಳಗಕ್ಕೆ ಮನೆಯಲ್ಲೇ ಪಾನಿಪೂರಿ, ಡೋಕ್ಲಾ ಮತ್ತು ಕಡಿಯಂತಹ ಆಹಾರಗಳನ್ನು ಮಾಡಿ ಕೊಡುತ್ತಿದ್ದ ಅಂಕಿತಾ, ನಂತರ ಇದನ್ನು ವೃತ್ತಿಪರವಾಗಿ ಆರಂಭಿಸಿದರು. ಲಂಡನ್‌ನ ಪ್ರತಿಷ್ಠಿತ ವಲಯದಲ್ಲಿ ‘ದಿ ಬೌಜಿ ಕ್ಲಬ್’ ಎಂಬ ರೆಸ್ಟೋರೆಂಟ್ ತೆರೆದರು. ಇದು ಕೇವಲ ಹೋಟೆಲ್ ಅಲ್ಲ, ಲಂಡನ್‌ನಲ್ಲಿರುವ ಭಾರತೀಯರನ್ನು ಒಗ್ಗೂಡಿಸುವ ಒಂದು ಸಾಂಸ್ಕೃತಿಕ ತಾಣವಾಗಿ ಬದಲಾಯಿತು.
ಪಾನಿಪೂರಿ ಸೇರಿದಂತೆ 7 ಬಗೆ ಚಾಟ್ಸ್‌ಗೆ ದಿ ಬೌಜಿ ಕ್ಲಬ್ ರೆಸ್ಟೋರೆಂಟ್‌ನಲ್ಲಿ ಇಲ್ಲಿನ 6,000 ರೂಪಾಯಿ. ಆದರೆ ಲಂಡನ್‌ನಲ್ಲಿ ರುಚಿ ರುಚಿಯ ಪಾನಿಪೂರಿ ಸೇರಿ ಇತರ ಚಾಟ್ಸ್ ಲಭ್ಯವಾಗುವುದೇ ಇಲ್ಲ. ಹೀಗಾಗಿ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಬೆಲೆಗಿಂತ ರುಚಿಕರ ಸ್ವಾದವೇ ಮುಖ್ಯವಾಗಿತ್ತು. ಕೆಲವೇ ದಿನಗಳಲ್ಲಿ ದಿ ಬೌಜಿ ಕ್ಲಬ್ ಉದ್ಯಮ ಭರ್ಜರಿ ಆದಾಯಗಳಿಸುತ್ತಿದೆ.
https://www.instagram.com/p/DUTDEMlkzYv/?igsh=MTl6emhkNXMyY2Rw